ಜಗಳೂರು ತಾಲ್ಲೂಕಿನ 11 ಕೆರೆಗಳಿಗೆ ಹರಿದು ಬಂದಳು ತುಂಗಾಭದ್ರೆ ಶಾಸಕ ಬಿ ದೇವೆಂದ್ರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.

By shukradeshe news Kannada July 24 Editor m rajappa Vyasagondanahalli

ಜಗಳೂರಿನ ಕನಸಿನ ಯೋಜನೆ 57 ಕೆರೆ ತುಂಬಿಸುವ ದಿಟೂರು ಏತ ನೀರಾವರಿ ಯೋಜನೆ ಡಿಯಲ್ಲಿ ತಾಲ್ಲೂಕಿನ 11 ಕೆರೆಗಳಿಗೆ ನೀರು ಬಿಡಲಾಗಿದೆ ತುಪ್ಪದಹಳ್ಳಿ ಮೂಲಕ ಅಸಗೊಡು. ಕಾಟೆನಹಳ್ಳಿ ಮಾದನಹಳ್ಳಿ .ಬಿಳಿಚೋಡು.ಮರಿಕುಂಟೆ ಗೋಡೆ ತಾರೆಹಳ್ಳಿ .ಉರ್ಲುಕಟ್ಟೆ .ಹಾಲೆಕಲ್ಲು.ಚದರಗೋಳ ಕೆರೆಗಳಿಗೆ ನೀರಾವರಿ ನಿಗಮದ ಅಧಿಕಾರಿಗಳು ದಿಟೂರು ಬಳಿಯಿರುವ ಜಾಕ್ ವಾಲ್ ನಿಂದ ಎರಡು ಮೋಟರ್ ಆನ್ ಮಾಡಿ ಬಿಡಲಾಗಿದೆ .ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ತುಂಗಾ ಭದ್ರಾ ನದಿ ತುಂಬಿ ಹರಿಯುತ್ತಿದ್ದರಿಂದ ನೀರು ಬಿಡಲಾಗಿದೆ.ಚಟ್ನಹಳ್ಳಿ ಗುಡ್ಡದಿಂದ ಜಗಳೂರು ಕ್ಷೇತ್ರಕ್ಕೆ ಗುರುತ್ವಾಕರ್ಷಣೆ ಮೂಲಕ ತಾಲ್ಲೂಕಿನ 11 ಕೆರೆಗಳಲ್ಲಿ ನೀರಿನ ಚಿಲುಮೆ ಚಿಮ್ಮುತಾ ಹರಿದು ಬಂದಳು ಭದ್ರ ಗಂಗೆ ನೀರಿನ ಬುಗ್ಗೆ ಚಿಮ್ಮಿ ಬರುತ್ತಿದ್ದಂತೆ ಗ್ರಾಮಗಳ ರೈತರು ಹರ್ಷ ವ್ಯಕ್ತಪಡಿಸಿ ಕೆಕೆ ಹಾಕಿ ಸಂತಸಪಟ್ಟರು.

ಈ ಯೋಜನೆ ಪ್ರಾರಂಭವಾಗಿ ಸುಮಾರು ಐದು ವರ್ಷಗಳ ಕಾಲ ಕಳೆದರು ಕೆರೆಗಳಿಗೆ ನೀರು ಬರಲಿಲ್ಲ ಎಂದು ನಿರಾಸೆ ವ್ಯಕ್ತಪಡಿಸಿದ್ದ ರೈತರಿಗೆ ಇದೀಗ ತಾಲ್ಲೂಕಿನ 11 ಕೆರೆಗಳಿಗೆ ಪೈಪು ಲೈನ್ ಮೂಲಕ ಕೆರೆಗಳಿಗೆ ನೀರು ಬಂದಿದೆ ಎಂದು ನೀರಾವರಿ ನಿಗಮದ ಇಂಜಿನಿಯರ್ ಗಳು ತಿಳುಸಿದ್ದಾರೆ.

ಸಿರಿಗೆರೆ ಶ್ರೀಗಳ ಕನಸಿನ 57 ಕೆರೆ ತುಂಬಿಸುವ ಯೋಜನೆಡಿಯಲ್ಲಿ ತಾಲ್ಲೂಕಿನ 11 ಕೆರೆಗಳಿಗೆ ನೀರು ಹರಿದು ಬಂದಿರುವ ಸುದ್ದಿ ತಿಳಿದ ತಕ್ಷಣ ನಮಗೆ ಸಂತಸವಾಗಿದೆ
ಶಾಸಕ .ಬಿ ದೇವೆಂದ್ರಪ್ಪ

Leave a Reply

Your email address will not be published. Required fields are marked *

You missed

error: Content is protected !!