ಕ್ರೈಂ ನ್ಯೂಸ್

By shukradeshe news Kannada July 23 Editor m rajappa Vyasagondanahalli


ನಿಧಿ ತೆಗೆಯಲು ಹೊಂಚು ಹಾಕುತ್ತಿದ್ದ ಕಳ್ಳರ ಬಂಧನ ಮಾಡಲಾಗಿದೆ. ಎಂದು ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸರಾವ್ ತಿಳಿಸಿದ್ದಾರೆ.

ಜಗಳೂರು ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ರಾವ್ ಸುದ್ದಿಗಾರರೊಂದಿಗೆ ಸುದ್ದಿಗೋಷ್ಠಿನ್ನುದ್ದೆಶಿಸಿ ಮಾತನಾಡಿದರು ಲಿಂಗನಹಳ್ಳಿ ರಸ್ತೆಯಲ್ಲಿ ದಿ ಜುಲೈ 22 ರಾತ್ರಿ 3.3೦ ಗಂಟೆ ಸಮಯದಲ್ಲಿ ಜನವಸತಿಯಿಲ್ಲದ ಪ್ರದೇಶದಲ್ಲಿ ಅನುಮಾನಸ್ಪದವಾಗಿ ನಿಂತಿದ್ದ ಕಾರುನ್ನು‌‌ ತಡೆದು ಪಿ ಎಸ್ ಐ ಸಾಗರ್ ನೇತೃತ್ವದಲ್ಲಿ ನೇತೃತ್ವದಲ್ಲಿ ನಿಧಿ ಹೊಂಚು ಕೋರರುನ್ನು ನಮ್ಮ ಪೊಲೀಸ್ ಸಿಬ್ಬಂದಿಗಳು ಬೆನ್ನುಹತ್ತಿ ಹಿಡಿದು ಬಂಧಿಸಲಾಗಿದೆ .
‌6 ಜನ ಗ್ಯಾಂಗ್ ಹೊಂಚುಕೋರರ ತಂಡದವರ ಮೇಲೆ ದಾಳಿ ನಡೆಸಿ ಬಂಧಿಸಿ ವಿಚಾರಣೆ‌ ನಡೆಸಿ ಅವರ ಬಳಿಯಿದ್ದ ಕೆಲ ವಸ್ತುಗಳ ಸಮೇತ ಜಪ್ತಿ ಮಾಡಲಾಗಿದೆ.

ಆರೋಪಿಗಳಾದ
ಜಗಳೂರು ಟೌನ್ ನಿವಾಸಿ ಕಲ್ಲೇಶಿ ತಂದೆ ಪಂಚಣ್ಣ ಎಂಬುವ 48 ವರ್ಷ ದಿವಾನ್ ಸಾಭ್ ತಂದೆ ರಹಮತ್‌ಉಲ್ಲ್ 38 ವರ್ಷ .ದಾವಣಗೆರೆ ಅಜಾದ್ ನಗರ ಮಲ್ಲಿಕಾರ್ಜನ್ ಮಲ್ಲೇಶಿ ತಮ್ಮಣ್ಣ ಕಟ್ಟಿಮನಿ ಹುಬ್ಬಳಿ. ಮೂಲದ
ಹನುಮಂತ .ಮುರ್ತಾಸಾಬ್ .ಖಾಸಿಂಸಾಬ್ .ಇಳಕಲ್ ಸೇರಿದಂತೆ ಗೊಲಂದರಾಜ್ ಎಂಬುವ ಆರೋಪಿಗಳುನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
ಆರೋಪಿಗಳು ಬಿದರಕೆರೆ ಸಂತೆ‌ಮುದ್ದಾಪುರ ಬಳಿಯಿರುವ ಬೇಡಿ ಆಂಜೇನೇಯ ಗುಡಿ ಮುಂದಿರುವ ಬಸವಣ್ಣ ಮೂರ್ತಿ ಕಿತ್ತು ಪಕ್ಕಕ್ಕೆ ಹಾಕಿ ನಿಧಿ ತೋಡಿರುವುದು ಬೆಳಕಿಗೆ ಬಂದಿದೆ. .

ನಿಧಿ ಕಳ್ಳರ ಗ್ಯಾಂಗ್
ಹಳೆ ಪುರಾತನ ದೇವಾಲಯಗಳನ್ನೆ ಟಾರ್ಗೆಟ್ ಮಾಡಿ ರಾತ್ರಿ ಪಾಳೆಯದಲ್ಲಿ‌ ನಿಧಿ ಹುಡುಕಲು ಹೊರಟು ವಿವಿಧ ಬಾಗಗಳಲ್ಲಿ ದೇವಾಲಯಗಳ ವಿಗ್ರಹಗಳುನ್ನು ದ್ವಂಸ ಮಾಡಿ ನಿಧೀ ತೆಗೆಯುವರು ಎಂದು ತಿಳಿದು ಬಂದಿದೆ .ಆರೋಪಿಗಳ ಬಳಿಯಿದ್ದ ಸ್ಪಿಟ್ ಡಿಸೈರ್ ಕಾರು ಸೇರಿದಂತೆ ಒಂದು ಸುತ್ತಿಗೆ.ಹ್ಯಾಂಡ್ ಬ್ಲೌಸ್.ಕಬ್ಬಿಣದ ಪ್ಲಾಟ್ ಚಿಲಗಳು.ಸುರ್ ಸುರ್ ಬತ್ತಿ ಕ್ರ್ಯಾರಸ್.ಪ್ಲಾಸ್ಟಿಕ್ ಹಗ್ಗ..ಕಾರದ ಪುಡಿ.ಮೊಬೈಲ್ ಗಳು.2000 ನಗದು.ರೇಡಿಯಂ ಕಟರ್.ವಶಪಡಿಸಿಕೊಂಡು 427 ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳುನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ

. ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬೇಧಿಸಲು ಯಶಸ್ವಿಯಾಗಿರುವ ಪೊಲೀಸ್ ಸಿಂಬದಿಗಳಾದ ಬಸವರಾಜಪ್ಪ. ಮಾರೆಪ್ಪ.ದಿನೇಶ್.ಚಂದ್ರಶೇಖರ್. ನಾಗರಾಜ್.ಅರುಣ್.ಗೀರಿಶ್.ರವರು
ಸಿಪಿಐ ಶ್ರೀನಿವಾಸ್ ರಾವ್ ಹಾಗೂ ಪಿ ಎಸ್ ಐ ಸಾಗರ್ ನೇತೃತ್ವದಲ್ಲಿ ಆರೋಪಿಗಳುನ್ನು ಬಂಧಿಸಲು ಯಶಸ್ವಿಯಾಗಿರುವ ಸಿಬ್ಬಂದಿಗಳ ಕಾರ್ಯವೈಕರಿಗೆ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಡಾ ಕೆ ಅರುಣ್ . ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಆರ್ ಬಿ. ಬಸರಗಿ .ಉಪಾ ವಿಬಾಗದ ಡಿವೈ ಎಸ್ಪಿ ಕನ್ನಿಕಾ ಸಿಕ್ರಿವಾಲ್ ರವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!