ಕೃಷಿ ಸುದ್ದಿ
By shukradeshe news Kannada July 23 Editor m rajappa m Vyasagondanahalli
: ಕೃಷಿ ಚಟುವಟಿಕೆ ಚುರುಕು ಬೆಳೆ ವಿಮೆ ಕಟ್ಟಲು ಜೈಲೈ 31 ಕೊನೆ ದಿನ ರೈತರು ಸದುಪಯೋಗ ಪಡೆದುಕೊಳ್ಳುವಂತೆ ಕೃಷಿ ಸಹಾಯಕ ನಿರ್ದೇಶಕ ಮಿಥನ್ ಕಿಮಾವತ್ ತಿಳಿಸಿದ್ದಾರೆ.
ತಾಲ್ಲೂಕಿನದ್ಯಂತ ಕೃಷಿ ಚಟುವಟಿಕೆಗಳು ಗರಿಗೆದರಿವೆ.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ತಾಲ್ಲೂಕಿನಾದ್ಯಂತ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಬಿದಿದ್ದು ಪ್ರಸ್ತುತ ಜುಲೈ 20 ರವರೆಗೆ ವಾಡಿಕೆ ಮಳೆ 217 ಮಿ ಮಿ ವಾಸ್ತವ ಮಳೆ 144 ಮಿ ಮಿ ಕೊರತೆ ಶೇ 33 ಮಳೆಯಾಗಿದ್ದು ರೈತರು ತಮ್ಮ ಹೊಲ ಗದ್ದೆಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ಚುರಕಾಗಿ ತೊಡಗಿದ್ದಾರೆ.ಇದೀಗ ಕಳೆದ ಮೂರು ನಾಲ್ಕು ದಿನಗಳಿಂದ ತುಂತುರು ಜಿಟಿ ಜಿಟಿ ಮಳೆಯಾಗುತ್ತಿದೆ.ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪತ್ರಿಕೆಗೆ ಮಾಹಿತಿ ನೀಡಿದರು.
ತಾಲ್ಲೂಕಿನಾದ್ಯಂತ ಮೆಕ್ಕೆಜೋಳ 28 ,500 ಹೆಕ್ಟೇರ್ ಜಮೀನಿನಲ್ಲಿ ಬಿತ್ತನೆಯಾಗಿದೆ. ವಿವಿಧ ಬೆಳೆಗಳಾದ 250 ಹೆಕ್ಟೇರ್, 3125 ಹೆಕ್ಟೇರ್, ಶೇಂಗಾ 2185 . ಹತ್ತಿ 1055 ಹೆಕ್ಟೇರ್ ಸೇರಿದಂತೆ ಕ್ಷೇತ್ರದಲ್ಲಿ ಒಟ್ಟು 35470 ಹೆಕ್ಟೇರ್ ಬಿತ್ತನೆಗೆ ಬಿತ್ತನೆಯಾಗಿದೆ .
ಕೃಷಿ ಇಲಾಖೆ ಅಧಿಕಾರಿಗಳು ಪ್ರಾತ್ಯಕ್ಷಿಕವಾಗಿ ರೈತರು ಬಿತ್ತನೆ ಕಾರ್ಯ ಚಟುವಟುಕೆ ಮಾಡುತ್ತಿರುವ ಜಮೀನಿಗೆ ಭೇಟಿ ನೀಡಿ ಬಿತ್ತನೆ ಕಾರ್ಯದಲ್ಲಿ ತೊಡಗಿರುವ ರೈತರಿಗೆ ಮಾಹಿತಿ ನೀಡಿದರು .
ಕೃಷಿ ಇಲಾಖೆ ಅಧಿಕಾರಿಗಳಿಂದ ಮೆಕ್ಕೆಜೋಳ ಬೆಳೆ ವೀಕ್ಷಣೆ
ತಾಲ್ಲೂಕಿನದ್ಯಂತ ಉತ್ತಮ ಮಳೆಯಾಗುತ್ತಿದ್ದು ಮುಂಗಾರಿನಲ್ಲಿ ಬಿತ್ತಿದ ರೈತರು ಹೊಲಗದ್ದೆಗಳಲ್ಲಿ ಎಡೆಕುಂಟೆ ಹೊಡೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.ರೈತರು ಎಡೆ ಕುಂಟೆ ಬೋದು ಹಿಡಿದು ಹೊಡೆಯುವುದರಿಂದ ಕಳೆ ಕಡಿಮೆ ಮಾಡಬಹುದು ರಸಾಯನಿಕ ಕಳೆ ನೀಯಂತ್ರಣ ಮಾಡಲು ಬಿತ್ತಿದ 25 ದಿನಗಳ ಅಂತರದಲ್ಲಿಯೆ ಟೊಟು ಟೈಯನ್ ಔಷಧಿ ಸಿಂಪಡಿಸಿ.
ಸುಳಿಯಲ್ಲಿ ನೀರು ತುಂಬಿಕೊಂಡರೆ ಲದ್ದಿಹುಳುವಿನ ಭಾದೆ ಕಡಿಮೆಯಾಗುತ್ತಿದೆ.ಲದ್ದಿಹುಳುವಿನ ಭಾದೆ ಕಂಡುಬಂದಲ್ಲಿ ಇಮಾ ಮಿಕ್ಸಿನ್.5 ಪ್ರತಿ ಲೀಟರ್ ಸೇರಿಸಿ 19 .45 ಮಿ ಮಿ ಲಘು ಪೋಷಕಾಂಶ ಮಿಶ್ರಣ 5 ಮಿ ಪ್ರತಿ ಲೀಟರ್ ಔಷಧಿ ಸಿಂಪಡಿಸಿ ರೋಗ ಭಾದೆ ನೀಯಂತ್ರಿಸಬಹುದು ಎಂದು ಮಾಹಿತಿ ನೀಡಿದ್ದಾರೆ.
ಕೃಷಿ ಸಹಾಯಕ ನಿರ್ದೇಶಕರಾದ ಮಿಥನ್ ಕಿಮಾವತ್ ರೈತರೊಂದಿಗೆ ಎಡೆಕುಂಟೆ ಮೆಳಿ ಹಿಡಿದು ಜಮೀನಿನಲ್ಲಿ ಎಡೆಕುಂಟೆ ಹೊಡೆಯುತ್ತಿರುವುದು.
ವಿವಿಧ ಬೆಳೆಗಳಿಗೆ ವಿಮೆ ಕಟ್ಟಲು ಇದೆ ಜುಲೈ 31 ಕಡೆ ದಿನ ಮೆಕ್ಕೆಜೋಳ. ರಾಗಿ. ತೊಗರಿ.ಸೂರ್ಯಕಾಂತಿ. ಶೇಂಗಾ.ಬೆಳೆಗಳಿಗೆ ಬೆಳೆ ವಿಮೆ ಕಟ್ಟಿ ವಿಮೆ ಪ್ರಯೋಜನ ಪಡೆದುಕೋಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
`