By shukradeshe news Editor m rajappa Vyasagondanahalli
ಶುಕ್ರದೆಸೆ ವಿಶೇಷ ವರದಿ ಸಂಪಾದಕ ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ
ಜೆ ಎಲ್ ಆರ್ ನ್ಯೂಸ್ ಕನ್ನಡ. 9
ಕ್ಷೇತ್ರದಲ್ಲಿ ಕಸಗೂಡಿಸಿದ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ವೀಕೆಂಡ್ ಭಾನುವಾರ ಪೂರಕೆ ಹಿಡಿದು ಸ್ವಚತೆಗೆ ಆದ್ಯತೆ ನೀಡಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಬೆಳ್ಳಬೆಳಿಗ್ಗೆ ಸಿಟಿ ರೌಂಡ್ಸ್ ಮಾಡಿದ ಶಾಸಕರು ತಾಲ್ಲೂಕು ಆಡಳಿತದ ಧಿಕಾರಿಗಳಿಗೆ ಹಾಗೂ ಪಪಂ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು
.
ಸಾಮಾನ್ಯರಂತೆ ಜನರ ಕುಶಲೋಪರಿ ವಿಚಾರಿಸುತಾ ಬೀದಿಯಲ್ಲಿ ಸಂಚಾರಿಸಿ ಬಾರ್ ಮಾಲಿಕರಿಗೆ ಎಲ್ಲೆಂದರೆ ಅಲ್ಲೆ ಕಸ ಎಣ್ಣಿ ಬಾಟಲಿ ಹಾಕದಂತೆ ಎಚ್ಚರಿಕೆ ನೀಡಿದರು.
ಒಂದು ಡಸ್ಟ್ ಬಿನ್ ಬಳಕೆ ಮಾಡಿ ಎಂದು ಶಿವ ಲಿಕ್ಕರ್ ಬಾರ್ ಮಾಲಿಕರಿಗೆ ಕರೆ ಮಾಡಿ ತರಾಟೆ ತೆಗೆದುಕೊಂಡ ಪ್ರಸಂಗ ಜರುಗಿತು.
ಜಗಳೂರು ಪಟ್ಟಣದ ಇತಿಹಾಸದಲ್ಲಿಯೇ ಒಬ್ಬ ಅಚ್ಚರಿ ನಾಯಕ ಶಾಸಕನಾಗಿರುವ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಎಂದರೆ ಅದೇ ಸ್ಪಷಾಲಿಟಿ ಇವರು ಪ್ರಥಮ ಬಾರಿಗೆ ಶಾಸಕ ಸ್ಥಾನಕ್ಕೆ ಆಯ್ಕೆಯಾದ ದಿನಗಳಲ್ಲಿ ಕ್ಷೇತ್ರ ಅಭಿವೃದ್ಧಿಗೆ ಸಂಕಲ್ಪ ಮಾಡಿದಂತೆ ಪ್ರತಿ ತಿಂಗಳು ಒಂದು ದಿನ ನಗರದ ಸ್ವಚತೆಗೆ ಮುಂದಾಗಿ ತಾವೆ ಪೌರ ನೌಕರರೊಂದಿಗೆ ಪೊರಕೆ ಹಿಡಿದು ಕಸಗೂಡಿಸಲು ಮುಂದಾಗಿ ನಗರದ ಸ್ವಚತೆ ಮಾಡುವ ಮೂಲಕ ತಾಲ್ಲೂಕಿನ ಅಧಿಕಾರಿಗಳಿಗೆ ಸ್ವಚತೆ ಮತ್ತು ಕ್ಷೇತ್ರದಲ್ಲಿ ಸ್ವಚಂದ ಆಡಳಿತ ನೀಡಲು ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದಂತೆ ಎರಡನೇ ತಿಂಗಳಲ್ಲಿ ಪುನ ಕಸ ಗೂಡಿಸಿ ಪೌರ ಸ್ವಚಗಾರರಿಗೆ ಆತ್ಮಸ್ಥೈರ್ಯ ತುಂಬಿದರು ತರಕಾರಿ ಮಾರಾಟಗಾರರಿಗೆ ಬೇಕಾಬಿಟ್ಟಿ ಕಸ ಹಾಕಬೇಡಿ ಪಪಂ ಇಲಾಖೆ ವಾಹನಗಳಿಗೆ ಹಾಕುವಂತೆ ಜಾಗೃತಿ ಮೂಡಿಸಿದರು..
ಇವರು ಮೂಲತ ಡಿ ಗ್ರೂಪ್ ನೌಕರರಾಗಿ ಸಲ್ಲಿಸಿದ ಸೇವೆಯಂತೆ ಜವಾನನ ಕೆಲಸವು ಗೊತ್ತು ದಿವಾನರ ಕೆಲಸಕ್ಕೂ ಸೈ ಎನ್ನುವಂತೆ ಭಾನುವಾರ ಬೆಳ್ಳಬೆಳಿಗ್ಗೆ ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ತಾವೆ ಪೂರಕೆ ಹಿಡಿದು ಶಾಸಕರು ಕಸಗೂಡಿಸಿದರು.
ಜನಸಾಮಾನ್ಯರಂತೆ ಇಂದಿರಾ ಕ್ಯಾಂಟಿನ್ ನಲ್ಲಿ ತಿಂಡಿ ಸವಿದ ಶಾಸಕರು.
.ಕಸಗೂಡಿಸಿ ನಂತರ ಬಾಲಕರ ಪ್ರೌಢಶಾಲಾ ಆವರಣದಲ್ಲಿರುವ ಇಂದಿರಾ ಕ್ಯಾಂಟಿನ್ ಗೆ ತೆರಳಿ ಅಲ್ಲಿಯೇ ಜನಸಾಮಾನ್ಯರಂತೆ ತಿಂಡಿ ತಿಂದು ಟಿ ಕುಡಿದು ಸರಿಯಾದ ರೀತಿ ಕ್ಯಾಂಟಿನ್ ನಿರ್ವಹಣೆ ಮಾಡುವಂತ ಗುತ್ತಿಗೆದಾರರಿಗೆ ಸಿಬ್ಬಂದಿಗಳಿಗೆ ಕಿವಿ ಮಾತು ಹೇಳಿದರು. ಕ್ಯಾಂಟಿನ್ ನಲ್ಲಿ ತಾವುಗಳು ಸಾರ್ವಜನಿಕರಿಗೆ ಸರಿಯಾದ ರೀತಿ ತಿಂಡಿ ನೀಡಿ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಉಚಿತ ಗಂಜಿ ವಿತರಿಸಿ ಗಂಜಿ ಸಕ್ಕರೆಗೆ ಬರುವ ವೆಚ್ಚವನ್ನ ನನ್ನ ಸ್ವಂತ ಹಣದಿಂದ ಬರಿಸುವೆ ಎಂದು ತಿಳಿಸಿದರು..
ಒಟ್ಟಾರೆ ಕ್ಷೇತ್ರದ ಶಾಸಕರು ವಿಧಾನ ಸೌಧದಲ್ಲಿ ಅಧಿವೇಶನ ಬಜೆಟ್ ಸಭೆ ಮುಗಿಸಿಕೊಂಡು ರಜಾ ಅವಧಿಯಲ್ಲಿ ಕ್ಷೇತ್ರಕ್ಕೆ ತೆರಳಿದ ಶಾಸಕರು ಬಾನುವಾರ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ ತಾಲ್ಲೂಕಿನ ಪ್ರತಿ ಇಲಾಖೆ ಅಧಿಕಾರಿಗಳು ಸರ್ಕಾರಿ ಕೆಲಸವನ್ನ ಪ್ರಮಾಣಿಕವಾಗಿ ಸಲ್ಲಿಸಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕ್ಷೇತ್ರದ ಜನತೆಗೆ ಒದಗಿಸಲು ನಿರಂತರ ಸೇವೆ ಮಾಡುವಂತೆ ಸೂಚನೆ ನೀಡಿ ಶಾಸಕರ ಜನ ಸಂಪರ್ಕ ಕಛೇರಿಯಲ್ಲಿ ಸಾರ್ವಜನಿಕ ಆಹಾವಲುಗಳುನ್ನು ಸ್ವಿಕರಿಸಿದರು.
ವಿದ್ಯುತ್ ಸ್ವರ್ಶದಿಂದ ಸಾವನ್ನಪ್ಪಿದ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಶಾಸಕ
ಸರ್ಕಾರಿ ಆಸ್ಪತ್ರೆ ಶವಗಾರ ಕೊಠಡಿಗೆ ಬೇಟ್ಟಿ ನೀಡಿ ವಿದ್ಯುತ್ ಸ್ವರ್ಶದಿಂದ ಸಾವನ್ನಪ್ಪಿದ ಹನುಮಂತಾಪುರ ಗ್ರಾಮದ ಬಸವರಾಜಪ್ಪ ಎಂಬ ವ್ಯಕ್ತಿ ಜಮಿನಿನಲ್ಲಿ ಹುಲ್ಲು ಕೊಯ್ಯಲು ಹೋದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶದಿಂದ ಮರಣ ಹೊಂದಿದ ಕುಟುಂಬಕ್ಕೆ ಶವವನ್ನು ತುರ್ತಾಗಿ ಶವ ಪರೀಕ್ಷೆ ನಡೆಸಿ ಕುಟುಂಬದವರಿಗೆ ಅಸ್ತಂತರಿಸಿ ಎಂದು ವೈದ್ಯರುಗಳಿಗೆ ಚುರುಕು ಮುಟ್ಟಿಸಿದರು. ನೊಂದ ಕುಟುಂಬದವರಿಗೆ ಶಾಸಕರು ಸಾಂತ್ವನ ಹೇಳಿ ಆ ಕುಟುಂಬಕ್ಕೆ 20.000 ಸಹಾಧನ ನೀಡಿ ತದ ನಂತರ. ಆಸ್ಪತ್ರೆ ಸುತ್ತ ಮುತ್ತಲು ಇರುವ ಗಿಡ ಗಂಟೆಗಳು ಬೆಳೆದು ನಿಂತಿರುವ ಕಸತ್ಯಾಜ್ಯವನ್ನು ನೋಡಿದ ಅವರು ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಂತಾಗಿದೆ ಸ್ವಚತೆ ಮಾಡಲು ಏಕೆ ವಿಫಲರಾಗಿದ್ದಿರಿ ಎಂದು ತಾಲ್ಲೂಕು ವೈದ್ಯಧಿಕಾರಿ ನಾಗರಾಜ್ ರವರಿಗೆ ಪ್ರಶ್ನೆಸಿ ತರಾಟೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬ್ಲಾಕ್ ಅದ್ಯಕ್ಷರಾದ ಷಂಷೀರ್ ಆಹಮದ್. ಪಟ್ಟಣದ ಪಂಚಾತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್. ಪಪಂ ಸದಸ್ಯರಾದ ರಮೇಶ್ ರೆಡ್ಡಿ.ರವಿಕುಮಾರ್.ಶಕೀಲ್ ಆಹಮದ್. ಸಣ್ಣ ತಾನಾಜಿ ಗೋಸಾಯಿ.ಉಪನ್ಯಾಸಕರಾದ ತಿಪ್ಪೇಸ್ವಾಮಿ. ಷಂಷೀದ್ದಿನ್.ಮುಖಂಡ ನಾಗರಾಜ್.