Shukradeshe News kannada July 21
ಜಗಳೂರು ತಾಲ್ಲೂಕು ಖಿಲಾ ಕಣ್ವಕುಪ್ಪೆ ಗ್ರಾಮದಲ್ಲಿ ಕರಡಿ ಹಾವಳಿಗೆ ಬೆಚ್ಚಿಬಿದ್ದ ಗ್ರಾಮಸ್ಥರು
ಹೌದು ತಾಲೂಕಿನ ಕೊಂಡುಕುರಿ ಅರಣ್ಯ ರಂಗಯ್ಯನದುರ್ಗ ಮೀಸಲು ಅರಣ್ಯ ಪ್ರದೇಶದ ಅಂಚಿನಲ್ಲಿರುವ ಕಿಖಾ ಕಣ್ವಕುಪ್ಪೆ ಗ್ರಾಮದಲ್ಲಿ ಹಲವು ತಿಂಗಳು ಗಳಿಂದ ಕರಡಿ ದಾಳಿಗೆ ರೈತರು ಹಾಗು ಮಕ್ಕಳು ಭಯ ಬೀತರಾಗಿದ್ದಾರೆ ಇಳಿ ಸಂಜೆ ವೇಳೆಗೆ ಕರಡಿಗಳು ಗ್ರಾಮದ ಆಂಜನೇಯ ಹಾಗು ಚೌಡಮ್ಮ ದೇವಿ ದೇವಸ್ಥಾನಗಳಿಗೆ ನುಗ್ಗಿ ದಾಂದಲೆ ನೆಡೆಸುತ್ತಿವೆ ದೇವಸ್ಥಾನಕ್ಕದ ಬರುವ ಭಕ್ತಾದಿಗಳಿಗೆ ಇನ್ನಿಲ್ಲದ ಭಯ ಉಂಟಾಗಿದ್ದು ಅರಣ್ಯ ಇಲಾಖೆಯವರು ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ
ಮುಂಗಾರು ಹಾಗು ಹಿಂಗಾರು ಮಳೆ ಪ್ರಾರಂಭದಲ್ಲಿ ಈ ಕ್ಷೇತ್ರ ವ್ಯಾಪ್ತಿಯಲ್ಲಿ ಕರಡಿಗಳು ಸರ್ವೆ ಸಾಮಾನ್ಯವಾಗಿ ಹೊಲಗಳಿಗೆ ನುಗ್ಗುವುದು ಸಾಮಾನ್ಯ ಇಲ್ಲಿನ ಮೆಕ್ಕೆಜೋಳ ,ಶೇಂಗಾ ಹಾಗು ತರಕಾರಿ ಬೆಳೆಗಳಾದ ಸವತೆ , ಕ್ಯಾರೆಟ್ , ತಿನ್ನಲು ಸಮೀಪದ ಕಾಡಿನಿಂದ ಗುಡ್ಡಗಾಡುಗಳಿಂದ ಕರಡಿಗಳು ಬರುತ್ತವೆ ಆದರೆ ಈ ಬಾರಿ ಗುಡ್ಡಕ್ಕೆ ಹೊಂದಿಕೊಂಡಿರುವ ದೇವಸ್ಥಾನಗಳಲ್ಲಿ ಇರುವಂತಹ ಹಣ್ಣು ಕಾಯಿ ಹಾಗು ಇತರೆ ಆಹಾರ ಪಧಾರ್ಥಗಳ ವಾಸನೆ ಜಾಡು ಹಿಡಿದು ಕರಡಿಗಳು ದೇವಸ್ಥಾನವನ್ನೆ ಅವಾಸ ಸ್ಥಾನಗಳನ್ನಾಗಿ ಮಾಡಿಕೊಂಡಿವೆ
ದೇವಸ್ಥಾನದಲ್ಲಿ ಸಾಮಾನುಗಳನ್ನ ಚಿಲ್ಲ ಪಿಲ್ಲಿ ಮಾಡುವುದಲ್ಲದೆ ಇಲ್ಲಿನ ಜನರ ಮೇಲೆ ಎರಗುತ್ತಿವೆ ಇದರಿಂದಾಗಿ ದೇವಸ್ಥಾನಗಳಿಗೆ ಬರುವ ಭಕ್ತಾದಿಗಳು ಭಯ ಬೀತರಾಗಿದ್ದಾರೆ
ಅರಣ್ಯ ಅಂಚಿನಲ್ಲಿರುವ ಗ್ರಾಮಗಳಿಗೆ ಕಾಡು ಪ್ರಾಣಿಗಳು ನುಗ್ಗುತ್ತಿದ್ದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರು ಸಹ ಯಾವುದೇ ಕ್ರಮ ಕೈಗೊಳ್ಳಿತ್ತಿಲ್ಲ ಎಂದು ಗ್ರಾಮದ ಯುವ ಮುಖಂಡ ಚೌಡಪ್ಪ ಅವರು ಅಕ್ರೋಶ ವ್ಯಕ್ತ ಪಡಿಸಿದ್ದಾರೆ ಶೀಘ್ರವೇ ಇದಕ್ಕೆ ಪರಿಹಾರ ಸೂಚಿಸದಿದ್ದರೆ ಅರಣ್ಯ ಇಲಾಖೆ ಮುಂಭಾಗ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ