ಶುಕ್ರದೆಸೆ ನ್ಯೂಸ್ :- ಜುಲೈ 22 shukradeshenews jlr news July 22 posted shukradeshenews
ಶಿಕ್ಷಣ ಕ್ರಾಂತಿಯಿಂದ ದೇಶ ಪ್ರಗತಿಯಾಗುವುದು ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ಶಾಸಕ ಬಿ ದೇವೆಂದ್ರಪ್ಪ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳ ಬಿಳ್ಕೋಡಿಗೆ ಹಾಗೂ ಪ್ರಥಮ ಪಿಯುಸಿ .ವಿದ್ಯಾರ್ಥಿಗಳ ಸ್ವಾಗತ ಕೋರುವ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಉದ್ಗಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳುನ್ನು ಕುರಿತು ಮಾತನಾಡಿದರು.
ಶಿಕ್ಷಣ ಕ್ರಾಂತಿಯಿಂದ ದೇಶ ಪ್ರಗತಿಯತ್ತ ಸಾಗುವುದು ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ವೀರಮೋಯ್ಲಿಯವರ ಕಾಲಘಟ್ಟದಲ್ಲಿ ಶೈಕ್ಷಣಿಕ ಪ್ರಗತಿಯಿಂದ ಉನ್ನತ ಹುದ್ದೆಗಳಿಗೆ ಆಯ್ಕೆ ಪ್ರವೇಶ ಪರೀಕ್ಷೆ ಸಿಇಟಿ ಜಾರಿಗೆ ತಂದ ಪರಿಣಾಮ ಗ್ರಾಮೀಣ ಪ್ರತಿಭಾನ್ವಿತ ವಿದ್ಯಾರ್ಥಿಗಳ ಭವಿಷ್ಯ ಬರೆದಂತಾಯಿತು .ನಮ್ಮ ಪುತ್ರ ಜಿಲ್ಲಾಧಿಕಾರಿ ವಿಜಯ್ ಕುಮಾರ್ ಐ ಆರ್ ಎಸ್ ಪರೀಕ್ಷೆ ಎದುರಿಸಿ ಉನ್ನತ ಪದವಿ ಪಡೆಯಲು ಸಹಕಾರಿಯಾಯಿತು ಇದೆ ಸರ್ಕಾರಿ ಕಾಲೇಜಿನಲ್ಲಿ ನಾನು ಕೂಡ 1977 ರಲ್ಲಿ ವಿದ್ಯಾಬ್ಯಾಸ ಮಾಡಿ ನಮ್ಮ ಇಬ್ಬರು ಪುತ್ರರು ಕೀರ್ತಿಕುಮಾರ್ ಇದೆ ಕಾಲೇಜಿನಲ್ಲಿ ಅಬ್ಯಾಸ ಮಾಡಿರುತ್ತಾರೆ.ಎಂದು ಸ್ಮರಿಸಿಕೊಂಡರು.
ಹಿಂದೂಳಿದ ಪ್ರದೇಶದ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಜಗಳೂರು ಪಟ್ಟಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಮಾದರಿ ಗ್ರಂಥಾಲಯ ಸ್ಥಾಪನೆ ಸೇರಿದಂತೆ ಭಾರತದ ಕಲೆಯನ್ನು ಎತ್ತಿಹಿಡಿಯಲು ನಮ್ಮ ಮೂಲ ನೃತ್ಯ ಭರತನಾಟ್ಯ ಶಾಲೆ ತೆರೆದು ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಕ್ಷೇತ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ವಿಶ್ವಾಸ ವ್ಯಕ್ತಪಡಿಸಿದರುಶಿಕ್ಷಣದಿಂದ ಮಾತ್ರ ಮನುಷ್ಯ ಮನುಷ್ಯನನ್ನಾಗಿ ಕಾಣಲು ಸಾದ್ಯವಾಗವುದು .ನನ್ನ ಅವಧಿಯಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಕರೆ ನೀಡಿದರು.
ಪೋಲೀಸ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ರಾವ್ ಮಾತನಾಡಿ
ವಿದ್ಯಾರ್ಥಿಗಳು ನಿಮ್ಮ ಹೆತ್ತು ಹೊತ್ತ ತಂದೆ ತಾಯಿಗಳುನ್ನು ಪ್ರಿತಿಸಿ ಗೌರವಿಸಿ ಗುರುಗಳ ಮಾರ್ಗದರ್ಶನದಲ್ಲಿ ಗುರಿಯಿಟ್ಟು ಸಾಧನೆ ಮಾಡಿ ಸಾಧಕರಾಗಿ ದೇಶಕ್ಕೆ ಈ ನೆಲದ ಸಂಸ್ಕೃತಿಗಳನ್ನು ಮೈಗೂಡಿಸಿಕೊಂಡು ತಮ್ಮ ಕಾಲೇಜಿಗೆ ಕೀರ್ತಿ ತರಬೇಕು ವಿದ್ಯಾರ್ಥಿಗಳು ಹದಿಹರೆಯದ ವಯಸ್ಸಿನಲ್ಲಿ ತಪ್ಪು ದಾರಿ ತುಳಿದರೆ ನಿಮ್ಮ ಭವಿಷ್ಯಕ್ಕೆ ಬರೆ ಎಳೆದುಕೊಳ್ಳುವಂತಾಗಲಿದೆ ಯೋಚಿಸಿ ಹೆಜ್ಜೆಯಿಟ್ಟು ಬದುಕು ರೂಪಿಸಿಕೊಳ್ಳಿ ಉತ್ತಮ ವಿದ್ಯಾಬ್ಯಾಸ ಮಾಡುವ ಮೂಲಕ ಉನ್ನತ ಪದವಿ ಗಳಿಸಿಕೊಂಡು ಕಷ್ಟ ಪಟ್ಟು ಬೆಳೆಸಿದ ಪೋಷಕರಿಗೆ ಗೌರವ ತರುವಂತೆ ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗೊಲ್ಲರಹಟ್ಟಿ ಮಹಮದ್ ಆಲಿ ಜೂನಿಯರ್ ವಿಷ್ಣುವರ್ಧನ್ ಅಭಿನಯ ಜನರ ಮೆಚ್ಚುಗೆ ಪಟ್ಟ ಶಾಸಕರು ಭರತ ನಾಟ್ಯ ಮಾಡಿದ ವಿದ್ಯಾರ್ಥಿನಿಗೆ 10 ಸಾವಿರ ಧನಸಹಾಯ ಮಾಡಿದರು ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲ ಜಗದೀಶ್.ಕಾಂಗ್ರೆಸ್ ಪಕ್ಷದ ಉಸ್ತುವಾರಿ ಸದಸ್ಯರಾದ ಕಲ್ಲೇಶ್ ರಾಜ್ ಪಟೇಲ್. ಪಪಂ ಮುಖ್ಯಾ ಅಧಿಕಾರಿ ಲೋಕ್ಯಾನಾಯ್ಕ್.ಉಪಾ ಪ್ರಾಂಶುಪಾಲ ಡಿ ಡಿ ಹಾಲಪ್ಪ.ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶ್ರೀನಿವಾಸ್.ಉಪನ್ಯಾಸಕ ಮಂಜುನಾಥರೆಡ್ಡಿ. ಮುಖಂಡರಾದ ಗೌಸ್ ಪಫಂ ಸದಸ್ಯರಾದ ಶಕೀಲ್ ಆಹಮದ್. ಮುಖಂಡ ಪಲ್ಲಾಗಟ್ಟೆ ಶೇಖರಪ್ಪ ಸೇರಿದಂತೆ ಹಾಜರಿದ್ದರು.