Shukradeshe News kannada July 20

ಸುದ್ದಿ ಜಗಳೂರು

ಧರ್ಮಾಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ವತಿಯಿಂದ ಮದ್ಯವ್ಯಸನಿಗಳ ಕುಡಿತ ಬಿಡಿಸುವ ಶಿಬಿರ ಸಾರ್ಥಕ ಕೆ ಪಿ ಸಿ ಸಿ. ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ ಪಿ ಪಾಲಯ್ಯ ಹೇಳಿದರು.

ಪಟ್ಟಣದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಗುರುವಾರ ಶ್ರೀ ಧರ್ಮಾಸ್ಥಳ ಗ್ರಾಮಾ ಅಭಿವೃದ್ಧಿ ಯೋಜನೆ ವತಿಯಿಂದ ‌ಏರ್ಪಡಿಸಾಲಾಗಿದ್ದ ಮದ್ಯವರ್ಜನ ಶಿಬಿರದಲ್ಲಿ ಕಾರ್ಯಕ್ರಮವನ್ನ ಉದ್ಗಾಟನೆ ಮಾಡಿ ನಂತರ ಶಿಬಿರಾರ್ಥಿಗಳುನ್ನು ಕುರಿತು ಮಾತನಾಡಿದರು ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಧರ್ಮಾಸ್ಥಳದ ವೀರೇಂದ್ರ ಹೆಗಡೆಯವರ ಮದ್ಯವರ್ಜನ ಶಿಬಿರ ಏರ್ಪಡಿಸುವುದು ಸಾರ್ಥಕ ಸೇವೆಯಾಗಿದೆ. ಈ ಶಿಬಿರದಲ್ಲಿ ಹೆಚ್ಚು ಮದ್ಯವ್ಯಸನಿಗಳುನ್ನು ಕರೆ ತಂದು ಕುಡಿತದಿಂದ ಬಿಡಿಸುವ ಮಾರ್ಗದರ್ಶನ ಮಾಡಿ ಸಮಾಜದಲ್ಲಿ ದುಶ್ಚಟ ಮುಕ್ತರಾಗಿ ಇತರಂತೆ ಸರಿಸಮಾನವಾಗಿ ಬದುಕುವಂತೆ ಮಾಡುವ ಉದ್ದೇಶವನ್ನ ಸಂಸ್ಥೆ ಹೊಂದಿದೆ ಜನರ ಸಹಕಾರ ಬಹುಮುಖ್ಯ ಎಂದು ಸಲಹೇ ನೀಡಿದರು. .
.
ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ ಆ ಸೌಲಭ್ಯಗಳನ್ನು ಸದುಪಯೋಗ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಂಡು ತಮ್ಮ ಉತ್ತಮ ಸಂಸಾರದ ಜೀವನ ರೂಡಿಸಿಕೊಳ್ಳಿ ಎಂದರು ಧರ್ಮಸ್ಥಳದ ವೀರೇಂದ್ರ ಹೆಗಡೆಯವರು ಮಹಿಳಾ ಸಂಘಗಳ ಮೂಲಕ ಹಣಕಾಸಿನ ಸಾಲ ನೀಡಿ ದುಡಿತಕ್ಕೆ ಹಚ್ಚುವ ಕೆಲಸ ಮಾಡಲಿದ್ದಾರೆ.
ಕುಡಿತ ಬಿಡುವಂತೆ ಶಿಬಿರಾರ್ಥಿಗಳಿಗೆ ತಿಳಿಸಿದರು.

ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಪ್ರಾದೇಶಿಕ ಸಂಚಾಲಕ ನಾಗರಾಜ್ ಮಾತನಾಡಿ

ಮನುಕೂಲಕ್ಕೆ ಅಂಟಿದ ರೋಗ ಮದ್ಯಪಾನ ಆರೋಗ್ಯಕ್ಕೆ ಹಾನಿಯಾಗುವುದು.

ಕುಡಿತದ ವ್ಯಸನಿಗಳ ಮನೊ ಪರಿವರ್ತನೆಯನ್ನು ನಮ್ಮ ಧರ್ಮಾಸ್ಥಳ ಗ್ರಾಮಾ ಅಭಿವೃದ್ಧಿ ಯೋಜನೆ ಪ್ರಯತ್ನ ನಡೆದಿದೆ.
ಇಲ್ಲಿ ಯೋಗಬ್ಯಾಸ ಆಟ ಪಾಠ ಸಾಂಸ್ಕೃತಿಕ ‌ಚಟುವಟಿಕೆಗಳ ಮೂಲಕ ಮನೋಪರಿರ್ತನೆ ಮಾಡಲು ಸಹಕಾರಿಯಾಗಿದೆ.

ಪೊಲೀಸ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ರಾವ್.ಮಾತನಾಡಿದರು ಸ್ವಾಸ್ಥ್ಯ ಸಮಾಜಕ್ಕಾಗಿ ಪ್ರತಿಯೊಬ್ಬರು‌ ಕೈಜೋಡಿಸಿ ಕುಡಿತದಿಂದ ಸಮಾಜದಲ್ಲಿ ಆಗುವ ದುಷ್ಪರಿಣಾಮಗಳೆ ಹೆಚ್ಚು
ಕುಡಿತದ ಚಟಕ್ಕೆ ಬಲಿಯಾಗಿ ಮನೆ ಮಟ ಮರೆತು ಕುಟುಂಬಗಳು ಹಾಳಾಗುತ್ತವೆ. ಮದ್ಯವ್ಯಸನದಿಂದ ತಮ್ಮ ಆರೋಗ್ಯ ‌ಆಳಾಗುವುದು. ಆದ್ದರಿಂದ ನಶೆ ಬಿಟ್ಟು ತಮ್ಮ ಕುಟುಂಬದೊಂದಿಗೆ ನೆಮ್ಮದಿ ಜೀವನ ನಡೆಸಿ ಎಂದು ಕಿವಿ ಮಾತು ಹೇಳಿದರು.
ಸರ್ಕಾರಿ ಸೌಲಭ್ಯಗಳನ್ನು ಪಡೆದು ಜೀವನ ಸಾರ್ಥಕ ಪಡೆದುಕೊಳ್ಳುವಂತೆ ಸಲಹೇ ನೀಡಿದರು.ಶಿಬಿರದಲ್ಲಿ ಭಾಗವಹಿಸಿರುವಂತವರು‌ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು.

.

ಈ ಸಂದರ್ಭದಲ್ಲಿ ಮದ್ಯವರ್ಜನ ಶಿಬಿರದ ಅದ್ಯಕ್ಷರಾದ ಪತ್ರಕರ್ತ ಜಿ ಎಸ್ ಚಿದಾನಂದಪ್ಪ. ಧರ್ಮಸ್ಥಳ ಜಿಲ್ಲಾ ನಿರ್ದೇಶಕ ಜನರ್ಧನ್ ಎಸ್. ಗೌರವದ್ಯಕ್ಷ ತಿಪ್ಪೇಸ್ವಾಮಿ. ಇಓ ಚಂದ್ರಶೇಖರ್ .ಗೌರವ ಉಪಸ್ಥಿತಿ ತಿಪ್ಪೇಸ್ವಾಮಿ. ಜನಜಾಗೃತಿ ವೇದಿಕೆ ಉಪಾದ್ಯಕ್ಷರಾದ ಪಿ ಎಸ್ ಅತವಿಂದನ್.ಮಾಜಿ ನಾಯಕ ಸಮಾಜದ ಕಾರ್ಯಧರ್ಶಿ ಲೋಕೇಶ್.ಪತ್ರಕರ್ತ ಓ ಮಂಜಣ್ಣ.ಮುಖಂಡರಾದ ಹೊನ್ನುರುಸ್ವಾಮಿ.ರೇವಣ್ಣ. ದೇವಿಕೆರೆ ಗ್ರಾಪಂ ಅದ್ಯಕ್ಷೆ ರಣದಮ್ಮ.ವಕೀಲರಾದ ಕರಿಬಸಯ್ಯ.ಸೇರಿದಂತೆ ದರ್ಮಸ್ಥಳದ ಗ್ರಾಮಾ‌ ಅಭಿವೃದ್ಧಿ ಯೋಜನೆ ಸಿಬ್ಬಂದಿಗಳು ಸೇರಿದಂತೆ ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!