ತಾಲ್ಲೂಕಿನ ಗೋಡೆ ಗ್ರಾಮದ ರೈತರ ಅಳಲು
ಕೇಳುವವರು ಯಾರು ?
ಕಾಡು ಹಂದಿಗಳ ಹಾವಳಿಯಿಂದ ರೋಸಿಹೋದ ರೈತರು ಬಿತ್ತಿದ ಮೆಕ್ಕೆಜೋಳ ಕಾಡು ಪ್ರಾಣಿಗಳ ಪಾಲು
ಕೇಳುವವರಿಲ್ಲ ನಮ್ಮ ರೈತರ ಗೋಳು
ಜಗಳೂರು ಸುದ್ದಿ
By shukradeshe news Kannada July 13 Editor m rajappa m Vyasagondanahalli
ತಾಲ್ಲೂಕಿನ ಕೊಂಡುಕುರಿ ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮ ಗೋಡೆ ಗ್ರಾಮದ ರೈತರ ಜಮೀನುಗಳಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳ ಪೂರ್ತಿ ಕಲಾಸ ಅಗಿದೆ 24 ಎಕರೆ ಜಮೀನಿನಲ್ಲಿ ಬಿತ್ತಿದ ಬೀಜ ಪೈರು ಬರುವ ಮುನ್ನ ಕಾಡು ಪ್ರಾಣಿಗಳ ಪಾಲಾಗಿದೆ.ರಾತ್ರಿ ವೇಳೆಯಲ್ಲಿ ರೈತರ ಜಮೀನುಗಳಿಗೆ ಲಗ್ಗೆ ಇಟ್ಟ ಕಾಡು ಹಂದಿಗಳು ಬಿತ್ತನೆ ಮಾಡಿದ ಮೆಕ್ಕೆಜೋಳವನ್ನ ಸಂಪೂರ್ಣವಾಗಿ ರಾತ್ರಿಯ ಪಾಳೆಯದಲ್ಲಿ ಖಾಲಿ ಮಾಡಿರುತ್ತವೆ ನಾವು ಬೆಳಿಗ್ಗೆ ಹೋಗಿ ನೋಡಿದರೆ ಹಂದಿಗಳು ಗೂರಾಡಿ ಕೆದರಿ ತಿಂದು ಹೋಗಿವೆ ಎಂದು ಗೋಡೆ ಗ್ರಾಮದ ರೈತರು ಪತ್ರಿಕೆ ಮೂಲಕ ತಮ್ಮ ಅಳಲು ತೊಡಿಕೊಂಡಿದ್ದಾರೆ. ಸಾಲ ಸೂಲ ಮಾಡಿ ಬೀಜ ಗೊಬ್ಬರ ತಂದು ಬಿತ್ತಿದ್ದೆವೆ ಆದರೆ ಕಾಡು ಹಂದಿಗಳು ರಾತ್ರಿಯಾದ ತಕ್ಷಣ ಜಮೀನುಗಳಿಗೆ ನುಗ್ಗಿ ಬಿತ್ತಿದ್ದ ಧಾನ್ಯಗಳನ್ನು ತಿಂದರೆ ನಮ್ಮ ಜೀವನದ ಗತಿ ಏನು ? ಸಂಬಂಧಿಸಿದ ಅರಣ್ಯ ಇಲಾಖೆಗೆ ಕರೆ ಮಾಡಿದರೆ ನಮಗೆ ಸಂಬಂಧವಿಲ್ಲ ಎಂದು ಬೇಜವಾಬ್ದರಿ ಉತ್ತರ ನೀಡುವರು .ಬೆಳೆ ಬರುವುದಕ್ಕೆ ಮುನ್ನ ಈ ರೀತಿಯಾದರೆ ಹೇಗೆ ಎಂದು ಪ್ರಶ್ನೆಸಿದರೆ ಅವರ ಬಳಿ ಯಾವುದೇ ಉತ್ತರವಿಲ್ಲ ಎನ್ನುವರು ಶೀಘ್ರವೆ ನಮಗೆ ಆಗಿರುವ ಅನ್ಯಾಯವನ್ನು ತುಂಬಿಕೋಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ರೈತರಾದ ಮಂಜಣ್ಣ ದೊಡ್ಡ ಮಂಜಣ್ಣ ಸುರೇಶ ಮತ್ತು ರಾಜು ಬಂಗಾರಿ ಸೇರಿದಂತೆ ಹಾಜರಿದ್ದರು.