By shukradeshenews | online news portal | Kannada news onlineshukradeshe news Kannada July 29 Editor m rajappa Vyasagondanahalli

ಉತ್ತಮ ಮನುಷ್ಯನನ್ನಾಗಿ ರೂಪಿಸುವ ಶಕ್ತಿ ಶಿಕ್ಷಣ ಮತ್ತು ಶಿಕ್ಷಕರಿಂದ ಮಾತ್ರ ಸಾದ್ಯ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೆಂದ್ರಪ್ಪ ಹೇಳಿದರು.

ವಿದ್ಯಾವನ್ನು ಪಡೆದವನು ಸಂಸ್ಕಾರವಂತ ಉತ್ತಮ ವ್ಯಕ್ಯಿಯಾಗಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಾರೆ.ಬೆಳಕಿಲ್ಲದೆ ಮನುಷ್ಯ ನಡೆಯಬಹುದು ಆದರೆ ಕನುಸುಗಳಿಲ್ಲದೆ ಬದುಕುಲು ಸಾದ್ಯವಿಲ್ಲ ಎಂದು ಪಟ್ಟಣದ ಅಂಬೇಡ್ಕರ್ ವಸತಿ ಪ್ರೌಡ ಶಾಲೆಯಲ್ಲಿ ಆಯೋಜಿಸಲಾಗಿದ್ದ ಮುಖ್ಯಶಿಕ್ಷಕ ಬಾಬುರೆಡ್ಡಿ ಮತ್ತು ಎಲ್ ಟಿ. ಬಸವರಾಜ್ ರವರ ವಯೋ ನಿವೃತ್ತಿ ಬಿಳ್ಕೋಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು

ಅಂದಿನ ಕಾಲಘಟ್ಟದಲ್ಲಿ ಗುರುಯಿದ್ದರೆ ಗುರಿಯಿತ್ತು ಆದರೆ ಆಧುನಿಕ ತಾಂತ್ರಿಕ ಕಾಲಘಟ್ಟದಲ್ಲಿ ಮೊಬೈಲ್ ಗೀಳಿಗೆ ಬಲಿಯಾಗಿ ಗುರು ಶಿಷ್ಯರ ಪರಂಪರೆ ಕಳೆದು ಹೋಗುತ್ತಿದ್ದೆವೆ

ಗುರು ಶಿಷ್ಯ ಪರಂಪರೆ ತನ್ನದೆಯಾದ ಆದರ್ಶ ಸಂಬಂಧಗಳಿದ್ದವು ಆದರೆ ಪ್ರಸ್ತುತದಲ್ಲಿ ಗುರು ಶಿಷ್ಯರ ಸಂಬಂಧಗಳು ಕ್ಷೀಣಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಅಮರ ಶಿಲ್ಪಿ ಜಕಣ್ಣಚಾರಿ ಕಲ್ಲುನ್ನು ಮರದ ದಿಂಬೆಯನ್ನ ತೆಗೆದು ಕೊಂಡು ನಿರ್ಜಿವ ವಸ್ತುಗಳುನ್ನು‌ ಕೆತ್ತಿ ಶಿಲೆ ಮಾಡಿದರೆ ಶಿಕ್ಷಕರು ಜೀವ ಇರುವ ವಿಧ್ಯಾರ್ಥಿಗಳಿಗೆ ನೋವು ಆಗದೇ ಕಟ್ಟೆದು ಸುಂದರ ಮೂರ್ತಿಗಳನ್ನಾಗಿ ಮಾಡುವ ಕೀರ್ತಿ ಶಿಕ್ಷಕರ ವೃಂದದವರಿಗೆ ಸಲ್ಲುತ್ತದೆ ಎಂದರು.
ಆಭರಣ ಧರಿಸಿದರೆ ಶೊಭೆ ಬರುವುದಿಲ್ಲ ಶಿಕ್ಷಕರ ಹೇಳಿ ಕೋಡುವ ಜ್ಞಾನದ ಪಾಠದಿಂದ ದೇಶ ಭವಿಷ್ಯ ಉಜ್ವಲವಾಗಲಿದೆ.

ಅಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಂತ‌ ಶಕ್ತಿ ಶಿಕ್ಷಕ ವರ್ಗಕ್ಕಿದೆ .

ನನ್ನ ಮೊದಲ ಆದ್ಯತೆ ಶೈಕ್ಷಣಿಕ ಅಭಿವೃದ್ಧಿ ಗೆ ಒತ್ತು ನೀಡುವುದೆ ನನ್ನ ಗುರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಸಂಸ್ಥೆ ಕಾರ್ಯದರ್ಶಿ ಸುದೀಪ್. ಕಾರ್ಯಧರ್ಶಿ ನಿವೃತ್ತ ಬಿಳ್ಕೋಡಿಗೆ ಮುಖ್ಯಪಾಧ್ಯಯ ಬಾಬುರೆಡ್ಡಿ.ಎಲ್ ಟಿ .ಬಸವರಾಜಪ್ಪ.ಡಿ ಡಿ ಹಾಲಪ್ಪ.ಸರ್ಕಾರಿ ನೌಕರರ ಸಂಘದ ಕಾರ್ಯಧರ್ಶಿ ತಿಪ್ಪೇಸ್ವಾಮಿ. ನಿವೃತ್ತ ಕನ್ನಡ ಉಪನ್ಯಾಸಕ ನಾಗರಾಜ್.ಮುಖಂಡರಾದ ಪಟೇಲ್ .ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಚಂದ್ರಣ್ಣ.ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶ್ರೀನಿವಾಸಗೌಡ .ಮುಖಂಡ ಪಲ್ಲಾಗಟ್ಟೆ ಶೇಖರಪ್ಪ. ಮುಖಂಡರಾದ ಗೌಸ್ ಸೇರಿದಂತೆ ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!