Kannada | online news portal | Kannada news online

Search
Shukradeshe suddi Kannada | online news portal | Kannada news online
Kannada | online news portal | Kannada news online

ವಸತಿಶಾಲೆ ಡಿ ಗ್ರೂಪ್ ನೌಕರರನ್ನು ಖಾಯಂಗೊಳಿಸಲು ಮನವಿ

ಜಗಳೂರು ಸುದ್ದಿ:ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು 20 ವರ್ಷಗಳಿಂದ ಹೊರಗುತ್ತಿಗೆ ಯಾಗಿ ಸೇವೆಗೈಯುತ್ತಿರುವ ಡಿ ಗ್ರೂಪ್ ನೌಕರರನ್ನು ಖಾಯಂಗೊಳಿಸಲು ಒತ್ತಾಯಿಸಿ ಶಾಸಕ ಬಿ.ದೆವೇಂದ್ರಪ್ಪ ಅವರಿಗೆ ಮನವಿ ಸಲ್ಲಿಸಿ ಖಾಯಂಗೋಳಿಸಲು ಸದನದಲ್ಲಿ ದ್ವನಿ‌ ಎತ್ತುವಂತೆ ಮನವಿ ಪತ್ರ ಸಲ್ಲಿಸಲಾಯಿತು.

ಪಟ್ಟಣದ ಶಾಸಕರ ನಿವಾಸದಲ್ಲಿ ಏಕಲವ್ಯ,ಅಂಬೇಡ್ಕರ್,ಮೊರಾರ್ಜಿ,ಕಿತ್ತೂರು ರಾಣಿ ವಸತಿ ಶಾಲೆಗಳಲ್ಲಿ ಸೇವೆಗೈಯುತ್ತಿರುವ ಡಿ ಗ್ರೂಪ್ ನೌಕರರು ಸರಕಾರಕ್ಕೆ ಲಿಖಿತ ಮನವಿ ಸಲ್ಲಿಸಿದರು.

ರಾಜ್ಯದ ವಿವಿಧ ವಸತಿ ಶಾಲೆಗಳಲ್ಲಿ ಸೇವೆಸಲ್ಲಿಸುತ್ತಿರುವ ಡಿ ಗ್ರೂಪ್ ನೌಕರರು ಬಡತನದ ಜೀವನ ಸಾಗಿಸುತ್ತಿದ್ದು.ಸುಮಾರು ವರ್ಷಗಳಿಂದ ಯಾವುದೇ ವೃತ್ತಿ ಭದ್ರತೆಯಿಲ್ಲದೆ ವಸತಿ ಶಾಲೆ ಮಕ್ಕಳ ಸೇವೆಯಲ್ಲಿ ತೊಡಗಿದ್ದು‌.ಖಾಯಂ ಗೊಳಿಸಲು ಆಗಸ್ಟ್ 15 ರಂದು ನಡೆಯಲಿರುವ ಸಭೆಯಲ್ಲಿ ಚರ್ಚಿಸಬೇಕು ಎಂದು ಒತ್ತಾಯಿಸಿದರು..ನಮ್ಮ ವಸತಿ ಶಾಲೆ ಹೊರಗುತ್ತಿಗೆ ನೌಕರರುನ್ನು ಖಾಯಂಗೋಳಿಸುವಂತೆ ನಮ್ಮ ರಾಜ್ಯಾಧ್ಯಕ್ಷ ರ ಕರೆ ಮೇರೆಗೆ ಇಂದು ಜಗಳೂರು ಕ್ಷೇತ್ರದ ಮನವಿ ಮಾಡಿದ್ದು ನಮ್ಮ ಹೋರಾಟ ನಿರಂತರ ಎಂದರು .

ಶಾಸಕ ಬಿ.ದೆವೇಂದ್ರಪ್ಪ ಮನವಿ ಸ್ವೀಕರಿಸಿ ಸರಕಾರದ ಮಟ್ಟದಲ್ಲಿ ತಮ್ಮ ಬೇಡಿಕೆಗಳನ್ನು ಚರ್ಚಿಸಲಾಗುವುದು.ಕ್ರೈಸ್ ವಸತಿ ಶಾಲೆ ಯಲ್ಲಿ ನಡೆಯುತ್ತಿರುವ ವಸತಿ ಶಾಲೆಗಳ ಉನ್ನತೀಕರಣಕ್ಕೆ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಸಂದರ್ಭದಲ್ಲಿ ಡಿ ಗ್ರೂಪ್ ನೌಕರರ ಸಂಘದ ಪದಾಧಿಕಾರಿಗಳಾದ ರಂಗಸ್ವಾಮಿ .ಪರಶುರಾಮ. ಉದ್ಗಟ್ಟ ಶೇಖರಪ್ಪ,ದುರುಗೇಶ್,ಸಂತೋಷ್,ಮಣಿಕಂಠ,ಶಮಿನಾಬಾನು,ರೇಖಮ್ಮ,ಗೆಲಿಲ್,ಯಲ್ಲಪ್ಪ,ಮೂರ್ತಿ,ತಿಪ್ಪೇಸ್ವಾಮಿ,ನಾಗರಾಜ್,ರಂಗಸ್ವಾಮಿ,ಪರುಶರಾಮ್,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!