. ಮಾದರಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ ಮಹೇಶಣ್ಣರವರ ವಯೋ ನಿವೃತ್ತಿ ದಿನದ ಸವಿ ನೆನಪಿ ಅಂಗವಾಗಿ ಗ್ಯಾಂಗ್ರಿನನಿಂದ ಬಳಲುತ್ತಿದ್ದ ಬಡ ಕುಟುಂಬದ ಮಗು ದತ್ತು ಪಡೆದ ಶಾಸಕ ಬಿ ದೇವೆಂದ್ರಪ್ಪ ಕಾರ್ಯ ಸಾರ್ಥಕ

By shukradeshenews | online news portal | Kannada news onlineshukradeshe news Kannada July 30 Editor m rajappa Vyasagondanahalli


ಪಟ್ಟಣದ ಗುರುಭವನದಲ್ಲಿ ತಾಲ್ಲೂಕ ಮಟ್ಟದ ಅಧಿಕಾರಿಗಳ ವರ್ಗ ಹಾಗೂ ಶಾಸಕರ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ ಬಿ ಮಹೇಶ್ ರವರ ಬಿಳ್ಕೋಡಿಗೆ ಸುಂದರ ಸಮಾರಂಭದಲ್ಲಿ ಉದ್ಗಾಟನೆ ಕಾರ್ಯಕ್ರಮವನ್ನುದ್ದೆಶಿಸಿ ಶಾಸಕ ಬಿ ದೇವೆಂದ್ರಪ್ಪ ಮಾತನಾಡಿದರು ಕಾಗೆ ಒಂದು ಹಗಳು ಕಂಡರೆ ತನ್ನ ಬಳಗವನ್ನೆಲ್ಲ ಕೂಗಿ ಕರೆಯುವಂತೆ ಹಂಚಿ ಉಣ್ಣುವ ಗುಣದವರು ಬಡವರ ಕಷ್ಟಕ್ಕೆ ಮನಮಿಡಿಯುವ ಅಧಿಕಾರಿ ಬಿ ಮಹೇಶ್ವರಪ್ಪರ ಸೇವಾ ಕಾರ್ಯ ಶ್ಲಾಘನೀಯವಾಗಿದ್ದು ಅವರ ನಿವೃತ್ತಿ ದಿನದಂದು ನಾನು ತೋರಣಗಟ್ಟೆ ಗ್ರಾಮದ ಬಡಪ್ಪ ದಂಪತಿಗಳ ಬಡ ಕುಟುಂಬದ 7 ವರ್ಷ ಮಗುವಿಗೆ ಎರಡು ಕಾಲುಗಳು ಇರಲಿಲ್ಲ ಗ್ಯಾಂಗ್ರಿನಿಂದ ಬಳಲುತ್ತಿದ್ದ ಆ ಮಗುವಿಗೆ ಕೃತಕ ಕಾಲು ಜೋಡಣೆ ಮಾಡಿಸಿ ನೆರವಾದಂತೆ ಪುನ ಆ ಮಗುವನ್ನು ಮಹೇಶ್ ರವರಂತಹ ಉತ್ತಮ ಅಧಿಕಾರಿ ವಯೋ ನಿವೃತ್ತಿ ಸವಿ ನನಪಿನ ದಿನದಂದು ದತ್ತು ಪಡೆದು ಸಾಕುತ್ತೆನೆ ಆಮಗುವಿನ ಶಿಕ್ಷಣ ಇನ್ನಿತರೆ ಖರ್ಚಾನ್ನ ನಾನೇ ಭರಿಸುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮನುಷ್ಯ ಹುಟ್ಟುವುದು ಸಹಜ ಆದರೆ ನಾವು ಹುಟ್ಟು ಸಾವುಗಳ ಮದ್ಯ ಇಂತ ಪುಣ್ಯದ ಕಾರ್ಯ ಮಾಡೋಣ ಎಂದು ಕಿವಿ ಮಾತು ಹೇಳಿದರು.
ನಾನು ಕೂಡ ಚಿತ್ರದುರ್ಗದ ಕಾಲೇಜಿನಲ್ಲಿ ಓದುವಾಗ ಮಹೇಶ್ ರವರು ನಡೆಸುವ ಹಾಸ್ಟೆಲ್ ನಲ್ಲಿ ಊಟ ಮಾಡಿದ ಆ ದಿನಗಳುನ್ನು ಶಾಸಕರು ನೆನಪಿಸಿಕೊಂಡರು.

ಮಾದರಿ ಅಧಿಕಾರಿ ಬಿ ಮಹೇಶ್

ಕಲ್ಯಾಣ ಇಲಾಖೆಯಲ್ಲಿ ದಿನಗೂಲಿ ನೌಕರಿಗೆ ಸೇರಿಕೊಂಡ ಮಹೇಶ್ ರವರು ದೊಡ್ಡ ಶ್ರೀಮಂತರಲ್ಲ ಅವರಲ್ಲಿ ಯಾವುದೇ ಐಶ್ವರ್ಯ ಇರಲಿಲ್ಲ ಆದರೂ ಸಮಾಜದಲ್ಲಿ ದೀನದುರ್ಬಲರಿಗೆ ಜನರ ಕಷ್ಟಸುಖಗಳಿಗೆ ಮನಮಿಡಿಯುವ ಹೃದಯ ಶ್ರಿಮಂತಿಕೆಯ ಗುಣದಿಂದ ಇರುವುದರಲ್ಲಿ ದಾನ ಧರ್ಮ ಮಾಡಿ ಕೂಡಿ ಬಾಳುವ ಸಹಬಾಳ್ವೆಯೆ ಗುಣವಂತರೆನ್ನಿಸಿಕೊಂಡಿದ್ದಾರೆ .ಈ ವ್ಯಕ್ತಿಯ ಬಳಿ ತಾಲ್ಲೂಕಿನ ಪ್ರತಿಯೊಬ್ಬರು ಸಹ ಸಹಾಯ ಪಡೆದಿದ್ದಾರೆ .ಆದರೆ ಮಹೇಶ್ ರವರಂತ ವ್ಯಕ್ತಿತ್ವದ ಅಧಿಕಾರಿ ಮತ್ತೆಂದು ಸಿಗಲಾರರು ಕಷ್ಟ ಎಂದು ಬಂದವರ ಅಕ್ಷಯ ಪಾತ್ರೆಯಂತೆದ್ದ ಬಿ‌ ಮಹೇಶ್ ರವರು ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ಕಲಿಯಲು ಅನ್ನ ಹಾಕಿದ ಕೈ ಆದರ್ಶ ಕುಟುಂಬ ಈ ತಾಲ್ಲೂಕಿನಲ್ಲಿ ಯಾರು ಕೂಡ ಕಂಡರಿಯದಂತೆ ಜನರ ಪ್ರಿತಿ ವಿಶ್ವಾಸ ಗಳಿಸಿ ರಾಜ್ಯಕ್ಕೆ ಮಾದರಿ ಅಧಿಕಾರಿ ಎನ್ನಿಸಿಕೊಂಡಿರುವ ನಿಮ್ಮ ಸೇವೆ ಅಮೋಘವಾಗಿದೆ ಎಂದು ಬಣ್ಣಿಸಿದರು ತಾಲ್ಲೂಕು ಮಟ್ಟದ ಅಧಿಕಾರಿಗಳು ಇವರಂತ ಮಾದರಿ ಅಧಿಕಾರಿ ಆದರ್ಶಗಳುನ್ನು ಆಳವಡಿಸಿಕೊಳ್ಳುವಂತೆ ಸಲಹೇ ನೀಡಿದರು.

ದಂಪತಿಗಳೊಂದಿಗೆ ವಯೋ ನಿವೃತ್ತಿ ಬಿಳ್ಕೋಡಿಗೆ ಸನ್ಮಾನ ಸ್ವಿಕರಿಸಿ ಮಹೇಶ್ ಣ್ಣ ಮಾತನಾಡಿದರು 1995 ರಲ್ಲಿ ಜಗಳೂರು ತಾಲ್ಲೂಕಿಗೆ ಕಛೇರಿ ವ್ಯವಸ್ಥಾಪಕನಾಗಿ ಬಂದ ಆ ದಿನಗಳಲ್ಲಿ ಜಗಳೂರು ಪ್ರದೇಶ ಅಭಿವೃದ್ಧಿ ಮರಿಚಿಕೆಯಾಗಿತ್ತು. ನನಗೆ ಜನ್ಮ ನೀಡಿದ ಭೂಮಿ ಚಿತ್ರದುರ್ಗವಾಗಿರಬಹುದು ಆದರೆ ನನಗೆ ಅತಿ ಹೆಚ್ಚು ಪ್ರಿತಿ ವಿಶ್ವಾಸವಿಟ್ಟು ಅನ್ನ ನೀರು ಗಾಳಿ ನೀಡಿದ ನೆಲ ಜಗಳೂರು ನನಗೆ ಮರುಜನ್ಮ ನೀಡಿದೆ .ನನಗೆ ಈ ಹಿಂದೆ ಆರೋಗ್ಯ ಸಮಸ್ಯೆಯಿಂದ ನಾನು ಸಾವು ಬದುಕಿನ ಮದ್ಯ ಹೋರಾಡಿ ಬದುಕುಳಿದಿದ್ದೆನೆ ಅದು ನಿಮ್ಮಲ್ಲರ ಅಶಿರ್ವಾದ ಶ್ರೀರಕ್ಷೆಯಿಂದ ನನ್ನ ಅಧಿಕಾರಾವಧಿಯಲ್ಲಿ ಆಸ್ಪತ್ರೆ ಹೋಗಲು ರಜ ಹಾಕಿದ್ದ ಬಿಟ್ಟರೆ ನಾನೆಂದು ಕಛೇರಿ ಕೆಲದ ವೇಳೆ ಗೈರಾಗಿಲ್ಲ ನನಗೆ ಜನರೆಂದರೆ ಬಹಳ ಪ್ರಿತಿ ಅಭಿಮಾನ ಸಮಾಜಕ್ಕೆ ತನ್ನದೆಯಾದ ಸೇವೆ ಮಾಡುವ ಹಂಬಲ ನನ್ನ ಈ ಮಟ್ಟಕ್ಕೆ ಬೆಳಿಸಿದೆ‌.ತಾಲ್ಲೂಕಿನಲ್ಲಿ ಪ್ರತಿಯೊಬ್ಬರು ಪತ್ರಕರ್ತರು .ಸಮಾಜದ ಸಂಘಟಕರು. ರಾಜಕೀಯ ಮುತ್ಸದಿಗಳು . ಅಧಿಕಾರಿಗಳು .ನನಗೆ ಸಹಕರಿಸಿದ್ದಿರಿ ಅದೇ ರೀತಿ ನಮ್ಮ ಪ್ರಿತಿಯ ಶಾಸಕರಾದ ದೇವಣ್ಣರವರು ನನ್ನನ್ನು ಕೈ ಬಿಡುವುದಿಲ್ಲ ಎಂಬ ನಂಬಿಕೆ ನನಗಿದೆ ಎಂದು ಆನಂದಬಾಷ್ಪದ ಕಣ್ಣೀರಿನ ಮೂಲಕ ಸ್ಮರಿಸಿಕೊಂಡರು.

ಸಮಾಜ ಕಲ್ಯಾಣ ಇಲಾಖೆ ಉಪಾ ನಿರ್ದೇಶಕ ನಾಗರಾಜ್ ಮಾತನಾಡಿ ಬಿ ಮಹೇಶ್ ಣ್ಣರವರ ಅಭಿಮಾನಿಗಳ ಬಳಗ ಕಂಡು ನಾನು ಮೂಕವಿಸ್ಮಿತನಾಗಿದ್ದೆನೆ . ಇಷ್ಟುಂದು ಆಪಾರ ಜನಸಂಖ್ಯೆ ತಮ್ಮ ಮೇಲೆ ಇಟ್ಟಿರುವ ಪ್ರಿತಿ ವಿಶ್ವಾಗಳಿಗೆ ಬೆಲೆ ಕಟ್ಟಲಾಗುದು ನಿಮ್ಮ ಅಧಿಕಾರಾವಧಿಯಲ್ಲಿ ಜನಾನುರಾಗಿ ನೀಡಿದ ಅಮೋಘವಾದ ಸೇವೆಯಿಂದ ಕ್ಷೇತ್ರದ ಜನರ ಮನಸ್ಸು ಗೆದ್ದಿರುವ ಮಹೇಶಣ್ಣರವರ ವಯೋ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು.

ತಹಶೀಲ್ದಾರ್ ಜಿ ಸಂತೋಷಕುಮಾರ್ ಮಾತನಾಡಿ ತಾಲ್ಲೂಕಿನಲ್ಲಿ ನಮ್ಮ ಅಧಿಕಾರಿ ವರ್ಗಕ್ಕೆ ಹಿರಿಯಣ್ಣನಂತೆಯಿದ್ದ ಮಹೇಶಣ್ಣ ಎಂದರೆ ನಮಗೆಲ್ಲ ಮಾರ್ಗದರ್ಶಕರಾಗಿದ್ದರು ತಾಲ್ಲೂಕಿನಲ್ಲಿ ಎಂತದ್ದೆ ಸಮಸ್ಯೆ ಬಂದರು ಸಹ ಅವರ ಸಲಹೇಸೂಚನೆ ಮೂಲಕ ನಾವೆಲ್ಲ ಒಗಟ್ಟಾಗಿ ಕೆಲಸ ಮಾಡುವುದರ ಜೊತೆಗೆ ನಮಗೆ ಬಲಗೈಯಂತಿದ್ದ ಮಹೇಶಣ್ಣರವರ ಸ್ನೇಹ ನನಗೆ ಸ್ಪೂರ್ತಿ ಎಂದರು.

ಅಭಿಮಾನಿಗಳ ಮಹಾಪೂರವೇ ಹರಿದು ಬಂದ ಜನಸಾಗರದ ಮದ್ಯೆ ಮಹೇಶ್ ರವರ ವಯೋ ನಿವೃತ್ತಿ ಬಿಳ್ಕೋಡಿಗೆ ಸಮಾರಂಭ

ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ವೃತ ನಿರೀಕ್ಷಕ ಶ್ರೀನಿವಾಸ್ ರಾವ್,ತಾ.ಪಂ ಇಓ ಚಂದ್ರಶೇಖರ್, ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ಟಿಎಚ್ ಓ ಡಾ.ನಾಗರಾಜ್, ನಿವೃತ್ತ ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಅಶೋಕ, ವಿವಿಧ ತಾಲೂಕು ಮಟ್ಟದ ಅಧಿಕಾರಿಗಳಾದ.ವೆಂಕಟೇಶ್ ಮೂರ್ತಿ. ಮಿಥುನ್ ಕಿಮಾವತ್, ಲಿಂಗ ರಾಜ್,ನೌಕರರ ಸಂಘದ ಮಾಜಿ ಅಧ್ಯಕ್ಷ ಅಜ್ಜಪ್ಪ ನಾಡಿಗರ್, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಿಎಸ್ ಚಿದಾನಂದಪ್ಪ. ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಲ್ಲಾಗಟ್ಟಿ ಶೇಖರಪ್ಪ . ಮಹಮ್ಮದ್ ಗೌಸ್. ತಿಮ್ಮಣ್ಣ. ಹರಿಹರ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಾಸಿರ್ ಉದ್ದೀನ್,ಸಹಾಯಕ ನಿರ್ದೇಶಕಿ ಸುನಿತಾ,ಸೇರಿದಂತೆ ಹಿತೈಷಿಗಳು ಅಭಿಮಾನಿಗಳು ಕುಟುಂಬ ವರ್ಗದವರು ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು..

Leave a Reply

Your email address will not be published. Required fields are marked *

You missed

error: Content is protected !!