Kannada | online news portal | Kannada news online
Search
Shukradeshe suddi Kannada | online news portal | Kannada news online
Kannada | online news portal | Kannada news online ಆಗಸ್ಟ್ 3
ಜಗಳೂರು ಸುದ್ದಿ :- ಕ್ರಾಂತಿ ಕಾರಿ ನಿಲುವಿನ ಹೋರಾಟದ ದ್ವನಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಆಡಳಿತ ರಾಜ್ಯದಲ್ಲಿ ದಿಟ್ಟತನದ ಹೆಜ್ಜೆಗೆ ಸಾಕ್ಷಿಯಾಗಿದೆ ಅವರ ಹುಟ್ಟು ಆಚರಣೆ ವೇಳೆ ಶಾಸಕ ಬಿ ದೇವೆಂದ್ರಪ್ಪ ಶ್ಲಾಘನೆ.
14 ಬಜೆಟ್ ಮಂಡನೆ ಮಾಡಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಅಹಿಂದ ನಾಯಕ ಸಿ ಎಂ ಸಿದ್ದರಾಮಯ್ಯ ರವರು ರಾಜ್ಯಕ್ಕೆ ಮಾದರಿಯಾಗಿದ್ದಾರೆ ಅವರ ಹುಟ್ಟು ಹಬ್ಬದ ಅಂಗವಾಗಿ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಅಭಿಮಾನಿಗಳ ಜೊತೆ ಹಾಲು ಹಣ್ಣು ಬ್ರೇಡ್ ವಿತರಿಸುತ್ತಿರುವ ಶಾಸಕರು
ಮುಖ್ಯಮಂತ್ರಿ ಸಿದ್ದರಾಮಯ್ಯ ರವರ 76 ನೇ ಹುಟ್ಟು ಹಬ್ಬದ ಅಂಗವಾಗಿ ಗುರುವಾರ ಶಾಸಕರ ಜನಸಂಪರ್ಕ ಕಛೇರಿಯಲ್ಲಿ ಶಾಸಕರ ನೇತೃತ್ವದಲ್ಲಿ ಆಪಾರ ಕಾಂಗ್ರೆಸ್ ಅಭಿಮಾನಿ ಬಳಗದವರು ಕೇಕ್ ಕತ್ತರಿ ನಂತರ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಾಲು ಹಣ್ಣು ವಿತರಿಸಿ ಹುಟ್ಟು ಹಬ್ಬವನ್ನ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಶಾಸಕ ಬಿ ದೇವೆಂದ್ರಪ್ಪ ಮಾತನಾಡಿ ರಾಜ್ಯದಲ್ಲಿ 13 ಬಜೆಟ್ ಗಳುನ್ನು ಮಂಡನೆ ಮಾಡಿ ರಾಜ್ಯದ ಜನತೆಗೆ ಚುನಾವಣೆಯಲ್ಲಿ ಘೋಷಣೆ ಮಾಡಿದಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕಾಯಕ ನಿಷ್ಠೆ ಅನ್ನದಾಸೋಹಕ್ಕೆ ಒತ್ತು ನೀಡಿ ಬಡವರ ಅಸಿವು ನೀಗಿಸಿ ರಾಜ್ಯದಲ್ಲಿಯೆ ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಸಾಕ್ಷಿಯಾಗಿದ್ದಾರೆ.ಬಸವಣ್ಣ ಕಂಡ ಕನಸು ಬುದ್ದ ಬಸವ ಅಂಬೇಡ್ಕರ್ ತತ್ವಚಿಂತನೆಯಲ್ಲಿ ಅವರ ಆಡಳಿತ ಸುಧಾರಣೆ ಶ್ರಮಿಸುವರು.ವಿರೋಧ ಪಕ್ಷದವರು ಸಹ ಅವರ ವ್ಯಕ್ತಿತ್ವವನ್ನು ಒಪ್ಪಿಕೊಳ್ಳುವ ಅಪ್ಪಿಕೊಳ್ಳುವ ಧೀಮಂತ ಮಾದರಿ ಮುಖ್ಯಮಂತ್ರಿ ಜೊತೆಯಲ್ಲಿ ನಾವು ಶಾಸಕರಾಗಿ ಕೆಲಸ ಮಾಡುವುದೆ ಒಂದು ಬಾಗ್ಯವಾಗಿದೆ.ಅವರು ಕೇವಲ ರಾಜ್ಯ ನಾಯಕತ್ವಕ್ಕೆ ಸೀಮಿತವಲ್ಲ ಅವರು ರಾಷ್ಟ್ರ ನಾಯಕರು ಎಂದು ಶ್ಲಾಘಿಸಿದರು .ನಾವು ಕೂಡ ಅವರ ಮಾರ್ಗದರ್ಶನದಲ್ಲಿ ದಿಟ್ಟ ಹೆಜ್ಜೆಯಿಡುವ ಮೂಲಕ ಕ್ಷೇತ್ರಕ್ಕೆ ಅನುದಾನ ತಂದು ತಾಲ್ಲೂಕು ಅಭಿವೃದ್ಧಿಗೆ ಶ್ರಮಿಸುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕಳೆದ ವರ್ಷದಲ್ಲಿ ಅವರ ಹುಟ್ಟು ಹಬ್ಬ ದಾವಣಗೆರೆ ನಗರದಲ್ಲಿ ಸುಮಾರು 10 ಲಕ್ಷ ಜನ ಅಭಿಮಾನಿಗಳು ಸೇರಿಕೊಂಡು ವಿಜ್ರಂಭಣಿಯಿಂದ ಆಚರಣೆ ದಾಖಲೆಯಾಯಿತ್ತು ಎಂದ ಸ್ಮರಿಸಿದರು.
ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ ಮಾತನಾಡಿ ಕ್ರಾಂತಿ ಕಾರಿ ನಿಲುವಿನ ಹೋರಾಟದ ನಾಯಕ ಸಿ ಎಂ ಸಿದ್ದರಾಮಯ್ಯ ರವರು ಕೇವಲ ರಾಜ್ಯ ನಾಯಕರಲ್ಲದೆ ಅವರೊಬ್ಬ ರಾಷ್ಟ್ರ ನಾಯಕರು ರಾಜ್ಯದಲ್ಲಿ ಎರಡನೇ ಬಾರಿಯಾಗಿ ಮುಖ್ಯಮಂತ್ರಿಯಾಗಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲು ಆ ದೇವರು ಆರೋಗ್ಯ ಬಾಗ್ಯ ಸುಖಕರವಾಗಿ ಮೀಡುವಂತಾಗಲಿ ಎಂದು ಆಶಿಸಿದರು. ಇದೆ ಸಂದರ್ಭದಲ್ಲಿ 94 ಸಿಸಿ ಕಾಯ್ದೆಡಿಯಲ್ಲಿ ಸರ್ಕಾರಿ ಗೋಮಾಳದಲ್ಲಿ ಮನೆ ಕಟ್ಟಿಕೊಂಡಿರುವ ನರೇನಹಳ್ಳಿ ಗ್ರಾಮದ ಬಡ ಕುಟುಂಬದ ಫಲಾನುಭವಿಗಳಿಗೆ ಶಾಸಕರು ಹಕ್ಕು ಪತ್ರ ವಿತರಿಸಿ .ಕ್ಯಾನ್ಸರ್ ಪೀಡಿತ ವ್ಯಕ್ತಿಯೊಬ್ಬರಿಗೆ ಆರೋಗ್ಯ ಚಿಕಿತ್ಸೆ ಗಾಗಿ ನಿಧಿ ಸಂಗ್ರಹಣೆ ಮಾಡಿ ಶಾಸಕರು 10 ಸಾವಿರ ರೋ ನೀಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಷಂಷೀರ್ ಆಹಮದ್. ಬ್ಲಾಕ್ ಕಾಂಗ್ರೆಸ್ ಮಾಜಿ ಅದ್ಯಕ್ಷ ಪಿ ಎಸ್ ಸುರೇಶ್ ಗೌಡ್ರು.ಕೆಪಿಸಿಸಿ ಸದಸ್ಯರಾದ ಕಲ್ಲೇಶ್ ರಾಜ್ ಪಟೇಲ್.ಕುರಬ ಸಮಾಜದ ಅದ್ಯಕ್ಷ ಹೊಮಣ್ಣ.ಮಾಜಿ ಪಪಂ ಅದ್ಯಕ್ಷ ಮಾಜಿ ಮಂಜಣ್ಣ.ಪಪಂ ಸದಸ್ಯರಾದ ರಮೇಶ್ ರೆಡ್ಡಿ.ಬೊರ್ ಮಂಜಣ್ಣ. ಮುಖಂಡ ಸುದೀರಣ್ಣ.ಜಗಳೂರುಯ್ಯ.ಅಲ್ಪಸಂಖ್ಯಾತ ಘಟಕದ ಅದ್ಯಕ್ಷ ತಿಪ್ಪೇಸ್ವಾಮಿ. ದಲಿತ ಮುಖಂಡ ಜಿ ಎಚ್ ಶಂಭುಲಿಂಗಪ್ಪ.ಹಟ್ಟಿ ತಿಪ್ಪೇಸ್ವಾಮಿ.ಮಹಿಳಾ ಕಾಂಗ್ರೆಸ್ ಸದಸ್ಯೆ ಸಾವಿತ್ರಮ್ಮ.ಸೇರಿದಂತೆ ಹಾಜರಿದ್ದರು.