Latest news today jagalur
ಸೋರುತ್ತಿದೆ ಬಾಲವಾಡಿ ಮಕ್ಕಳ ಅಕ್ಷರದ ದೇಗುಲ
ಅಂಗನವಾಡಿ ಕಟ್ಟಡ ಶಿಥಿಲ; ಮಕ್ಕಳು, ಸಿಬ್ಬಂದಿಗೆ ಜೀವಭಯ
By shukradeshe news Kannada July 25 Editor m rajappa Vyasagondanahalli :-ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ
..
ತಾಲ್ಲೂಕಿನ ವ್ಯಾಸಗೊಂಡನಹಳ್ಳಿ ಗ್ರಾಮದ ಅಂಗನವಾಡಿ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಇಲ್ಲಿನ ಮಕ್ಕಳು ಹಾಗೂ ಅಂಗನವಾಡಿ ಕೇಂದ್ರದ ಸಿಬ್ಬಂದಿ ಜೀವಭಯದಲ್ಲೇ ದಿನ ದೂಡುವಂತಾಗಿದೆ.
ಗ್ರಾಮಸ್ಥರು ಸಂಬಂಧಿಸಿದ ಸೂಪರ್ ವೈಸರ್ ಗೂ ಹಾಗೂ ಸಿಡಿಪಿಓ ಅಧಿಕಾರಿಗಳಿಗೆ ಸುಮಾರು ಬಾರಿ ಮನವಿ ಮಾಡಿಕೊಂಡರು ತಿರುಗಿ ನೋಡದ ಅಧಿಕಾರಿಗಳು ಅಧಿಕಾರಿಗಳ ನಿರ್ಲಕ್ಷ್ಯ ತನಧೊರಣೆ ಎದ್ದು ಕಾಣುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
:
ಕಟ್ಟಡದ ಮೇಲ್ ಛಾವಣಿ ಹಾಳಾಗಿದ್ದು, ಗೋಡೆಗಳು ಬಿರುಕು ಬಿಟ್ಟಿವೆ ಇದೀಗ ಜಿಟಿ ಜಿಟಿ ತುಂತುರು ಬಿಳುವ ಮಳೆಗೆ ಸೋರುತ್ತಿದೆ ಮಕ್ಕಳ ಅಕ್ಷರದ ದೇಗುಲ. ಸೋರುವ ಕಟ್ಟಡದಲ್ಲಿಯೆ ಎಳೆ ಜೀವಗಳ ಪಾಠ ಪ್ರವಚನಗಳು ನಡೆಯುವಂತಾಗಿದೆ ಇನ್ನು ಅಡುಗೆ ಸಹಾಯಕರು ಸೋರುತ್ತಿರುವ ಕಟ್ಟಡದಲ್ಲಿಯೆ ಮಕ್ಕಳಿಗೆ ಪೌಷ್ಟಿಕ ಪುಡ್ ತಯಾರಿಸಿ ವಿತರಿಸುವುದೆ ಒಂದು ದುಸ್ತರವಾಗಿದೆ.
ಶೌಚಾಲಯ ಸಹ ಹಾಳಾಗಿದ್ದು, ಕಟ್ಟಡ ಅವ್ಯವಸ್ಥೆಯ ಆಗರವಾಗಿದೆ. ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವ ಈ ಅಂಗನವಾಡಿ ಕಟ್ಟಡವನ್ನು ನೆಲಸಮಗೊಳಿಸಿ ಇದೇ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸಲು ನೂತನ ಕಟ್ಟಡ ನಿರ್ಮಿಸುವಂತೆ ಜನಪ್ರತಿನಿಧಿಗಳು ಕ್ಷೇತ್ರದ ಶಾಸಕರು ಮುಂದಾಗಲಿ ಎಂದು ಗ್ರಾಮಸ್ಥರು ಪತ್ರಿಕೆ ಮೂಲಕ ಮನವಿ ಮಾಡಿಕೊಂಡಿದ್ದಾರೆ..
ಒಟ್ಟಾರೆ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯ ವೆ ಒಂದು ಕಡೆ ಕಾರಣವಾಗಿದೆ ಎಂದು ಗ್ರಾಮದ ಯುವ ಮುಖಂಡ ಕುಮಾರ್ ಆರೋಪಿಸಿದ್ದಾರೆ. ಶೀಘ್ರವೆ ಅಂಗನವಾಡಿ ಕಟ್ಟಡ ಕಾಯಕಲ್ಪ ನೀಡುವಂತೆ ಅಂಗನವಾಡಿ ಸಿಬ್ಬಂದಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.. .
ಕೂಡಲೇ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರದ ನೆಲಸಮ ಮಾಡಿ ನೂತನ ಕಟ್ಟಡ ನಿರ್ಮಿಸಬೇಕು ಎಂದು ಮಕ್ಕಳ ಪಾಲಕರು ಆಗ್ರಹಿಸಿದ್ದಾರೆ.