Latest news today
ಹೆಚ್ಚುವರಿ ಆದಾರ ತಿದ್ದುಪಡಿ ಸೇವಾ ಕೇಂದ್ರ ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವನೆ. ಶೀಘ್ರವೆ ಪ್ರಾರಂಭ ಎಂದು ತಹಶೀಲ್ದಾರ್ ಜಿ ಸಂತೋಷಕುಮಾರ್ ತಿಳಿಸಿದ್ದಾರೆ.
By shukradeshenews | online news portal | Kannada news onlineshukradeshe news Kannada July 29 Editor m rajappa Vyasagondanahalli
ಒಂದೇ ಆದಾರ ಕೇಂದ್ರಕ್ಕೆ ಆಗುವ ಹೊರೆಯನ್ನ ತಪ್ಪಿಸಲು ಪರ್ಯಾಯವಾಗಿ ತಾಲ್ಲೂಕಿಗೆ ಹೆಚ್ಚುವರಿಯಾಗಿ ನಾಲ್ಕು ಆದಾರ ತಿದ್ದುಪಡಿ ಕೇಂದ್ರ ಸ್ಥಾಪನೆಗೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ .
. ಜಗಳೂರು ಪಟ್ಟಣದಲ್ಲಿ ಎರಡು ಆದಾರ ತಿದ್ದುಪಡಿ ಕೇಂದ್ರ ತೆರೆದು ಸಾರ್ವಜನಿಕರಿಗೆ ಸಹಕಾರಿಯಾಗುವಂತೆ ಹೊಬಳಿಗೆ ಒಂದರಂತೆ ಬಿಳಿಚೋಡು ಸೊಕ್ಕೆ .ಕಸಬಾ ಒಟ್ಟು ನಾಲ್ಕು ಆದಾರ ಕೇಂದ್ರ ಪ್ರಾರಂಭಿಸಲಾಗುವುದು ಎಂದು ತಾಲ್ಲೂಕು ತಹಶೀಲ್ದಾರ್ ತಿಳಿಸಿದ್ದಾರೆ.
ಈಗಿರುವ ಜಗಳೂರು ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ಒಂದೆ ಆದಾರ ತಿದ್ದುಪಡಿ ಕೇಂದ್ರವಿದ್ದು ಇತ್ತೀಚೆಗೆ ಸಾರ್ವಜನಿಕರು ಒಂದೆ ಕೇಂದ್ರಕ್ಕೆ ಮುಗಿಬಿಳುತ್ತಾರೆ . ಸಿಬ್ಬಂದಿಗಳು ಸಹ ಸರ್ವರ್ ಸಮಸ್ಯೆಗಳಿಂದ ಜನರುನ್ನು ಸುಧಾರಿಸಲು ಸಾದ್ಯವಾಗುತ್ತಿಲ್ಲ ಆದ್ದರಿಂದ ಪರ್ಯಾಯವಾಗಿ ಹೆಚ್ಚುವರಿ ಕೇಂದ್ರಗಳ ಸ್ಥಾಪನೆ ಆವಶ್ಯವಿದೆ ಸಾರ್ವಜನಿಕರ ಬೇಡಿಕೆಯಂತೆ ಹೆಚ್ಚುವರಿ ಕೇಂದ್ರ ತೆರೆಯಲು ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಳ್ಳಲಾಗಿದೆ.
ಈಗಾಗಲೇ ಸರ್ಕಾರ ಘೋಷಣೆ ಮಾಡಿರುವ ಗೃಹಲಕ್ಷ್ಮಿ ಯೋಜನೆ ಸೌಲಭ್ಯ ಪಡೆಯಲು ಆದಾರ ಚೀಟಿಯಲ್ಲಿ ಮೊಬೈಲ್ ನಂಬರ್ ನಮೂದಿಸುವುದು ಖಡ್ಡಾಯವಾಗಿದ್ದರಿಂದ ನಿತ್ಯ ಜನರು ಆದಾರ ಚೀಟಿ ಹಿಡಿದು ಇತ್ತೀಚೆಗೆ ನಗರಕ್ಕೆ ಅತಿ ಹೆಚ್ಚು ಸಾರ್ವಜನಿಕರು ಬರುವುದರಿಂದ ದಿನಕ್ಕೆ ಇನ್ನುರರಿಂದ ಮೂನ್ನೂರಕ್ಕೆ ಹೆಚ್ಚು ಜನರು ಒಂದೇ ಕೇಂದ್ರದ ಮುಂಬಾಗದಲ್ಲಿ ಸಾಲುಗಟ್ಡಿ ನಿಲ್ಲುವರು ಇದನ್ನು ಕಂಡಿರುವ ನಾವು ಈ ಹೊರೆಯನ್ನ ತಪ್ಪಿಸಲು ಹೆಚ್ಚುವರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಹಶೀಲ್ದಾರ್ ಜಿ ಸಂತೋಷಕುಮಾರ್ ರವರು ಶುಕ್ರದೆಸೆ ವೆಬ್ ಆನ್ ಲೈನ್ ಮೀಡಿಯಾ ಕ್ಕೆ ಪ್ರತಿಕ್ರಿಯೆಸಿ ಸ್ಪಷ್ಟನೆ ನೀಡಿದ್ದಾರೆ.