ದಾವಣಗೆರೆ ಬಸ್ ನಿಲ್ದಾಣವನ್ನ ವಿಶಿಷ್ಟ ನಿರ್ಮಿಸಲಾಗಿದೆ
ದಾವಣಗೆರೆ: ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಪುನರ್ ನಿರ್ಮಿಸಿರುವ ಮಹಾನಗರ ಪಾಲಿಕೆಯ ನೂತನ ಬಸ್ ನಿಲ್ದಾಣದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಉದ್ಘಾಟಿಸಿದರು.
ಸ್ಮಾಟ್ ಸಿಟಿ ಯೋಜನೆಯಡಿ ಖಾಸಗಿ ಬಸ್ವನಿಲ್ದಾಣ ಪುನರ್ ನಿರ್ಮಾಣಗೊಂಡಿದೆ. ಇದೇ ವೇಳೆ ಲಿಫ್ಟ್ ಹಾಗೂ ಎಸ್ಕಲೇಟರ್ ಗಳಿಗೂ ಸಹ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಸಂಸದ ಡಾ.ಜಿ.ಎಂ ಸಿದ್ದೇಶ್ವರ, ಮಾಜಿ ಸಚಿವ ಹಾಗೂ ಶಾಸಕ ಎಸ್ ಎ. ರವೀಂದ್ರನಾಥ್, ಮಾಜಿ ಮೇಯರ್ ಎಸ್ .ಟಿ. ವೀರೇಶ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾಧವ, ಮಾಜಿ ಶಾಸಕ ಬಸವರಾಜ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.