ಅಪರೂಪದ ವ್ಯಕ್ತಿತ್ವದ ಅಧಿಕಾರಿ ನಿಷ್ಠವಂತ ಸರ್ಕಾರಿ ಸೇವಕ ಜನರ ಕಷ್ಟಗಳಿಗೆ‌ ಮನಮಿಡಿಯುವ ಜನ ಸೇವಕ ಸಮಾಜ ಕಲ್ಯಾಣ ಇಲಾಖೆ ಬಿ ಮಹೇಶ್ ಪಯಣದ ಹಾದಿ

By shukradeshenews | online news portal | Kannada news online. July 20

ಕರ್ತವ್ಯದಲ್ಲಿ ಸಾರ್ಥಕತೆ ಮೆರೆದ ಬಿ ಮಹೇಶ್ವರಪ್ಪರವರ ಸುಧೀರ್ಘ ಸೇವಾ ಕಾರ್ಯ ಶ್ಲಾಘನೀಯ ಜುಲೈ 22 ರಂದು ಹುಟ್ಟು ಹಬ್ಬದ ಸಂಭ್ರಮ ಇದೆ ತಿಂಗಳು ದಿ ಜುಲೈ 31 ರಂದ ವಯೋ ನಿವೃತ್ತಿ ಇವರ ಸೇವಾ ಅವಧಿ ಶ್ಲಾಘನೀಯ.

ಮಹೇಶ್ವರಪ್ಪ ಎಂದರೆ ಹೆಸರಿಗೆ ತಕ್ಕಂತೆ ಮಹಾದಾನವಂತ ಕರುಣಮಯಿ ಹೃದಯವಂತ ನೋವುಂಡವರ ನೋವಿನ ನಾಡಿಮಿಡಿತ ಇವರು ಹುಟ್ಟಿದ್ದು ಐತಿಹಾಸಿಕ ಜಿಲ್ಲೆಯ ಕೋಟೆ ನಗರಿ ಚಿತ್ರದುರ್ಗ ಜಿಲ್ಲೆಯ ದಲಿತ ಸಮುದಾಯದ ಬಡ ಕುಟುಂಬದ

ತಂದೆ ಬಸಪ್ಪ ತಾಯಿ ಲಕ್ಷ್ಮಮ್ಮ ಎಂಬುವರ ಮಗನಾಗಿ ಜನಿಸಿದರು. ನಂತರ ಬಾಲ್ಯ ವಿಧ್ಯಾಭ್ಯಾಸವನ್ನು ಕಷ್ಠ ಸಂಕೋಲೆಗಳ ಮದ್ಯೆಯೆ ದುರ್ಗದ. ಪ್ರಾಥಮಿಕ ಪಾಠ ಶಾಲೆಯೊಂದರಲ್ಲಿ ವಿಧ್ಯಾಭ್ಯಾಸ ಮಾಡಿ ಮುಂದಿನ ಪಿಯುಸಿ ವಿಧ್ಯಾಭ್ಯಾಸವನ್ನು ಪಡೆದರು. ನಂತರ 1985 ರಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಥಮ ದರ್ಜೆ ನೌಕರರಾಗಿ ಕೇಲಸಕ್ಕೆ ಸೇರಿಕೊಂಡರು 1995 ರಲ್ಲಿ ಪದೋನಿಮಿತ್ತರಾಗಿ ಬಡ್ತಿ ಹೊಂದಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿದ್ದಾರೆ. .ನಂತರ ಇಲಾಖೆಯಲ್ಲಿ ಗ್ರೇಡ್‌ ಟು ಸಹಾಯಕ ನಿರ್ದೇಶಕರಾಗಿ ಕಛೇರಿ ಕಾರ್ಯವೈಕರಿಗಳೊಂದಿಗೆ ಪ್ರಮಾಣಿಕ ಸೇವೆ ಜೊತೆ ಜೊತೆಗೆ ಸಮಾಜದಲ್ಲಿ ನೊಂದವರ ಬಳಲಿದವರ ನೆರವಿಗೆ ಧಾವಿಸಿ ಅನೇಕ ಜನೋಪಯೋಗಿ ಸೇವಾ ಕಾರ್ಯಕ್ಕೆ ಸಾಕ್ಷಿಯಾಗಿದ್ದಾರೆ.ಈ‌ ಹಿಂದೆ ಕೊವಿಡ್ ವೇಳೆಯಲ್ಲಿ ಬಡವರ್ಗದ ಜನರಿಗೆ ಮತ್ತು ಅಲೆಮಾರಿ ಜನಾಂಗದ ಕುಟುಂಬಗಳಿಗೆ ಹಾಗೂ ಬಡ ಕುಟುಂಬದವರಿಗೆ ಆಹಾರ ಕಿಟ್ ಗಳುನ್ನು ವಿತರಿಸಿ ನೆರವಾಗಿದ್ದರು ,

  ಜಗಳೂರು ತಾಲ್ಲೂಕಿನ ಸಮಾಜ ಕಲ್ಯಾಣ .ಪ .ಜಾತಿ .ಪ ಪಂ  ಜಂಟಿ ಇಲಾಖೆಯಲ್ಲಿ ಪ್ರಭಾರ ಸಹಾಯಕ ನಿರ್ದೇಶಕರಾಗಿ ಬಿ ಮಹೇಶ್ವರಪ್ಪ‌ರವರು ಕರ್ತವ್ಯ ನಿಷ್ಠೆಗೆ ಮತ್ತೊಂದು ಹೆಸರೆ   ಮಹೇಶಣ್ಣ ಎಂದೇ ಪ್ರಖ್ಯಾತಿ ಪಡೆದಿರುವ ಸರ್ಕಾರಿ ಅಧಿಕಾರಿಯಾಗಿ ಉತ್ತಮ ಸೇವೆ ಮಾಡುವ ಮೂಲಕ ಜನ್ನಮನ್ನಣೆ ಪಡೆದಿರುತ್ತಾರೆ. .ಇವರು ಕರ್ತವ್ಯ ವೇಳೆಯಲ್ಲಿ ಸರ್ಕಾರಿ ಅಧಿಕಾರಿಯಾಗಿ ಈ  ಬಯಲು ಪ್ರದೇಶದ ಜನರ ನಾಡಿಮಿಡಿತ ಬಲ್ಲವರಾಗಿದ್ದರು .ಇಲ್ಲಿನ ಹಲವು ದಲಿತಪರ ಸಂಘಟನೆಗಳಿಗೆ ಪುಷ್ಟಿ ನೀಡಿ ಹೋರಾಟಗಳಿಗೆ ತೆರೆಮರೆಯಲ್ಲಿ ಸಹಕರಿಸಿದ್ದಂಟು ಮತ್ತು ಇನ್ನಿತರೆ ತಾಲೂಕಿನ ಪ್ರಗತಿಪರ .ಕನ್ನಡಪರ .ರೈತಪರ  .ಮಹಿಳಾಪರ .ಹಾಗೂ ಈ‌ ನೆಲದ ಹೋರಾಟದ ದನಿಗಳಿಗೆ ಅವರ ಸಹಾಯವಿದೆ ಎಂದರೆ ತಪ್ಪಾಗಲಾರದು.  ವಿದ್ಯಾರ್ಥಿ .ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಗಳ ಆಟಗಾರರಿಗೂ .ನಾಟಕ.ಕ್ರಿಕೆಟ್. ದೇವಾ ಮಂದಿರಗಳ ಸ್ಥಾಪನೆ ಸೇರಿದಂತೆ  ಇಲ್ಲಿನ ಹೋರಾಟಗಳಿಗೆ   .ರಾಜಕೀಯ ಗಣ್ಯರಿಗೂ  ಸಹ ಸಹಾಯಸ್ತ ಪ್ರೇರಣೆ ನೀಡಿರುವ ಸೇವೆಯನ್ನು ನಾವು ಸ್ಮರಿಸಬೇಕಾಗಿದೆ. ಆತ್ಮಿಯರು ಒಡನಾಡಿಗಳಿಗೆ .ಪ್ರಿತಿ ವಿಶ್ವಾಸದಿಂದ ತನು ಮನ ಧನ‌ದ ಮೂಲಕ ಅಭಯ ಅಸ್ತ ಚಾಚುವಂತ ಔದಾರ್ಯ ಮನಸ್ಸುಳ್ಳವರು.ಒಟ್ಟಾರೆ ಜಗಳೂರು ತಾಲ್ಲೂಕಿನ ಪ.ಜಾ.ಪ ಪಂ ಇಲಾಖೆಯಲ್ಲಿ  ಸಹಾಯಕ ‌ನಿರ್ದೇಶಕರಾಗಿ  ಉತ್ತಮ ಸೇವಕರಾಗಿ  ಸಮಾಜಕ್ಕೆ ಮತ್ತು ಈಗಿನ ಇತರೆ ಅಧಿಕಾರಿಗಳಿಗೂ   ಮಾದರಿಯಾಗಿ ತಾಲ್ಲೂಕಿಗೆ ಒಂದು ಸ್ಪೂರ್ತಿದಾಯಕ ಎಂದು ಭಾವಿಸಬಹುದು.

ಜಗಳೂರಿನ ಇತಿಹಾಸದುದ್ದಕ್ಕೂ ಇಂತ ಅಧಿಕಾರಿ ಮತ್ತೆಂದು ಸಿಗಲಾರರು ಎನಿಸುತ್ತದೆ .

ಮಹೇಶ್ ಣ್ಣ ಎಂದೇ ಜನ್ನ ಮನ್ನಣೆ

.’

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾಗಿ ಸಮಾಜದಲ್ಲಿ ಎಲ್ಲರುನ್ನು ಸಮಾನವಾಗಿ ಕಂಡಿರುವ ಮಹೇಶ್ ರವರ ಸೇವಾ ಅವಧಿಯಲ್ಲಿ ನೊಂದವರಿಗೆ ಧ್ವನಿಯಾಗಿ ದೀನ ದುರ್ಬಲರ ನೆರವಿಗೆ ಅಸರೆಯಾಗಿ.ಯುವಕರ ಕಣ್ಮಣಿಯಾಗಿ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ನ ಸಾವಿರಾರು ವಿದ್ಯಾರ್ಥಿ ಯುವಜನರ ವಿದ್ಯಾಬ್ಯಾಸಕ್ಕೆ ನೆರೆವು ನೀಡಿ ಐ ಎ ಎಸ್ .ಕೆ ಎ ಎಸ್ ನಂತ ಉನ್ನತ ಪದವಿ ಪಡೆಯಲು ಪ್ರೇರಕ ಶಕ್ತಿದಾಯಕ ಸೇವಾ ಕಾರ್ಯ. ಅಮೋಘವಾದದ್ದು.

ಇವರು ಅದೇಷ್ಟು ಬಡ ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕಾಗಿ ತನ್ನ ಸಂಬಳದಲ್ಲಿ ಹಣ ವ್ಯಯ ಮಾಡಿ ವಿದ್ಯಾರ್ಥಿ ಗಳ ಭವಿಷ್ಯಕ್ಕೆ ದಾರಿದೀಪವಾಗಿದ್ದಾರೆ.

ನಮಗೆ ಸಿಕ್ಕಿದ್ದ ಸೇವಾ ಅವಧಿಯಲ್ಲಿ ನೊಂದವರ ಅಬಲೆಯಂತ, ಮಹಿಳೆಯರಿಗೆ ಕಷ್ಟದಲ್ಲಿದ್ದ ಬಡವರಿಗೆ ಕೈಲಾದಷ್ಟು ಸೇವೆ ನೀಡಿದ ತೃಪ್ತಿ ನನಗಿದೆ. ಎನ್ನುವರು
ಬಿ ಎಂ ಎಸ್.ರವರ .

ಮಹೇಶ್ ರವರ ಹುಟ್ಟು ಹಬ್ಬದ ಸಂಭ್ರಮ ಇದೆ ತಿಂಗಳು ಜುಲೈ 22 ರಂದು ಇಲಾಖೆಯಲ್ಲಿ ಕೊನೆಯ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳುವರು.

ಇವರ ಸೇವೆ ಮೆಚ್ಚಿ ಪ್ರಶಸ್ತಿ ನೀಡಿದ ಹೆಸರಾಂತ ಸಂಸ್ಥೆ
ರಾಜ ರತ್ನ ಪುನಿತ್ ರಾಜ್ ಕುಮಾರ್ ಪ್ರಶಸ್ತಿ ಪುರಸ್ಕೃತರು ಹೌದು .
ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್ವರಪ್ಪರವರು ಇಲಾಖೆಯಲ್ಲಿ 33 ವರ್ಷಗಳ ಕಾಲ ಸುದೀರ್ಘ ಸೇವಾವಧಿಯಲ್ಲಿ ಸೇವೆಗೈದ ಸೇವಾ ಕಾರ್ಯ ಸಾರ್ಥಕದ ದಿನ ಇದೆ ತಿಂಗಳು ಜುಲೈ 31 ರಂದು ವಯೋ ನಿವೃತ್ತಿ ಹೊಂದಲಿರುವ ಇವರ ಸೇವಾ ಅವಧಿಗಳುನ್ನು ಒಂದು ಸವಿ ನೆನಪಿನ ಕಾರ್ಯಕ್ರಮದ ಸಂಭ್ರಮವನ್ನ ಕ್ಷೇತ್ರದ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ರವರ ನೇತೃತ್ವದಲ್ಲಿ ‌ ಸಾಕ್ಷಿಯಾಗುವುದು .ದಿನಾಂಕ ಜುಲೈ 22 ಹುಟ್ಟು ಹಬ್ಬವು ಸಹ ಸಾರ್ಥಕ ಸೇವಾ ಅವಧಿ ನೆನಪಿನಂಗಳದಲ್ಲಿ ಸಂಭ್ರಮ ಸಾಗುವುವು
.,

ಇವರ ಮಾತು ಮೃದ ಯಾರೆ ಆಗಲಿ ಅವರ ಬಳಿ ಕಷ್ಟ ಎಂದು ಬಂದರೆ ಕೈಲಾದ ಸಹಾಯ ಮಾಡುವ ಧಾರಳತನ ಔದರ್ಯ ಪ್ರಿತಿ ವಿಶ್ವಾಸಗಳಿಗೆ ಮತ್ತೊಂದು ಹೆಸರೇ ಬಿ‌ ಎಂ ಎಸ್. ಮೃದ ಸ್ವಭಾವ ಕೆರಳಿದರೆ ಅಷ್ಟೇ ಅವರ ನೋಡುವ ನೋಟವೆ ಮೌನ . ಸರ್ಕಾರಿ ನೌಕರಿಗೆ ಸೇರಿಕೊಂಡ ದಿನದಿಂದಲೂ ಇವರು ಇಲಾಖೆಯ ಕಾರ್ಯವ್ಯಾಪ್ತಿಯಲಿ ಕರ್ತವ್ಯವೆ ದೇವರೆಂದು ನಂಬಿದವರು ಶಿಸ್ತು ಸಂಯಮ ಕರ್ತವ್ಯ ಪಾಲನೆ ಮಾಡುವ ಮೂಲಕ ಕಛೇರಿ ಸಿಬ್ಬಂದಿಗಳೊಂದಿಗೆ ಪ್ರಿತಿ ವಿಶ್ವಾಸಗಳೊಂದಿಗೆ ಇಲಾಖೆ ಕೆಲಸ ಮಾಡಿಸುವರು ಇವರ ಕೊನೆಯ ಕರ್ತವ್ಯದ ಪ್ರಯಾಣವನ್ನ ಸ್ವ ತಾಲ್ಲೂಕಿನಂತಿರುವ ಹಿಂದೂಳಿದ ಜಗಳೂರು ತಾಲ್ಲೂಕು ‌ ಕೇಂದ್ರದಲ್ಲಿ ಬಹುಜನರ ಪ್ರಿತಿ ವಿಶ್ವಾಸಗಳೊಂದಿಗೆ ನೆಲೆಯಾಗಿದ್ದಾರೆ. ಇವರ ಸೇವಾ ಅವಧಿಯಲ್ಲಿ ಈ ಬಾಗದ ಜನರ ಸಾರ್ವಜನಿಕರ ಅಧಿಕಾರಿಗಳ ರಾಜಕೀಯ ಮುಖಂಡರಿಗೆ ಅತ್ತಿರವಾಗಿ ಸಾರ್ವಜನಿಕ ಕೆಲಸಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಿ ಇಲಾಖೆ ಸೇವಾ ಮನೋಭಾವದ ಜೊತೆ ಜೊತೆಗೆ ಸಾಮಾಜಿಕ ಸೇವೆ ಸಲ್ಲಿಸಿದ್ದಾರೆ.
ಅಧಿಕಾರಿಗಳ ಮಾಸ್ ಲೀಡರ್ ಅಧಿಕಾರಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಶ್ರೀಯುತರು ಮುಂಬಡ್ತಿ ಹೊಂದಿ ಸಹಾಯಕ ನಿರ್ದೇಶಕ ರಾಗಿ ಇಲಾಖೆ ಸೇವೆಯಲ್ಲಿ ಸುಮಾರು‌ 33 ವರ್ಷಗಳ ಕಾಲ ಸುದೀರ್ಘವಾದ ಸೇವಾ ಕಾರ್ಯ ಸಾರ್ಥಕದ ಪಯಣ ಹಾದಿಯನ್ನು ಮುಗಿಸಿ ಇದೀಗ ವಯೋನಿವೃತ್ತಿ ಹೊಂದುತ್ತಿರುವುದು ಸಾರ್ಥಕದ ಸೇವೆಯಾಗಿದೆ ಇನ್ನು
ಇವರ ಅನೇಕ ಸೇವಾ ಕಾರ್ಯವನ್ನು ಮುಗಿಸಿ ಇದೆ ಜುಲೈ 31 ರಂದು ವಯೋನಿವತ್ತಿ ಹೊಂದಲಿರುವ ಇವರು ಮುಂಬರುವ ದಿನಗಳಲ್ಲಿ ರಾಜಕೀಯ ‌ಪ್ರವೇಶ ಮಾಡಿ ಜಿಪಂ ಟಿಕೆಟ್ ಆಕಾಂಕ್ಷಿಯಾಗುವ ವಿದ್ಯಮಾನಗಳು ಸಹ ಗೋಚರವಾಗಿವೆ.ಒಟ್ಟಾರೆ ಮಹೇಶಣ್ಣರವರು

ನಿವೃತ್ತಿ ವೇಳೆಯಲ್ಲಿ ಆರೋಗ್ಯಕರ ಜೀವನ ಸಾಗಿಸಲಿ ಎಂದು ಪತ್ರಿಕೆ ಆಶಯವಾಗಿದೆ..

Leave a Reply

Your email address will not be published. Required fields are marked *

You missed

error: Content is protected !!