Kannada | online news portal | Kannada news online August 7
Search
Shukradeshe suddi Kannada | online news portal | Kannada news online
Kannada | online news portal | Kannada news online
ಹಾಲೇಕಲ್ಲು ಗ್ರಾ.ಪಂ ಅಧ್ಯಕ್ಷರಾಗಿ ರೂಪಮದನ್ ಕುಮಾರ್,ಉಪಾಧ್ಯಕ್ಷರಾಗಿ ದೀಪಪ್ರವೀಣ್ ಕುಮಾರ್ ಅವಿರೋಧ ಆಯ್ಕೆ.
ತಾಲೂಕಿನ ಹಾಲೇಕಲ್ಲು ಗ್ರಾಮಪಂಚಾಯಿತಿ ನೂತನ ಅಧ್ಯಕ್ಷರಾಗಿ ರೂಪಮದನ್ ಕುಮಾರ್,ಉಪಾಧ್ಯಕ್ಷರಾಗಿ ದೀಪಪ್ರವೀಣ್ ಕುಮಾರ್ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 16 ಸದಸ್ಯರಿದ್ದು.ಸಾಮಾನ್ಯ ಮಹಿಳಾ ಮೀಸಲು ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದು.ಎಸ್ ಸಿ ಮಹಿಳಾ ಮೀಸಲು ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದು.ನಾಮಪತ್ರಗಳು ಊರ್ಜಿತವಾಗಿದ್ದು.ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಎಪಿಎಂಸಿ ಕಾರ್ಯದರ್ಶಿ ಗಿರೀಶ್ ನಾಯ್ಕ ಘೋಷಿಸಿದರು.
ಹೊಸಕೆರೆ ಗ್ರಾಪಂ ಅದ್ಯಕ್ಷ ಉಪಾದ್ಯಕ್ಷ ರಾಗಿ ಆಯ್ಕೆ
ದಾವಣಗೆರೆ ಜಗಳೂರು ತಾಲ್ಲೂಕಿನ ಹೊಸಕೆರೆ ಗ್ರಾಮ ಪಂಚಾಯತಿ ಅದ್ಯಕ್ಷರಾಗಿ ಸಿದ್ದವೀರಪ್ಪ ಹಾಗೂ ಉಪಾಕ್ಷರಾಗಿ ನಿಂಗಮ್ಮ ರವರು ಇಂದು ನಡೆದ ಚುನಾವಣೆಯಲ್ಲಿ ಎರಡು ಮತಗಳ ಅಂತರದಿಂದ ಜಯಗಳಿಸಿದ್ದಾರೆ ಎಂದು ಚುನಾವಣೆ ಅಧಿಕಾರಿ ಜಿಪಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಿ ಪುಟ್ಟಸ್ವಾಮಿ. ಘೋಷಿಸಿದ್ದಾರೆ.
ಸಾಮಾನ್ಯ ಮೀಸಲು ಕ್ಷೇತ್ರದ ಅದ್ಯಕ್ಷ ಸ್ಥಾನಕ್ಕೆ ಸಿದ್ದವೀರಪ್ಪ ಹಾಗು ಎಸ್ಸಿ ಮಹಿಳಾ ಮೀಸಲು ಉಪಾದ್ಯಕ್ಷ ಸ್ಥಾನಕ್ಕೆ ನಿಂಗಮ್ಮ ಇವರು ಇಂದು ನಡೆದ ಗುಪ್ತ ಮತದಾನದ ಚುನಾವಣೆಯಲ್ಲಿ ಸೋಮವಾರ ಬಹುಮತದೊಂದಿಗೆ ಆಯ್ಕೆಯಾಗಿದ್ದಾರೆ .
ತಾಲ್ಲೂಕಿನ ಹೊಸಕೆರೆ ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅದ್ಯಕ್ಷ ಉಪಾದ್ಯಕ್ಷರ ಸ್ಥಾನಗಳಿಗೆ ಜಿದ್ದ ಜಿದ್ದಿ ಪೈಪೋಟಿಯ ಏರ್ಪಟು ಕುತೂಹಲಕಾರಿ ಮೂಡಿಸಿತ್ತು . ಅದ್ಯಕ್ಷ ಸ್ಥಾನಕ್ಕೆ ಸಿದ್ದವೀರಪ್ಪ ಸ್ವರ್ಧಿಸಿದ್ದರು ಇವರ ವಿರುದ್ದ ಡಿ ಕೆ ಬಸವರಾಜ್.ಉಮೇದಾವಾರಿಕೆ ನಾಮಪತ್ರ ಸಲ್ಲಿಸಿದ್ದರು.ನೂತನವಾಗಿ ಅದ್ಯಕ್ಷ ಉಪಾದ್ಯಕ್ಷರಾಗಿ ಆಯ್ಕೆಯಾಗಿರುವ ಸಿದ್ದವೀರಪ್ಪ ಮತ್ತು ನಿಂಗಮ್ಮ ರವರಿಗೆ ತಲಾ 10 ಮತಗಳು ಲಭಿಸಿ ಜಯಗಳಿಸಿದರೆ ಇವರ ವಿರುದ್ದ ಕಣದಲ್ಲಿದ್ದ ಬಸವರಾಜ್ ಹಾಗೂ ರೇಖಾ ರವರಿಗೆ ತಲಾ 8 ಮತಗಳು ಗಳಿಕೆಯಾಗಿದ್ದು ಕೇವಲ ಎರಡು ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ.
ದಿದ್ದಿಗಿ ಗ್ರಾ.ಪಂ ಅಧ್ಯಕ್ಷರಾಗಿ ಗುತ್ಯಮ್ಮ ಸಿದ್ದಪ್ಪ ಉಪಾಧ್ಯಕ್ಷರಾಗಿ ಪವಿತ್ರಅವಿರೋಧ ಆಯ್ಕೆ
ಜಗಳೂರು ಸುದ್ದಿ: ತಾಲೂಕಿನ ದಿದ್ದಿಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಹುಚ್ಚಂಗಿಪುರ ಗುತ್ಯಮ್ಮ ಸಿದ್ದಪ್ಪ ಹಾಗೂ ಉಪಾಧ್ಯಕ್ಷರಾಗಿ ಪವಿತ್ರ ಆನಂದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 19 ಜನ ಸದಸ್ಯರಿದ್ದು.ಎಸ್ ಸಿ ಮಹಿಳಾ ಮೀಸಲು ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು.ಸಾಮಾನ್ಯ ಮಹಿಳಾ ಮೀಸಲು ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು.ನಾಮಪತ್ರ ಊರ್ಜಿತವಾಗಿದ್ದು.18 ಜನ ಸದಸ್ಯರುಗಳ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಲೋಕೋಪಯೋಗಿ ಇಲಾಖೆಯ ಎಇಇ ನಾಗರಾಜ್ ಘೋಷಿಸಿದರು.
ದೊಣ್ಣೆಹಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ಕೆ.ತಿಪ್ಪೇಸ್ವಾಮಿ ಉಪಾಧ್ಯಕ್ಷರಾಗಿ ಹನುಮಕ್ಕ ಅವಿರೋಧ ಅಯ್ಕೆ.
ತಾಲೂಕಿನ ದೊಣ್ಣೆಹಳ್ಳಿ ಗ್ರಾಮಪಂಚಾಯಿತಿ ನೂತನ ಅಧ್ಯಕ್ಷರಾಗಿ ಮರೇನಹಳ್ಳಿ ಕೆ. ತಿಪ್ಪೇಸ್ವಾಮಿ,ಉಪಾಧ್ಯಕ್ಷ ಹನುಮಕ್ಕ ಅವಿರೋಧವಾಗಿ ಆಯ್ಕೆಯಾದರು.
16 ಜನಸದಸ್ಯರಿದ್ದು.ಎಸ್ ಸಿ ಮೀಸಲು ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದು.ಊರ್ಜಿತವಾಗಿದ್ದು.ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದು.ಊರ್ಜಿತವಾದ ಹಿನ್ನೆಲೆ ಸದಸ್ಯರುಗಳ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಚುನಾವಣೆಅಧಿಕಾರಿಯಾಗಿ ಕಾರ್ಯನಿರ್ಹಿಸಿದ ತಾ.ಪಂ ಇಓ ಚಂದ್ರಶೇಖರ್ ಘೋಷಿಸಿದರು.
ಬಿಳಿಚೋಡು ಗ್ರಾ.ಪಂ ಅಧ್ಯಕ್ಷರಾಗಿ ಚಂದ್ರಮ್ಮಮಾಚಂದ್ರಪ್ಪ,ಉಪಾಧ್ಯಕ್ಷರಾಗಿ ನೀಲನಾಯ್ಕ ಆಯ್ಕೆ.
ಜಗಳೂರು ಸುದ್ದಿ:ತಾಲೂಕಿನ ಬಿಳಿಚೋಡು ಗ್ರಾಮಪಂಚಾಯಿತಿ ನೂತನ ಅಧ್ಯಕ್ಷರಾಗಿ ಚಂದ್ರಮ್ಮ ಮಾಚಂದ್ರಪ್ಪ ಅವರು ಆಯ್ಕೆಯಾದರು.
ಒಟ್ಟು 18 ಜನಸದಸ್ಯರಿದ್ದು.ಸಾಮಾನ್ಯ ಮಹಿಳಾ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚಂದ್ರಮ್ಮಮಾಚಂದ್ರಪ್ಪ ಹಾಗೂ ವನಜಾಕ್ಷಿ ಅವರು ನಾಮಪತ್ರ ಸಲ್ಲಿಸಿದ್ದರು.ಇಬ್ಬರ ನಾಮಪತ್ರಗಳು ಊರ್ಜಿತವಾಗಿದ್ದು.ವನಜಾಕ್ಷಿ 8 ಮತಗಳನ್ನು ಪಡೆದರೆ ಚಂದ್ರಮ್ಮ ಮಾಚಂದ್ರಪ್ಪ ಅವರು 10ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.ಎಸ್.ಸಿ ಮೀಸಲು ಉಪಾಧ್ಯಕ್ಷ ಸ್ಥಾನಕ್ಕೆ ನೀಲನಾಯ್ಕ,ಗೌರಮ್ಮ ರಮೇಶ್ ನಾಮಪತ್ರಸಲ್ಲಿಸಿದ್ದರು.ಗೌರಮ್ಮ ರಮೇಶ್ 8 ಮತಗಳನ್ನು ಪಡೆದರೆ ನೀಲನಾಯ್ಕ 10 ಮತಗಳನ್ನು ಪಡೆದು 2 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ಘೋಷಿಸಿದರು.
ಬಿಸ್ತುವಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆರಾಗಿ ಟಿ ಮಣಿ ಶಶಿನಾಯ್ಕ್ ಉಪಾಧ್ಯಕ್ಷರಾಗಿ ರತ್ನಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ತಹಶೀಲ್ದಾರ್ ಮಂಜಾನಂದ ಘೋಷಿಸಿದ್ದಾರೆ.
.