ಕ್ಯಾಸೆನಹಳ್ಳಿ ಗ್ರಾಮ : ಅಧ್ಯಕ್ಷೆರಾಗಿ ಎ ಡಿ ಬಸಮ್ಮ ಉಪಾಧ್ಯಕ್ಷರಾಗಿ ಹನುಮಂತಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ‌ ಎಂದು ಚುನಾವಣೆ ಅಧಿಕಾರಿ ಮಂಜುನಾಥ ಘೋಷಿಸಿದ್ದಾರೆ.

Kannada | online news portal | Kannada news online

Search
Shukradeshe suddi Kannada | online news portal | Kannada news online
Kannada | online news portal | Kannada news online August 4

ತಾಲ್ಲೂಕಿನ ಕ್ಯಾಸೆನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎ ಡಿ‌ ಬಸಮ್ಮ ಮಂಜಣ್ಣ ಹಾಗೂ ಉಪಧ್ಯಕ್ಷರಾಗಿ ಹನುಮಂತಪ್ಪ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಮಿನುಗಾರಿಕೆ ಇಲಾಖೆ ಸಹಾಯಕ ‌ನಿರ್ದೇಶಕ ಮಂಜುನಾಥರವರು ಶುಕ್ರವಾರ ಅಧಿಕೃತವಾಗಿ ಘೋಷಣೆ ಮಾಡಿದರು.

ತಾಲ್ಲೂಕಿನ ಗ್ರಾಮ ಪಂಚಾಯತಿಗಳ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಬಸಮ್ನ ಮಂಜಪ್ಪ ಆಯ್ಕೆಯಾಗಿದ್ದು . ಸಾಮಾನ್ಯ ಮೀಸಲು ಉಪಾಧ್ಯಕ್ಷ ಸ್ಥಾನಕ್ಕೆ ಹನುಮಂತಪ್ಪ ಆಯ್ಕೆಯಾಗಿದ್ದಾರೆ ಇವರ ವಿರುದ್ದ ಯಾವುದೇ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ ಕಣದಲ್ಲಿ ಅದ್ಯಕ್ಷ ಸ್ಥಾನಕ್ಕೆ ಬಸಮ್ಮರವರು ಒಬ್ಬರೆ ನಾಮ ಪತ್ರ ಸಲ್ಲಿಸಿದ್ದರು ಉಪಾಧ್ಯಕ್ಷ ಸ್ಥಾನಕ್ಕೆ ಹನುಮಂತಪ್ಪ ರವರು ಒಬ್ಬರೆ ಕಣದಲ್ಲಿದ್ದು ಎಲ್ಲಾ ಸರ್ವಸದಸ್ಯರ ಬಹುಮತದೊಂದಿಗೆ ಅದ್ಯಕ್ಷ ಉಪಾದ್ಯಕ್ಷರುನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಕ್ಯಾಸೆನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 18 ಜನ ಸದಸ್ಯರಿದ್ದು ಸರ್ವಸದಸ್ಯರ‌ ಬೆಂಬಲ ವ್ಯಕ್ತಪಡಿಸಿದ್ದರಿಂದ ಬಸಮ್ಮ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿ.

ಉಪಾಧ್ಯಕ್ಷ ಸ್ಥಾನಕ್ಕೆ ಹನುಮಂತಪ್ಪರವರುನ್ನು ಆಯ್ಕೆ ಮಾಡಲಾಗಿದೆ.

ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಿದ್ದಂತೆ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.

ನೂತನವಾಗಿ ಆಯ್ಕೆಯಾದ ಅದ್ಯಕ್ಷರು ಅಧಿಕಾರ ಸ್ವೀಕರಿಸಿ ಅಧ್ಯಕ್ಷರಾದ ಬಸಮ್ಮ ಮಾತನಾಡಿ, ನಾವು ಜನರ ಸೇವಕರು. ಜನರ ಆಶಯಕ್ಕೆ ತಕ್ಕಂತೆ ಕಾನೂನಾತ್ಮಕ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು

.ಈ ಸಂದರ್ಭದಲ್ಲಿ ‌ ಮಾಜಿ ಅದ್ಯಕ್ಷರಾದ ನಾಗರಾಜ್.ಬಸವರಾಜ್‌ ಡಿ ಎಚ್ .ಸದಸ್ಯರಾದ.ಸಿದ್ದೇಶ್ವರ. ಸುಧಾ ಅಂಜಿನಪ್ಪ. ಸದಸ್ಯರಾದ.ರೇಣುಕಮ್ಮ.ದಾಕ್ಷಯಿಣಮ್ಮ.ರತ್ನಮ್ಮ.ಪಾರ್ವತಮ್ಮ.ಅಂಜಿನಮ್ಮ.ಮಾಜಿ ಉಪಾದ್ಯಕ್ಷ ಹುಚ್ಚಪ್ಪ.ಮಾಜಿ ಉಪಾಧ್ಯಕ್ಷ ನಾಗರಾಜ್.ಸದಸ್ಯರಾದ ಹನುಮಂತಪ್ಪ. ಎರ್ರಿತಾತಪ್ಪ.ನಾಗರತ್ನಮ್ಮ.ಮಂಜಮ್ಮ.ರೇವಣ್ಣ.ಸೇರಿದಂತೆ .ಪಂಚಾಯತಿ ಕಾರ್ಯದರ್ಶಿ ತಿಪ್ಪೇಸ್ವಾಮಿ. ಗುಮಾಸ್ತರಾದ ಮಂಜಣ್ಣ.ಮುಖಂಡ ಅಂಜಿನಪ್ಪ.ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!