ತಹಶೀಲ್ದಾರ್ ಜಿ ಸಂತೋಷಕುಮಾರ್ ರವರುನ್ನು ಸರ್ಕಾರ ಚಿತ್ರದುರ್ಗಕ್ಕೆ ವರ್ಗಾವಣೆ ಮಾಡಿ ಆದೇಶ
Latest news today
By shukradeshenews | online news portal | Kannada news onlineshukradeshe news Kannada July 30 Editor m rajappa Vyasagondanahalli
ಜಗಳೂರು ತಾಲ್ಲೂಕಿನಲ್ಲಿ ಕಳೆದ ಎರಡು ವರ್ಷಗಳ ಕಾಲ ತಹಶೀಲ್ದಾರ್ ರಾಗಿ ಉತ್ತಮ ಸೇವೆ ನೀಡುವ ಮೂಲಕ ಜನಮನ್ನಣೆ ಪಡೆದಿರುವ
ತಹಶೀಲ್ದಾರ್ ಜಿ. ಸಂತೋಷಕುಮಾರ್ ರವರನ್ನು ಸರ್ಕಾರ ಅಧಿಕೃತವಾಗಿ
ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಹಾಯಕರ ಹುದ್ದೆಗೆ ವರ್ಗಾವಣೆ ಮಾಡಿ ಆದೇಶ ಮಾಡಲಾಗಿದ್ದು ಚಿತ್ರದುರ್ಗ ಜಿಲ್ಲಾ ಕಛೇರಿಯಲ್ಲಿ ಸಹಾಯಕರ ಹುದ್ದೆ ತೆರವಾಗಿತ್ತು ತೆರವಾದ ಸ್ಥಾನಕ್ಕೆ ತಹಶೀಲ್ದಾರ್ ಜಿ ಸಂತೋಷಕುಮಾರ್ ರವರು ವರ್ಗಾವಣೆಯಾಗಿದ್ದಾರೆ
ಇವರು ಹಿಂದೂಳಿದ ತಾಲ್ಲೂಕು ಕೇಂದ್ರದಲ್ಲಿ ಇದುವರೆಗೂ ರೈತರ ಬಡವರ ಬಗರ್ ಹುಕ್ಕುಂ ಹಕ್ಕುಪತ್ರ ಸೇರಿದಂತೆ ಸಂದ್ಯಾಸುರಕ್ಷಾ ಯೋಜನೆ ವೃದ್ಧಾಪ್ಯ ವೇತನ .ವಿಧವಾ ವೇತನ ತಾಲ್ಲೂಕು ಆಡಳಿತದಲ್ಲಿ ಸುವ್ಯವಸ್ಥೆ ಸೇವೆ ನೀಡಿ ಸರ್ಕಾರಿ ಸೌಲಭ್ಯಗಳನ್ನು ಅಧಿಕಾರಿಗಳ ಮೂಲಕ ಶಿಸ್ತು ಬದ್ದ ಕರ್ತವ್ಯ ಸಲ್ಲಿಸಿರುತ್ತಾರೆ .
ಆದರೆ ದಿಢೀರನೆ ವರ್ಗಾವಣೆ ಕೇಳಿದ ಕ್ಷೇತ್ರದ ಜನತೆ ಇನ್ನು ಇವರ ಸೇವೆ ನಮ್ಮ ತಾಲ್ಲೂಕು ಕೇಂದ್ರಕ್ಕೆ ಅಗತ್ಯವಾಗಿತ್ತು ವರ್ಗಾವಣೆಯಿಂದ ಬೇಸರ ತಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸರ್ಕಾರ ತಹಶೀಲ್ದಾರ್‌ಗಳ ವರ್ಗಾವಣೆಗೆ ಸಂಬಂಧಿಸಿದಂತೆ ಒಂದೇ ದಿನ ಮೂರು ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಅನುಕ್ರಮವಾಗಿ 84, 46 ಮತ್ತು 16 ತಹಶೀಲ್ದಾರ್‌ಗಳ ವರ್ಗಾವಣೆಗೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗಿದ್ದು.
ಈ ಪೈಕಿ 12 ಮಂದಿ ತಹಶೀಲ್ದಾರ್‌ಗಳನ್ನು ಈಗ ಇರುವ ಸ್ಥಳದಲ್ಲೇ ಮುಂದುವರಿಸಲಾಗಿದೆ. ಅದನ್ನು ವರ್ಗಾವಣೆ ಆದೇಶದಲ್ಲೇ ಪ್ರಕಟಿಸ ಲಾಗಿದೆ. ಈ ಹಿಂದೆ ವರ್ಗಾವಣೆಯಾಗಿದ್ದು, ಸ್ಥಳ ನಿರೀಕ್ಷಣೆಯಲ್ಲಿದ್ದ ಕೆಲವರಿಗೆ ಶುಕ್ರವಾರದ ಪಟ್ಟಿಗಳಲ್ಲಿ ಹುದ್ದೆ ತೋರಿಸಲಾಗಿದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಲವು ಮಂದಿ ತಹಶೀಲ್ದಾರ್‌ಗಳನ್ನು ವರ್ಗಾವಣೆ ಮಾಡಲಾಗಿತ್ತು. ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಆರಂಭವಾದ ಬಳಿಕ ಶಾಸಕರು, ಸಚಿವರು ಮತ್ತು ಪಕ್ಷದ ಮುಖಂಡರ ಶಿಫಾರಸು ಆಧರಿಸಿ ತಹಶೀಲ್ದಾರ್‌ಗಳ ವರ್ಗಾವಣೆ ಪಟ್ಟಿಯೊಂದನ್ನು ಸಿದ್ಧಪಡಿಸಲಾಗಿತ್ತು. ಆದರೆ, ಅದನ್ನು ಪ್ರಕಟಿಸದೇ ಕೆಲವು ದಿನಗಳಿಂದ ತಡೆ ಹಿಡಿಯಲಾಗಿತ್ತು. ಶಾಸಕರು ಪತ್ರದ ಮೂಲಕ ಅಸಮಾಧಾನ ಹೊರಹಾಕಿದ ಬಳಿಕ 170 ತಹಶೀಲ್ದಾರ್‌ಗಳ ವರ್ಗಾವಣೆಗೆ ಆದೇಶ ಹೊರಡಿಸಲು ಸಿದ್ಧತೆ ನಡೆದಿತ್ತು. ಆದರೆ, ಅಂತಿಮವಾಗಿ 146 ಮಂದಿಯ ವರ್ಗಾವಣೆ ಆದೇಶಗಳು ಹೊರಬಿದ್ದಿವೆ ಎಂದು ಮೂಲಗಳು ತಿಳಿಸಿವೆ.
ತಹಶೀಲ್ದಾರ್ ಸಂತೋಷಕುಮಾರ್ ತಾಲ್ಲೂಕು ಮಟ್ಟದ ಅಧಿಕಾರಿಗಳಾದ ನಮ್ಮೆಲ್ಲರ ಜೊತೆ ಆತ್ಮೀಯ ಸ್ನೇಹಿತರಾಗಿ ನಮಗೆ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅದ್ಯಕ್ಷರಾಗಿ ನಮಗೆ ಉತ್ತಮ ಸೇವೆ ಮಾಡಲು ಮಾರ್ಗದರ್ಶಕರಂತೆ ನಮ್ಮ ಅವರ ಮದ್ಯ ಉತ್ತಮ ಅಧಿಕಾರಿಗಳ ಬಾಂಧವ್ಯವಿತ್ತು ಆದರೆ ಸರ್ಕಾರಿ ನೀಯಮನುಸಾರ ವರ್ಗಾವಣೆ ಸರ್ವೆ ಸಾಮಾನ್ಯ ಇದೀಗ ವರ್ಗಾವಣೆಗೊಂಡು ಚಿತ್ರದುರ್ಗಕ್ಕೆ ತೆರಳುವರು ನಾವು ಕೂಡ ಇದೆ ಜುಲೈ 31 ರಂದು ವಯೋ ನಿವೃತ್ತಿ ಹೊಂದಲಿದ್ದೆವೆ ಆದರೆ ಇರುವಷ್ಟು ದಿನಗಳ ಕಾಲ ಒಟ್ಟುಗೂಡಿ ಸ್ನೇಹಿತರಾಗಿ ಸೇವೆ ನೀಡಿರುವುದೆ ನಮ್ಮೆಲ್ಲ ಅಧಿಕಾರಿಗಳಿಗೆ ಒಂದು ಸುದೈವವಾಗಿದೆ
.ಬಿ ಮಹೇಶ್ವರಪ್ಪ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಜಗಳೂರು
.