Kannada | online news portal | Kannada news online
Search
Shukradeshe suddi Kannada | online news portal | Kannada news online
Kannada | online news portal | Kannada news online
ಗುರುಸಿದ್ದಾಪುರ ಗ್ರಾ.ಪಂ ನೂತನ ಅಧ್ಯಕ್ಷರಾಗಿ ರಮೇಶ್ ಉಪಾಧ್ಯಕ್ಷರಾಗಿ ಕರಿಬಸಮ್ಮ ಮಲ್ಲೇಶ್ ಆಯ್ಕೆ.
ಜಗಳೂರು ಸುದ್ದಿ:ತಾಲೂಕಿನ ಗುರುಸಿದ್ದಾಪುರ ಗ್ರಾಮಪಂಚಾಯಿತಿ ನೂತನ ಅಧ್ಯಕ್ಷರಾಗಿ ರಮೇಶ್ ಉಪಾಧ್ಯಕ್ಷರಾಗಿ ಕರಿಬಸಮ್ಮ ಮಲ್ಲೇಶ್ ಅವರು ಆಯ್ಕೆಯಾದರು.
ಒಟ್ಟು 16 ಜನ ಸದಸ್ಯರಿದ್ದು.ಸಾಮಾನ್ಯ ಮೀಸಲು ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಹಾಗೂ ಪ್ರತಿಸ್ಪರ್ಧಿಯಾಗಿ ಗುರುಸ್ವಾಮಿ ಉಮೇದುವಾರಿಕೆ ಸಲ್ಲಿಸಿದ್ದರು.ನಾಮಪತ್ರಗಳು ಊರ್ಜಿತವಾಗಿದ್ದು ನಡೆದ ಚುನಾವಣೆಯಲ್ಲಿ ರಮೇಶ್ 8 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ ಗುರುಸ್ವಾಮಿ 7 ಮತಗಳನ್ನು ಪಡೆದು ಪರಾಭವಗೊಂಡರು.ಎಸ್ ಟಿ ಮೀಸಲು ಉಪಾಧ್ಯಕ್ಷ ಸ್ಥಾನಕ್ಕೆ ಕರಿಬಸಮ್ಮಮಲ್ಲೇಶ್ ಹಾಗೂ ಮಾರಮ್ಮ ನಾಮಪತ್ರಸಲ್ಲಿಸಿದ್ದರು.ಕರಿಬಸಮ್ಮ ಮಲ್ಲೇಶ್ 9 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ
ಮಾರಮ್ಮ 6 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಪಿಐಆರ್ ಡಿ ಇಲಾಖೆ ಎಇಇ ಶಿವಮೂರ್ತಿ ಘೋಷಿಸಿದರು.
ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಮಾಗಡಿಮಂಜಣ್ಣ,ಹಳ್ಳಿ ಚೌಡಪ್ಪ,ಸತೀಶ್,ಬೊಮ್ಮಜ್ಜ,ಪದ್ಮಮಲ್ಲೇಶ್,ಮಾಚಿಕೆರೆ ಆನಂದಪ್ಪ,ಮುಖಂಡರಾದ ಕೆಂಚಪ್ಳ ಗಿರಿಯಪ್ಪ,ಪ್ರಕಾಶ್,ಅರಿಶಿನಗುಂಡಿರಮೇಶ್,
ವಿಎಸ್ ಎಸ್ ಎನ್ ಅಧ್ಯಕ್ಷ ದಳಪತಿ ಬಸೆಟೆಪ್ಪ,ಸದಸ್ಯ ಗಿರಿಯಪ್ಪ,ಕೆ.ಬಿ.ಮಂಜಣ್ಣ,ಜಿ.ಬಿ.ಬಸವರಾಜ್,ಡ್ರೈವರ್ ಹನುಮಂತಪ್ಪ,ಉಮೇಶಪ್ಪ,ಗಾರ್ಡ್ ರಮೇಶ್,ಮಲ್ಲೇಶ್ ಕೆ.ಬಿ.ಸಿ.ಮಂಜಪ್ಪ,ಬಿ.ಮಲ್ಲೇಶ್,ಪಿಡಿಓ ವಾಸುದೇವ,ಕ್ಲರ್ಕ್ ಕರಿಯಪ್ಪ,ಸೇರಿದಂತೆ ಇದ್ದರು.