ಸುದ್ದಿ ಜಗಳೂರು
online news portal | Kannada news online
Search
Shukradeshe suddi Kannada | online news portal | Kannada news online
Kannada | online news portal | Kannada news online. ಆಗಸ್ಟ್ 9.. 2023
ಅಸಗೋಡು ಗ್ರಾ.ಪಂ.ಅಧ್ಯಕ್ಷರಾಗಿ ನಾಗಮ್ಮಚನ್ನಬಸಪ್ಪ,ಉಪಾಧ್ಯಕ್ಷರಾಗಿ ಶಕುಂತಲ ತಿಮ್ಮಪ್ಪ ಅವಿರೋಧ ಆಯ್ಕೆ.
:ತಾಲೂಕಿನ ಅಸಗೋಡು ಗ್ರಾಮಪಂಚಾಯಿತಿ ನೂತನ ಅಧ್ಯಕ್ಷರಾಗಿ ನಾಗಮ್ಮಚನ್ನಬಸಪ್ಪ, ಉಪಾಧ್ಯಕ್ಷರಾಗಿ ಶಕುಂತಲ ತಿಮ್ಮಪ್ಪ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣೆ ಅಧಿಕಾರಿ ಘೋಷಿಸಿದ್ದಾರೆ..
ಒಟ್ಟು 17 ಜನ ಸದಸ್ಯರಿದ್ದು.ಎಸ್ ಟಿ ಮೀಸಲು ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು.ಸಾಮಾನ್ಯ ಮೀಸಲು ಉಪಾಧ್ಯಕ್ಷ ಸ್ಥಾನ ಮೀಸಲು ಕ್ಷೇತ್ರಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು.ನಾಮಪತ್ರಗಳು ಊರ್ಜಿತವಾಗಿದ್ದು.ಸದಸ್ಯರ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಲೊಕೋಪಯೋಗಿ ಇಲಾಖೆ ಎಇಇ ನಾಗರಾಜ್ ಘೋಷಿಸಿದರು.
ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ರೇಣುಕಮ್ಮ,ಲಲಿತಮ್ಮ,ಜೆ.ಎಂ.ರವಿಕುಮಾರ್,ವೀರಮ್ಮ,ಜಿ.ಎನ್.ಶಿಲ್ಪ,ಜಿ.ಟಿ.ನಾಗರಾಜ,ಕೆ.ಬಿ.ಸರೋಜಮ್ಮ,ಎಚ್.ಆರ್.ಬಸವರಾಜಪ್ಪ,ಶಂಕ್ರಪ್ಪ,ಐ.ರೇಷ್ಮಾ,ನಸ್ರುಲ್ಲಾ,ಕೆ.ಎಂ.ಶಂಭುಲಿಂಗಪ್ಪ,ಮಂಜಮ್ಮ,ಎಂ.ಬಸವರಾಜ,ರಾಧಮ್ಮ,ಪಿಡಿಓ ಮರುಳಸಿದ್ದಪ್ಪ,ಕಾರ್ಯದರ್ಶಿ ಹನುಮಂತಪ್ಪ, ಸೇರಿದಂತೆ ಗ್ರಾಮದ ಮುಖಂಡರುಗಳಾದ ನಾಗರಾಜ್. ಪೂಜಾರ್ ಸಿದ್ದಣ್ಣ ಗ್ರಾ.ಪಂ ಸಿಬ್ಬಂದಿಗಳು ಸೇರಿದಂತೆ ಇದ್ದರು.