online news portal | Kannada news online
Search
Shukradeshe suddi Kannada | online news portal | Kannada news online
Kannada | online news portal | Kannada news online
Byshukradeshenews iPublished on August 14, 2023
ನಟ ಉಪೇಂದ್ರ ಗಡಿಪಾರಿಗೆ ಆಗ್ರಹಿಸಿ ದಸಂಸ ಪ್ರತಿಭಟನೆ ಊರ ಹೊಲಗೇರಿ ಜನರು ಎಂದು ಅವಹೇನಕಾರಿ ಹೇಳಿಕೆ ನೀಡಿ ತಳ ಸಮುದಾಯದ ಜನಾಂಗಕ್ಕೆ ಅವಮಾನ ಮಾಡಿರುವ ನಟನಿಗೆ ಕಠಿಣ ಶಿಕ್ಷೆ ವಿಧಿಸಿ
ಜಗಳೂರು ಪಟ್ಟಣದಲ್ಲಿ ಸೋಮವಾರ ಕೃಷ್ಣ ಸ್ಥಾಪಕ ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಕೆಲ ಹೊತ್ತು ಪ್ರತಿಭಟನಕಾರರು ನಟ ಉಪೇಂದ್ರ ವಿರುದ್ದ ಘೋಷಣೆ ಕೂಗಿ ದಲಿತ ಸಮುದಾಯದವರಿಗೆ ಅವಮಾನ ಮಾಡಿರುವ ನಟನಿಗೆ ತಕ್ಕ ಶಿಕ್ಷ ನೀಡಿ ಎಂದು ತಾಲ್ಲೂಕು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಆಕ್ರೋಶ ಹೊರ ಹಾಕಿದ್ದಾರೆ.
ಜಗಳೂರಿನಲ್ಲಿ ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ನಟ ಉಪೇಂದ್ರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಪ್ರಭಾರ ಮಂಜಾನಂದ ರವರಿಗೆ ಮನವಿ ಸಲ್ಲಿಸಲಾಯಿತು.
ಪ್ರಜಾಕೀಯ ಪಕ್ಷದ ಸಂಸ್ಥಾಪಕ ಹಾಗೂ ನಟ ಉಪೇಂದ್ರ ಅವರು ಮೊನ್ನೆ ಸಾಮಾಜಿಕ ಜಾಲತಾಣದಲ್ಲಿ ಮಾತನಾಡುವ ವೇಳೆ ಉದ್ದೇಶಪೂರ್ವಕವಾಗಿ ಜಾತಿ ನಿಂದನೆ ಮಾಡಿ ಅವಮಾನ ಮಾಡಿರುವುದು ಅವರ ಕುಷ್ಠಪೀಡಿತ ಮನಸ್ಥಿತಿಯನ್ನು ತೋರಿಸಿದ್ದಾರೆ ಅವನೊಬ್ಬ ಜಾತಿವಾದಿ ನಟ ಇವನು ಆಗ ಆಗ ಇಂತ ಹೇಳಿಕೆಗಳು ಹೇಳಿ ದಲಿತ ಅಸ್ಪೃಶ್ಯ ಸಮುದಾಯವನ್ನ ಘಾಸಿಗೋಳಿಸಿ ತುಳಿಯುವ ಹುನ್ನಾರವಿದೆ .ಇಂತ ಅಯೋಗ್ಯ ನಟನಿಗೆ ಎಪ್ ಐ ಆರ್ ದಾಖಲಿಸಿ ಈ ಕೂಡಲೇ ಅವರನ್ನು ಬಂಧಿಸಿ ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು
ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಮಿತಿ ಅದ್ಯಕ್ಷ ಪೂಜಾರ್ ಸಿದ್ದಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಡಿ ಎಸ್ ಎಸ್ ಸಂಚಾಲಕ ಕುಬೇರಪ್ಪ. ಚಿಕ್ಕ ಅರೆಕೆರೆ ನೀಲಪ್ಪ .ತಿಪ್ಪೇಸ್ವಾಮಿ. ಮಲ್ಲೇಶಿ. ಸಂಘಟನೆ ಸಂಚಾಲಕ ಪಲ್ಲಾಗಟ್ಟೆ ರಂಗಪ್ಪ.ಪದಾಧಿಕಾರಿಗಳಾದ ಗೊಡೆ ದುರುಗಣ್ಣ.ವೆಂಕಟೇಶ್.ಬಾಲು.ಮುನಿಸ್ವಾಮಿ.
ದಸಂಸ ಪದಾಧಿಕಾರಿಗಳಾದ ನಿಬಗೂರು ಮುನಿಸ್ವಾಮಿ.ಪಲ್ಲಾಗಟ್ಟೆ ರಂಗಪ್ಪ.ವೆಂಕಟೇಶ್. ನಾಗರಾಜ್.ಸಂಘಟನೆ ಸಂಚಾಲಕ ಗೌರಿಪುರದ ಸತ್ಯಮೂರ್ತಿ .ಮುಸ್ಟೂರು ನಿಂಗಪ್ಪ ಸೇರಿದಂತೆ ಹಾಜರಿದ್ದರು.