CHITRADURGA. ಕ್ರೈಂ ನ್ಯೂಸ್
ಗುಪ್ತಾಂಗಕ್ಕೆ ವಿಕೆಟ್‍ನಿಂದ ಚುಚ್ಚಿದ ಪತಿ- ಪತ್ನಿ ಸ್ಥಿತಿ ಗಂಭೀರ

Latest news today
By shukradeshenews | online news portal | Kannada news onlineshukradeshe news Kannada August 1 Editor m rajappa Vyasagondanahalli

ಚಿತ್ರದುರ್ಗ: ಗಂಡ-ಹೆಂಡ್ತಿ ನಡುವೆ ಜಗಳಗಳು ಸಾಮಾನ್ಯ. ಈ ಕೋಪ-ತಾಪಗಳು ಕೇವಲ ನಿಮಿಷಗಳಷ್ಟೇ ಇರುತ್ತವೆ. ಆದರೆ ಇಲ್ಲೊಬ್ಬ ಪತಿಮಹಾಶಯ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರೆದ ಆಘಾತಕಾರಿ ಘನೆಯೊಂದು ನಡೆದಿದೆ. ಈ ಘಟನೆ ನಡೆದಿರುವುದು ಚಿತ್ರದುರ್ಗ (Chitradurga) ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ.

ಹೌದು. ಪತ್ನಿಯ (Husband- Wife Fight) ಶೀಲ ಶಂಕಿಸಿರುವ ಪತಿ ಆಕೆಯ ಗುಪ್ತಾಂಗಕ್ಕೆ ವಿಕೆಟ್‍ನಿಂದ ಹಲ್ಲೆ ನಡೆಸಿ ಅಮಾನವೀಯತೆ ತೋರಿದ್ದಾನೆ. ಚಳ್ಳಕೆರೆಯ ಆರೋಗ್ಯ ಇಲಾಖೆಯಲ್ಲಿ ಫಾರ್ಮಸಿಸ್ಟ್ ಆಗಿರುವ ಭಾಸ್ಕರ್ ಹಾಗೂ ರೇಖಾ ಎಂಬ ದಂಪತಿ ಪಾವಗಡ ರಸ್ತೆಯ ಮನೆಯಲ್ಲಿ ವಾಸವಾಗಿದ್ದಾರೆ. ಭಾಸ್ಕರ್ ತನ್ನ ಪತ್ನಿ ರೇಖಾ ಶೀಲ ಶಂಕಿಸಿ ಗಲಾಟೆ ಆರಂಭಿಸಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು ಕೋಪಗೊಂಡ ಭಾಸ್ಕರ್ ಪತ್ನಿಯ ಗುಪ್ತಾಂಗಕ್ಕೆ ವಿಕೆಟ್ ನಿಂದ ಹಲ್ಲೆ ನಡೆಸಿದ್ದಾನೆ.

ಗುಪ್ತಾಂಗಕ್ಕೆ ಮನಬಂದಂತೆ ವಿಕೆಟ್ ನಿಂದ ಚುಚ್ಚಿರುವ ಆಸಾಮಿ, ಮನೆಯೊಳಗೆಲ್ಲಾ ರಕ್ತ ಚಿಮ್ಮಿದರು ಸಹ ಹಲ್ಲೆಯನ್ನು ನಿಲ್ಲಿಸದೇ ಥಳಿಸಿ ಗಂಭೀರವಾಗಿ ಗಾಯಗೊಳಿಸಿದ್ದಾನೆ. ಹೀಗಾಗಿ ಆಕೆಯ ಸ್ಥಿತಿ ತೀವ್ರ ಗಂಭೀರವಾಗಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯ್ತು. ಆದರೆ ಗುಪ್ತಾಂಗದ ಸಮೀಪದಲ್ಲಿ ಗಂಭೀರವಾದ ಗಾಯಗಳಾಗಿರುವ ಹಿನ್ನೆಲೆಯಲ್ಲಿ ಆಕೆಯ ಸ್ಥಿತಿ ಶೋಚನೀಯವಾಗಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಸ್ಥಳೀಯರ ಮಾಹಿತಿ ಪ್ರಕಾರ, ಪತಿ ಭಾಸ್ಕರ್ ಮಾನಸಿಕ ಖಿನ್ನತೆಗೊಳಗಾಗಿ ಈ ರೀತಿ ವಿಕೃತಿ ಮೆರೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಆರೋಪಿ ಭಾಸ್ಕರ್ ಪೊಲೀಸರ ವಶದಲ್ಲಿದ್ದು, ಚಳ್ಳಕೆರೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣ ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚಿತ್ರದುರ್ಗ, ಪತಿ, ಪತ್ನಿ

Leave a Reply

Your email address will not be published. Required fields are marked *

You missed

error: Content is protected !!