ಜಗಳೂರು ಸುದ್ದಿ:-
By shukradeshe news Kannada July 11 Editor m rajappa m Vyasagondanahalli
ಸಾರ್ವಜನಿಕರು ಪ್ಲಾಸ್ಟಿಕ್ ತ್ಯಜಿಸುವಂತೆ ಸಮಾಜದಲ್ಲಿ ಜಾಗೃತಿ ಅಗತ್ಯ ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯಕ್ಕೆ ಹಾನಿಯಾಗುವುದು ಎಂದು ಸಿವಿಲ್ ಜೆ ಎಂ ಎಪ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮಹಮದ್ ಯೂನೆಸ್ ಅಥಣಿ ಅವರು ಕರೆ ನೀಡಿ ಪ್ಲಾಸ್ಟಿಕ್ ಮುಕ್ತ ಜಾಥಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
By shukradeshe news Kannada July 11 Editor m rajappa m Vyasagondanahalli
ಸಾರ್ವಜನಿಕರು ಮನೆಯ ಸುತ್ತಮುತ್ತಲು ಸ್ವಚ್ಛವಾಗಿ ಇಟ್ಟುಕೊಂಡರೆ ಪರಿಸರ ಸ್ವಚ್ಛವಾಗಿ ಇರುವುದಕ್ಕೆ ಮಾತ್ರ ಸಾಧ್ಯ ಆದ್ದರಿಂದ ಪ್ಲಾಸ್ಟಿಕ್ ಮುಕ್ತ ಮಾಡಬೇಕು ಸಾರ್ವಜನಿಕರು ಪ್ರತಿಯೊಬ್ಬರೂ ಕೈಜೋಡಿಸಿ ಪ್ಲಾಸ್ಟಿಕ್ ನಿಷೇಧ ಮಾಡಿದರೆ ಮಾತ್ರ ಪರಿಸರ ಸರಿ ಮಾಡುವುದಕ್ಕೆ ಸಾಧ್ಯವಾಗಲಿದೆ ಎಂದು ಹೇಳಿದರು .
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛತಾ ಮತ್ತು ಪ್ಲಾಸ್ಟಿಕ್ ಮುಕ್ತ ಅಭಿಯಾನ ಕಾರ್ಯಕ್ರಮ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶವನ್ನ ಸ್ವಚ್ಛವಾಗಿ ಇಟ್ಟುಕೊಳ್ಳದಿದ್ದರೆ ವಿವಿಧ ಕಾಯಿಲೆಗಳು ಉತ್ಪಾತಿಯಾಗುವುವು. ಆಧುನಿಕತೆಯಲ್ಲಿ ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಪರಿಸರ ವಿನಾಶವಾಗುವುದು ಆದ್ದರಿಂದ ಪ್ರತಿಯೊಬ್ಬರು ಪ್ಲಾಸ್ಟಿಕ್ ಮುಕ್ತ ಮಾಡಲು ಕೈಜೋಡಿಸುವಂತೆ ತಿಳಿಸಿದರು. ಸ್ವಚ್ಚತೆ ಮತ್ತು ಪರಿಸರ ಪ್ರಜ್ಞೆ ಮನೆಯಿಂದಲೆ ಪ್ರಾರಂಭವಾದರೆ ಒಂದು ಗ್ರಾಮ ತಾಲೂಕು ಸ್ವಚ್ಛವಾದ ಸುಂದರ ನಗರವಾಗಲು ಸಹಕಾರಿಯಾಗುವುದು. ಪರಿಸರದ ಅವಲಂಬನೆ ಮೇಲೆ ನಮ್ಮ ಆರೋಗ್ಯವಿದೆ ಎಂಬುದನ್ನ ಮನಗಾಣಬೇಕಿದೆ. ಸಂಬಂಧಿಸಿದ ಪಟ್ಟಣ ಪಂಚಾಯತಿಯ ಇಲಾಖೆಯವರು ಸಮಾಜದಲ್ಲಿ ಹೆಚ್ಚು ಜಾಗೃತಿ ಮೂಡಿಸುವುದು ಅಗತ್ಯ ಎಂದರು.ಕೇವಲ ನಾಮಕವ್ಯವಸ್ಥೆಗೆ ಜಾಗೃತಿ ಮಾಡದೆ ಪ್ಲಾಸ್ಟಿಕ್ ಮಾರಾಟಗಾರರಿಗೆ ಎಚ್ಚರಿಕೆ ನೀಡುವಂತೆ ತಿಳಿಸಿದರು.
ಮುಖ್ಯ ಅಧಿಕಾರಿ ಲೋಕ್ಯಾನಾಯ್ಕ ಈ ಸಂದರ್ಭದಲ್ಲಿ ವಕೀಲರಾದ ಆರ್ ಓಬಳೇಶ್. ಸಣ್ಣ ಓಬಯ್ಯ. ಕಲ್ಲೇಶ್. ಸುನಿಲ್. ರುದ್ರೇಶ್. ವೇದಮೂರ್ತಿ. ಬಸವರಾಜ್. ತಿಪ್ಪೇಸ್ವಾಮಿ.ನಾಗರತ್ನಮ್ಮ. ಕರಿಬಸಮ್ಮ. ಪಟ್ಟಣ ಪಂಚಾಯತಿ ಆರೋಗ್ಯ ನಿರೀಕ್ಷಕರು ಕಿಫಾಯತ್ ಪಟ್ಟಣ ಪಂಚಾಯತಿ ಪೌರ ಕಾರ್ಮಿಕರು. ಸೇರಿದಂತೆ ಇತರರು ವಕೀಲರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.