Kannada | online news portal | Kannada news online August 8

Search
Shukradeshe suddi Kannada | online news portal | Kannada news online
Kannada | online news portal | Kannada news online

ಜಗಳೂರು : ಸಮಾಜದಲ್ಲಿ ಶೋಷಿತರ ಸಮಸ್ಯೆಗಳಿಗೆ ಧ್ವನಿಯಾಗಿ ದಲಿತರ ಮನೆಯಲ್ಲಿ ಸ್ವಾಭಿಮಾನದ ಹಣತೆ ಹಚ್ಚಿದ ಕರ್ನಾಟಕದ ಅಂಬೇಡ್ಕರ್ ಎಂದೇ ಖ್ಯಾತರಾಗಿದ್ದ ಪ್ರೊ ಕೃಷ್ಣಪ್ಪ ಅವರ ಜೀವನ ಹೋರಾಟಗಳು ನಮ್ಮೆಲ್ಲರಿಗೂ ಸ್ಪೂರ್ತಿಯಾಗಬೇಕು ಎಂದು ದಸಂಸ ಪ್ರೋ ಕೃಷ್ಣಪ್ಪ ಸ್ಥಾಪಿತ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್ ಹೇಳಿದರು 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ನೂತನ‌ ಪಧಾದಿಕಾರಿಗಳ ಆಯ್ಕೆ ಹಾಗು ಸಂಘಟನೆ  ಸಮಾಲೋಚನೆ  ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಗಳೂರು ತಾಲ್ಲೂಕು ದಲಿತ ಸಂಘರ್ಷ ಸಮಿತಿ ಹೋರಾಟದ ಮುಖ್ಯ ಭೂಮಿಯಂತಿದೆ .ಕುಂದುವಾಡ ಮಂಜುನಾಥ

 ಹಲವಾರು ನಾಯಕರು ಸ್ವಾಭಿಮಾನದ ಬದುಕಿನೊಂದಿಗೆ ಚಳುವಳಿ ಕಟ್ಟಿ ನೊಂದವರ ನೆರವಿಗೆ ಬಂದು ಹೋರಾಟ ಮಾಡಿ ಸೌಲಭ್ಯ ಕೊಡಿಸಿದ ಉದಾಹರಣೆಗಳು ಇದ್ದಾವೆ ಆದರೆ ಇತ್ತೀಚಿನ ದಿನಗಳಲ್ಲಿ ಸಂಘಟನೆ ಹೋರಾಟದ ಕಿಚ್ಚು ಕಡಿಮೆಯಾಗಿದೆ ಪುನ ಹೊಸ ಹುರುಪಿನೊಂದಿಗೆ ಸಂಘಟನೆ ಕಟ್ಟಿ ಸಮಾಜವನ್ನ ಎಚ್ಚರಿಸುವ ಕೆಲಸ ಮಾಡಬೇಕಿದೆ ಎಂದರು 

ಜಗಳೂರು ತಾಲ್ಲೂಕು ನೂತನವಾಗಿ  ಸೂರಗೊಂಡನಹಳ್ಳಿ ಕುಬೇಂದ್ರಪ್ಪ ಅವರು ತಾಲ್ಲೂಕು ಸಂಚಾಲಕರಾಗಿ ಆಯ್ಕೆಯಾದರು ಅವರೊಂದಿಗೆ ಗೋಡೆ ದುರುಗಪ್ಪ , ಮುನಿಸ್ವಾಮಿ , ಶಿವಮೂರ್ತಿ , ರಂಗಪ್ಪ , ಸತ್ಯಮೂರ್ತಿ , ಎಂ.ಎಸ್.ನಜೀರ್ ಅಹಮದ್ ವಕೀಲ ಹನುಮಂತಪ್ಪ , ಎಂ.ರಾಜಪ್ಪ , ಸೇರಿದಂತೆ ಹದಿನೈದು ಸದಸ್ಯರ ಒಳಗೊಂಡ ತಾಲ್ಲೂಕು ಸಮಿತಿ ರಚಿಸಲಾಗಿದ್ದು ದಲಿತ ನೋವು ನಲಿವುಗಳಿಗೆ ಸ್ಫಂದಿಸಿ ಹೋರಾಟ ಮಾಡುವ ಮೂಲಕ ಚಳಿವಳಿಯನ್ನು ಪ್ರತಿ ಹಳ್ಳಿಗೆ ಮುಟ್ಟಿಸಿ ಎಂದರು 

ನೂತನ ದಸಂಸ ಪದಾಧಿಕಾರಿಗಳಿಗೆ ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ ಪಿ ಪಾಲಯ್ಯ .ಹಾಗೂ ಚಿತ್ರದುರ್ಗ ಮಾಜಿ ಜಿಪಂ ಸದಸ್ಯ ನರಸಿಂಹಮೂರ್ತಿ ದೋಣಿಹಳ್ಳಿ ಗ್ರಾಪಂ ಮಾಜಿ ಉಪಾದ್ಯಕ್ಷ ಎಂ ಎಸ್ ನಜೀರ್ ಆಹಮದ್ ಇವರು ಶುಭಾ ಕೋರಿದರು

ಈ ಸಂದರ್ಭದಲ್ಲಿ  ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಹಾಗು ಸಂರಕ್ಷಣಾ ಸಮಿತಿ ಅಧ್ಯಕ್ಷ ತುಪ್ಪದಹಳ್ಳಿ ಪೂಜಾರಿ ಸಿದ್ದಪ್ಪ , ಚಿತ್ರದುರ್ಗ ಜಿ.ಪಂ ಮಾಜಿ ಸದಸ್ಯ ನರಸಿಂಹ ಮೂರ್ತಿ , ದಾವಣಗೆರೆ ಮುಖಂಡರಾದ ಅಣಜಿ ಹನುಮಂತಪ್ಪ , ಪ್ರದೀಪ್ , ಜಗಳೂರು ಹೆಚ್.ಹನುಮಂತಪ್ಪ , ಮಂಜುನಾಥ್ , ತಾಯಿಟೋಣಿ ಬಾಬು ಸೇರಿದಂತೆ ಹಲವರು ಇದ್ದರು

Leave a Reply

Your email address will not be published. Required fields are marked *

You missed

error: Content is protected !!