ಜಗಳೂರು:ತಾಲ್ಲೂಕಿನ ಅಣಬೂರು ‌ದೊಣ್ಣೆಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತಿ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಹಾಗು ಖಚಿತ ಭರವಸೆ ಪ್ರಣಾಳಿಕೆ ಪ್ರಚಾರ ಸಭೆಯಲ್ಲಿ ಶಾಸಕ ಹೆಚ್ ಪಿ ರಾಜೇಶ್ ರವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು

ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಬಿ.ಪಿ.ಎಲ್. ಕುಟುಂಬಕ್ಕೆ ತಲಾ 10 ಕೆ.ಜಿ.ಉಚಿತ ಅಕ್ಕಿ , 200 ಯುನಿಟ್ ಉಚಿತ ವಿದ್ಯುತ್ , ಹಾಗು ಕುಟುಂಬದ ಮಹಿಳೆಗೆ 2 ಸಾವಿರ ಸಹಾಯ ಧನ ,ಎಂಬ ಮೂರು ಪ್ರಮುಖ ಸೌಲಭ್ಯಗಳನ್ನ ನೀಡಲು ಪ್ರತಿ ಮನೆ ಮನೆಗೂ ಗ್ಯಾರಂಟಿ ಕಾರ್ಡ್ ವಿತರಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನ ತಳಮಟ್ಟದಿಂದ ಸಂಘಟಿಸಿ ಅಧಿಕಾರಕ್ಕೆ ತರಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಗಳೂರು ಪಟ್ಟಣಕ್ಕೆ ಇದೇ 10 ರಂದು ಜನಪ್ರಿಯ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಪ್ರಜಾ ಧ್ವನಿ ಕಾರ್ಯಕ್ರಮಕ್ಕಾಗಿ ಸಂಜೆ 6 ಗಂಟೆಗೆ ಆಗಮಿಸಲಿದ್ದಾರೆ ಅಣಬೂರು ಹಾಗು ದೊಣ್ಣೆಹಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಿಂದ ಹೆಚ್ಚಿನ‌ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿ ಗೊಳಿಸಿ ಎಂದು ಮನವಿ‌ ಮಾಡಿದರು

2013 ರಲ್ಲಿ ನಾನು ಶಾಸಕರಾಗಿದ್ದ ಅವದಿಯಲ್ಲಿ 57 ಕೆರೆ ನೀರು ತುಂಬಿಸುವ ಯೋಜನೆಗೆ ಬಜೆಟ್ ನಲ್ಲಿ ಹಣವನ್ನ ಘೋಷಣೆ ಮಾಡಿಸಿ ಜಾರಿ ಮಾಡಿಸಲಾಗಿತ್ತು ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಸೂಕ್ತ ಮಾರ್ಗ ನಿಗದಿ ‌ಮಾಡಲು ಸರ್ಕಾರದ ವತಿಯಿಂದ ಉಪ ಸಮಿತಿ ರಚಿಸಲಾಗಿತ್ತು ಇದರ ಜೊತೆಗೆ 15 ಸಾವಿರ ವಸತಿಗಳು 1200 ಭೂಮಿ ಹಕ್ಕು ಪತ್ರ , ಪಶುಭಾಗ್ಯ ಕೃಷಿಭಾಗ್ಯ ಸೇರಿದಂತೆ ಹಲವು ಯೋಜನೆಗಳನ್ನ ತಂದು ಅಬಿವೃದ್ದಿ ಪಡಿಸಿದ್ದೆ ಎಂದರು

ಕ್ಷೇತ್ರದ ಹಾಲಿ ಶಾಸಕ ಎಸ್.ವಿ.ರಾಮಚಂದ್ರ ಸುಳ್ಳು ಹೇಳುವ ಮೂಲಕ ಪ್ರಮುಖ ಯೋಜನೆಗಳಿಗೆ ಎಳ್ಳು ನೀರು ಬಿಟ್ಟಿದ್ದಾರೆ ಐದು ವರ್ಷ ಕಳೆದರೂ ಯಾವೊಂದು ಕೆರೆಗೆ ನೀರು ಬರಲಿಲ್ಲ ಭದ್ರಾ ಯೋಜನೆ ಮಾರ್ಗವೂ ಸಹ ನಿಗದಿಯಾಗಿಲ್ಲ ಒಂದೇ ಒಂದು ಮನೆ ಕೊಡಲಾಗಿಲ್ಲ ಜಲಜೀವನ್ ಮಿಷನ್ ಯೋಜನೆಯಡಿ ಒಂದೇ ಒಂದು ಹನಿ ನೀರು ಬಂದಿಲ್ಲ ವಸತಿ ಯೋಜನೆ ಸಹ ಇಲ್ಲ ಕೇವಲ ಸುಳ್ಳಿ ಹೇಳಿ ಕ್ಷೇತ್ರದ ಜನರನ್ನ ವಂಚಿಸಿದ್ದಾರೆ ಯಾವ ಯಾವ ಯೋಜನೆಗೆ ಎಷ್ಟು ಹಣ ಕಮಿಷನ್ ಪಡೆದಿದ್ದಾರೆ ಎಂಬುದನ್ನ ಮುಂದಿನ ದಿನಗಳಲ್ಲಿ ಬಿಚ್ಚಿಡುತ್ತೇನೆ ಎಂದು ಹರಿಹಾಯ್ದರು

ಕೆ.ಪಿ.ಪಾಲಯ್ಯ ಮಾತನಾಡಿ ರಾಜ್ಯ ಮತ್ತು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಹಳ್ಳಿ ಜನರ ಬದುಕು ಸುಧಾರಣೆ ಆಗಲಿದೆ ದೊಡ್ಡ ಪಕ್ಷದಲ್ಲಿ ಆಕಾಂಕ್ಷಿಗಳು ಇರುವುದು ಸಹಜ ಯಾರಿಗೇ ಟಿಕೆಟ್ ಕೊಟ್ಟರೂ ನಾವೆಲ್ಲ ಪಕ್ಷದ ಪರ ಕೆಲಸ‌ ಮಾಡಿ ಅಭ್ಯರ್ಥಿಯನ್ನ ಗೆಲ್ಲಿಸಿಕೊಂಡು‌ನಮ್ಮ ಕೆಲಸಗಳನ್ನ ಮಾಡಿಕೊಳ್ಳೊಣ ಮತದಾರರು ನೋವುಗಳಿಗೆ ನಾವು ಸ್ಪಂದಿಸಿ ಕೆಲಸ‌ಮಾಡಬೇಕು ಎಂದು ಹೇಳಿದರು ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಮಾತನಾಡಿ ಸುಳ್ಳುನ ಮನೆಯಲ್ಲಿಯೇ ವಾಸ ಮಾಡುವ ಬಿಜೆಪಿ ಪಕ್ಷದದವರು ಪ್ರದಾನ ‌ಮಂತ್ರಿಯಿಂದ ಕಾರ್ಯ ಕರ್ತರವರಿಗೂ ಬರೀ ಸುಳ್ಳು ಹೇಳುವುದೇ ಇವರ ದೊಡ್ಡ ಕಾಯಕ ಹೊರಗಿನಿಂದ ಬಂದವರು ನಮ್ಮ ಕ್ಷೇತ್ರದ ಜನತೆಗೆ ಭದ್ರಾ ನೀರು ಕುಡಿಸುತ್ತೇನೆ ಎಂದವರು ಮತ್ಯಾವುದೋ ನೀರು ಕುಡಿಸುವ ಮೂಲಕ ಜನತೆಗೆ ವಂಚನೆ ಮಾಡಿದ್ದಾರೆ ಅಂತವರನ್ನ ಕ್ಷೇತ್ರ ಬಿಟ್ಟು ತೊಲಗಿಸಲು ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ‌ಮಾಡೋಣ ಎಂದು ತಿಳಿಸಿದರು

ಕೆಪಿಸಿಸಿ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ ಕಾಂಗ್ರೆಸ್ ಪಕ್ಷದಿಂದ ಈಗಾಗಲೇ ಮಹತ್ವದ ಯೋಜನೆಗಳ ಭರವಸೆ ನೀಡಲಾಗಿದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಪಕ್ಷದ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಉಚಿತ ಕಾರ್ಡ್ ನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡೋಣ ಎಂದು ಹೇಳಿದರು

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್ , ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಎಸ್.ಕೆ.ರಾಮರೆಡ್ಡಿ ,ಮಾಜಿ ತಾ.ಪಂ.ಸದಸ್ಯ ಎಸ್ .ಬಿ‌.ಕುಬೇಂದ್ರಪ್ಪ , ಅಣಬೂರು ಗ್ರಾ.ಪಂ.ಅಧ್ಯಕ್ಷೆ ಕವಿತಾ ರೇಣುಕೇಶ್ ಹಿರೇಮಲ್ಲನಹೊಳೆ ಗ್ರಾ.ಪಂ.ಉಪಾಧ್ಯಕ್ಷ ಅನೂಪ್ ರೆಡ್ಡಿ , ಪಂಚಾಯತಿ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಪ್ರಹ್ಲಾದ್ ಗೌಡ , ಚಿತ್ತಪ್ಪ , ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕೆಂಚೋಳ್ , ಮಹಿಳಾ ಕಾರ್ಯದರ್ಶಿ ಸಾವಿತ್ರಮ್ಮ , ಪಲ್ಲಾಗಟ್ಟೆ ಶೇಖರಪ್ಪ , ಸಿ.ತಿಪ್ಪೇಸ್ವಾಮಿ ಸೇರಿದಂತೆ ಹಲವು ಮುಖಂಡರು ಇದ್ದರು

Leave a Reply

Your email address will not be published. Required fields are marked *

You missed

error: Content is protected !!