online news portal | Kannada news online
Search
Shukradeshe suddi Kannada | online news portal | Kannada news online
Kannada | online news portal | Kannada news online
Byshukradeshenews iPublished on August 14 , 2023
ಕವಿಗಳು ಮಾತನಾಡಬಾರದು ಕವಿತೆಗಳು ಮಾತಾನಾಡಬೇಕು-ಸಾಹಿತಿ ವೀರಭದ್ರಪ್ಪ ತೆಲಗಿ.
ಕವಿಗಳು ಮಾತನಾಡಬಾರದು ಕವಿತೆಗಳು ಮಾತಾನಾಡಬೇಕು. ಕವಿ ಎಂದರೆ ಕಂಡದ್ದನ್ನೆಲ್ಲ ವಿಮರ್ಶೆ ಮಾಡುವವ. ಕಾವ್ಯ ಅತ್ಯಂತ ಶಕ್ತಿಶಾಲಿ ಮಾಧ್ಯಮ ಎಂದು ಹಿರಿಯ ಸಾಹಿತಿ ವೀರಭದ್ರಪ್ಪ ತೆಲಗಿ ಮಾತನಾಡಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಸಮಿತಿ ವತಿಯಿಂದ ವಿನೋಬ ನಗರದಲ್ಲಿರುವ ಜ. ಜ. ಮು. ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ತುಂಗಭದ್ರೆ ಶೀರ್ಷಿಕೆಯಡಿ ಕವಿಗೋಷ್ಠಿಯಲ್ಲಿ ಅವರು ಸುಮಾರು 20ಕ್ಕೂ ಹೆಚ್ಚು ಕವಿಗಳ ಕವಿತೆಗಳ ಕುರಿತು ಅತ್ಯಂತ ಮನೋಘ್ನವಾಗಿ ಮಾತನಾಡಿದರು. ಪ್ರಾಸ್ತವಿಕ ನುಡಿಗಳನ್ನು ಕಾರ್ಯದರ್ಶಿಗಳಾದ ಪ್ರಶಾಂತ್ ಕೊಲ್ಕುಂಟೆ ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನಡೆದು ಬಂದ ದಾರಿಯ ಪಕ್ಷಿನೋಟವನ್ನು ತಿಳಿಸಿದರು. ದಾವಣಗೆರೆ ಘಟಕ ಸಂಚಾಲಕರಾದ ಅಣಬೇರು ತಾರೇಶ್ ಸ್ವಾಗತಿಸಿದರು. ಕವಯತ್ರಿ ಉಮಾದೇವಿಯವರು ಪ್ರಾರ್ಥನೆ ಮಾಡಿದರು. ತಾಲ್ಲೂಕು ಕಾರ್ಯದರ್ಶಿಗಳಾದ ಪಂಚಾಕ್ಷರಯ್ಯನವರು ವಂದನಾರ್ಪಣೆ ಮಾಡಿದರು. ಮಾಧ್ಯಮ ಸಂಪರ್ಕ ಪ್ರಮುಖರಾದ ಶ್ರೀಮತಿ ಸುನಿತಾಪ್ರಕಾಶ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಜಿಲ್ಲಾ ಸಹ ಸಂಯೋಜಕ ಅಮರೇಶ ಮತ್ತು ಅಭಾಸಾಪ ದಾವಣಗೆರೆ ಜಿಲ್ಲಾ ಸಮಿತಿಯ ಎಲ್ಲಾ ಸದ್ಯಸರು, ಶಾಲೆಯ ಆಡಳಿತ ಮಂಡಳಿಯವರು, ಶಿಕ್ಷಕರಾದ ರುದ್ರೇಶ್ ಮತ್ತಿತರರು ಉಪಸ್ಥಿತರಿದ್ದರು. ಅಭಾಸಾಪ ಜಿಲ್ಲಾ ಸಮಿತಿಯ ವತಿಯಿಂದ ಕಾರ್ಯಕ್ರಮಕ್ಕೆ ಸ್ಥಳಾವಕಾಶ ನೀಡಿದ ಶಾಲೆಯ ಆಡಳಿತ ಮಂಡಳಿಯವರಿಗೆ ಧನ್ಯವಾದ ತಿಳಿಸಲಾಯಿತು.