Latest news today
By shukradeshenews | online news portal | Kannada news onlineshukradeshe news Kannada august 1 Editor m rajappa Vyasagondanahalli

ಜಗಳೂರು: ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಮೊಹರಂ ಹಬ್ಬದಲ್ಲಿ ಹಿರೇಮಲ್ಲನಹೊಳೆ ಗ್ರಾಮಸ್ಥರು ಅದ್ದೂರಿ ಆಚರಣೆಯೊಂದಿಗೆ ತೆರೆ ಎಳೆಯಲಾಯಿತು 

ತಾಲ್ಲೂಕಿನ ತೊರೆಸಾಲು ಭಾಗದ ಕೇಂದ್ರ ಸ್ಥಾನವಾದ ಹಿರೇಮಲ್ಲನಹೊಳೆ ಗ್ರಾಮದಲ್ಲಿ ಎಲ್ಲಾ ವರ್ಗದ ಸಮುದಾಯಗಳು ಶತ ಶತ ಮಾನಗಳ ಆಚರಿಸಿಕೊಂಡು ಬರುತ್ತಿದ್ದು ಈ ವರ್ಷವೂ ಸಹ ಸಂಭ್ರಮದ ಆಚರಣೆ ಮಾಡುವ ಮೂಲಕ ಪೀರ್ ಅಲ್ಲಾ ಸ್ವಾಮಿ‌ ಆಶೀರ್ವಾದ ಕ್ಕೆ ಪಾತ್ರರಾದರು 

ಪ್ರತಿ ವರ್ಷದಂತೆ ಒಳ್ಳೆಯ ನಕ್ಷತ್ರ ನೊಡಿ ಹಬ್ಬ ಆಚರಣೆಗೆ ಮಿಥುನ‌ ಇಟ್ಟು ನಂತರ ಓದಿಕೆ ಮಾಡಿ ಹಬ್ಬಕ್ಕೆ ಅಧಿಕೃತ ಗುದ್ದಲಿ ಹಾಕುವ ಮೂಲಕ ದೇವರನ್ನ ಹೊರತಂದು ಮೈ ತೊಳೆಯುವ ಕಾರ್ಯ ನೆಡೆಯುತ್ತದೆ ಅಲ್ಲಿಂದ ಗ್ರಾಮೀಣ ಭಾಷೆಯ ಪೀರ್ಲಾಬ್ಬ  ಮೊಹರಂ ಕಳೆಗುಟ್ಟಲಿದೆ 

ಕತ್ತಲರಾತ್ರಿ ಎಂದು ಕೆರೆಯುವ ಆದಿನದಂದು ಹಿಂಧೂ‌ ಮುಸ್ಲೀಂ ಎಲ್ಲಾ ಸಮುದಾಯಗಳು ಸಹೋದರರಂತೆ ವಾರ ಒಪ್ಪತ್ತು ಹಾಗು ಮಡಿಯಲ್ಲಿ ಪೀರ್ ಅಲ್ಲಾ ಸ್ವಾಮಿಗೆ ಹಾರ ಹರಕೆ ಅರ್ಪಿಸುತ್ತಾರೆ ಅದೊಂದು ವಿಶೇಷ ಹಬ್ಬವಂತ್ತೆ ಆಚರಿಸುವುದು ವಿಶೇಷವಾಗಿದೆ ಎಲ್ಲಿ ನೋಡಿದರು ಹೂವಿನ ಹಾರದ ಸುಗಂದ  ಹಾಗು ಊದು ಬತ್ತಿ ಲೋಭಾನ ಸಕ್ಕರೆ ಬೆಲ್ಲ ನೈವೇದ್ಯ ಪಾನಕ‌ ಆರ್ಪಣೆ  ಸಲಕ ಕಾಂಕೈರ್ಯ ನೆಡೆಯಲಿವೆ 

ನಂತರ ಮಜಾಲಸಿ ಹಾಗು ಅಲ್ಲಾದ ಗುಣಿ ಬೆಂಕಿ ಹಾಕಿ ಕೆಂಡಕ್ಕೆ ಅಣಿಮಾಡುವುದು ರಾತ್ರಿಇಡೀ ತಮಣೆ ಮಜಾಲ್ಸಿ ಯೊಂದಿಗೆ ಎಲ್ಲಾ ಸಮುದಾಯ ವರ್ಗದ ಜನರು ಕುಣಿದು ಕುಪ್ಪಳಿಸುತ್ತಾರೆ ಬಂದು ಭಾಂಧವರನ್ನ ಮಾತನಾಡಿಸುವುದು ಯೋಗ ಕ್ಷೇಮ‌ಕೇಳುವುದು ಹಳೇ ಸ್ನೇಹಿತರನ್ನ ಬೇಟಿ‌ಮಾಡುವುದು ಸೇರಿಂತೆ ಇದೊಂದು ಭಾವೈಕ್ಯತೆ ಸಂಭ್ರಮಕ್ಕೆ ಸಾಕ್ಷಿಯಾಗಿದೆ 

ಮಂಗಳವಾರ ಮುಂಜಾನೆ ನುಸುಕಿನ ವೇಳೆ ಪೀರ್ ಅಲ್ಲಾ ಸ್ವಾಮಿ ಸಾಂಪ್ರದಾಯಿಕವಾಗಿ ಊರಿನ ಪರ್ಕೆ ಟೀಪಜ್ಜ ಅವರ ಮಗ ಭಾಷಾ ಸಾಬ್ ಅವರಿಗೆ ದೈವ ವಶವಾಗಿ ಊರಲ್ಲಿ ಕುರುಗಳಿಗಾಗಿ ಹುಡುಕಿ ನಂತಹ ಹೊಳೆ ಮುಳಿಗಿ ಕೆಂಡ ತುಳಿಯುತ್ತದೆ ನಂತರ ಭಕ್ತರು  ದೈವ ವಾಣಿ ನಂಬಿಕೆಯಂತೆ ತಮ್ಮ ಇಷ್ಠಾರ್ತಗಳನ್ನ ಈಡೇರಿಸಿಕೊಳ್ಳಲು ದೇವರ ಮೊರೆಹೋಗಿ ಹೇಳಿಕೆ ಕೇಳಿಸಿ ಕೊಳ್ಳುತ್ತಾರೆ 

ಹಲವು ವರ್ಷಗಳಿಂದಲೂ‌ ನೆಡೆದು ಕೊಂಡು ಬಂದ ಸಂಪ್ರದಾಯದಂತೆ ಮದುವೆ ಆಗದೇ ಇರುವ ಕನ್ಯೆಯರು , ಯುವಕರು , ಮದುವೆ ಆಗಿ ಮಕ್ಕಳಾಗದೆ ಇರುವ ಹೆಣ್ಣುಮಕ್ಕಳು ,  ಜನಸಾಮಾನ್ಯರು ತಮ್ಮ ಇಷ್ಠಾರ್ಥಗಳನ್ನ ಬೇಡಿ ಕೊಳ್ಳುತ್ತಾರೆ ನೊಂದವರಿಗೆ ಪೀರ್ ಅಲ್ಲಾ ಸ್ವಾಮಿ‌ ನೆರವು ನೀಡುತ್ತಾನೆ ಎಂಬ ನಂಬಿಕೆ ಇಲ್ಲಿನ‌ ಭಕ್ತರದು 

ಸಂಜೆ 5 ಕ್ಕೆ ವಿವಿದ ಕಾರ್ಯಕ್ರಮಗಳಿಂದ ಮಜಾಲ್ಸಿಗಳಿಂದ ಮಿಂದೆಳುವ ಗ್ರಾಮಸ್ಥರು ಸ್ವಾಮಿಯ ಅಲ್ಲೇದು ಕುಣಿ ಮುಚ್ಚುವ ಮೂಲಕ ದೇವರನ್ನ ನೀರಿಗೆ ಕಳಿಸಿ ಗ್ರಾಮದ ಎಲ್ಲಾ ವರ್ಗದ ಸಮುದಾಯಗಳಿಗೆ ಪ್ರಾಧನ್ಯತೆ ನೀಡಿ ಎಲ್ಲಾ ಆಗರಾರರು ತಳವಾರರು ,ಯಜನಾನರ ಸಮ್ಮುಖದಲ್ಲಿ ದೇವರ ಕಾಂಕೈರ್ಯ ಮುಗುಸುತ್ತಾರೆ 

ನಂತರ ವಾಪಾಸ್ಸು ಬರುವಾಗ ಪೀರ್ ಅಲ್ಲಾ ಸ್ವಾಮಿ ಸಹೋದರರು ಸಾಮಾಜಿಕ ಹಾಗು ಐಹಿತ್ಯದ ಸಾಧನೆಗಳ‌ ಬಗ್ಗೆ  ಕನ್ನಡ ಉರ್ದು ಭಾಷೆಯಲ್ಲಿ ಸಾಮೂಹಿಕವಾಗಿ ದುಖಃದೊಂದಿಗೆ ಹಾಡುವ ಮೂಲಕ ಸಾಗಿ ಬಂದು ಅಂತಿಮ‌ ಓದಿಕೆ‌ ಮಾಡಿ ಹಬ್ಬಕ್ಕೆ ತೆರೆಯೆಳಿಯುತ್ತಾರೆ 

ಈ ಹಬ್ಬದ ಸಂಭ್ರದಲ್ಲಿ ಗ್ರಾಮದ ಎಲ್ಲಾ ವರ್ಗದ ಸಮುದಾಯ ಸೇರಿ ಅಚರಿಸುವುದು ವಿಶೇಷವಾಗಿತ್ತು

Leave a Reply

Your email address will not be published. Required fields are marked *

You missed

error: Content is protected !!