By shukradeshe news. July 10 jlr
ಆಪಘಾತ ಸುದ್ದಿ
ಪಾದಾಚಾರಿ ಗೊಲ್ಲರಹಟ್ಟಿ ನಿವಾಸಿ ಹೊನ್ನುರುಸಾಬ್ ಬೆಳ್ಳ ಬೆಳಿಗ್ಗೆ ಆಪಘಾತದಿಂದ ಸಾವು
ಪಟ್ಟಣದ ಗಾಂಧಿ ವೃತ್ತದಲ್ಲಿ ಬೆಳ್ಳಬೆಳಿಗ್ಗೆ ಅಪಘಾತಕ್ಕಿಡಾದ ಸುಮಾರು 60 ವರ್ಷದ ವಯೋ ವೃದ್ದ ಹೊನ್ನುರುಸಾಬ್ ತಂದೆ ಖಾಸಿಂಸಾಬ್ ಇಂದು ಬೆಳ್ಳಿಗ್ಗೆ 7 ಗಂಟೆ ಸಮಯದಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಟಾಟಾ ಮೋಟರ್ ಗೂಡ್ಸ್ ಟೆಂಪೋವೊಂದು ವೃದ್ದನಿಗೆ ಡಿಕ್ಕಿ ಹೊಡೆದಿದೆ.ಇವರು ಮೂಲತ ಗೊಲ್ಲರಹಟ್ಟಿ ನಿವಾಸಿ ಹೊನ್ನುರ್ ಸಾಬ್ ಎಂದು ತಿಳಿದು ಬಂದಿದೆ.
ತರಕಾರಿ ಮಾರಾಟ ಮಾಡುತ್ತಿದ್ದ ಮಾಲಿಕ ಜೈಯ್ಯಣ್ಣ ಎಂಬುವರು ನಾಯಕನಹಟ್ಟಿಯಿಂದ ತರಕಾರಿ ತರಲು ಹೋಗಿದ್ದ ಟೆಂಪೋ ಅದೆ ಸಮಯದಲ್ಲಿ ಗಾಂಧಿ ವೃತ್ತಕ್ಕೆ ಪ್ರವೇಶವಾಗಿದೆ ರಸ್ತೆ ಬದಿಯಲ್ಲಿ ಸಂಚಾರಿಸುತ್ತಿದ್ದ ವೃದ್ದನ ಮೇಲೆ ರಬಸವಾಗಿ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಮತ್ತು ದೇಹಕ್ಕೆ ಬಲವಾದ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ದಾವಣಗೆರೆ ಆಸ್ಪತ್ರೆಗೆ ಕರೆದೂಯ್ಯಲಾಗಿದೆ.ಆದರೆ ಚಿಕಿತ್ಸೆ ಫಲಕಾರಿಯಾಗದೆ ಹೊನ್ನುರುಸಾಬ್ ಸಾವನ್ನಪ್ಪಿರುತ್ತಾರೆ.
ಚಾಲನೆ ಮಾಡುವ ಸಂದರ್ಭದಲ್ಲಿ ಟೆಂಪೋ (ಕ್ರಾಸ್ )ತಿರುಗಿಸಿಕೊಳ್ಳುವ ವೇಳೆಯಲ್ಲಿ ಚಾಲಕನ ಅಜಾಗರೂಕತೆಯಿಂದ ಪಾದಚಾರಿ ಹೊನ್ನುಸಾಭ್ ರವರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. .ಘಾಯಳು ಹೊನ್ನುಸಾಭ್ ರವರುನ್ನು ದಾವಣಗೆರೆ ನಗರದ ಆಸ್ಪತ್ರೆಗೆ ದಾಖಲಿಸಿ ಸಂಬಂಧಿಕರು ಚಿಕಿತ್ಸೆ ಕೋಡಿಸಲು ಮುಂದಾಗಿದ್ದಾರೆ ಆದರೆ ಚಿಕಿತ್ಸೆ ಫಲಕಾರಿಯಾಗದೆ ವೃದ್ದ ಸಾವನ್ನಪ್ಪಿರುತ್ತಾರೆ ಎಂದು ತಿಳಿದು ಬಂದಿದೆ ಈ ಸಂಬಂಧವಾಗಿ ಪಟ್ಟಣದಲ್ಲಿರುವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಸ್ಥಳಕ್ಕೆ ಪಿ ಎಸ್ ಐ ಸಾಗರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
. .