online news portal | Kannada news online

Search
Shukradeshe suddi Kannada | online news portal | Kannada news online
Kannada | online news portal | Kannada news online
Byshukradeshenews iPublished on August 18 .2023

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಎಂಟೂವರೆ ವರ್ಷದ ಪುಟ್ಟ ಬಾಲಕನ ಪೊಲೀಸ್ ಆಗುವ ಆಸೆಯನ್ನು ಈಡೇರಿಸಿದ ಘಟನೆಯು ಶಿವಮೊಗ್ಗ (Shivamogga) ದಲ್ಲಿ ನಡೆದಿದೆ. ಹೌದು, ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಗೆ ಬುಧವಾರ ಒಂದು ಗಂಟೆಯ ಮಟ್ಟಿಗೆ ಎಂಟೂವರೆ ವರ್ಷದ ಬಾಲಕ ಪೊಲೀಸ್ ಇನ್ಸ್ಪೆಕ್ಟ್ರ್ ಆಗಿ ಕರ್ತವ್ಯ ನಿರ್ವಹಿಸಿದ್ದು ಎಲ್ಲರ ಗಮನ ಸೆಳೆದಿತ್ತು.

ಹೌದು, ಬಾಲಕನ ಹೆಸರು ಆಜಾನ್ ಖಾನ್ (Ajan Khan) ಆಗಿದ್ದು 1 ನೇ ತರಗತಿಯಲ್ಲಿ ಓದುತ್ತಿದ್ದಾನೆ.‌ ಹೃದಯ ಸಂಬಂಧಿಸಿ ಖಾಯಿಲೆಯಿಂದ ಬಳಲುತ್ತಿರುವ ಹುಡುಗನನ್ನು ಹಾಲಿ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಹೃದಯಾಲಯ (Sahyadri Narayana Hrudayalaya) ದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ದೊಡ್ಡಪೇಟೆ ಪೊಲೀಸ್ ಠಾಣೆ (Doddapete Police Station) ಯ ಪಿಐ ಅಂಜನ್ ಕುಮಾರ್ (PI Anjan Kumar) ಅವರು ಬಾಲಕನಿಗಾಗಿ ಒಂದು ಗಂಟೆ ಅಧಿಕಾರವನ್ನು ಬಿಟ್ಟುಕೊಟ್ಟಿದ್ದಾರೆ.

ಪೊಲೀಸ್ ಠಾಣೆಗೆ ಬಂದು ತನ್ನ ಆಸೆಯಂತೆ ಪೊಲೀಸ್ ಇನ್ಸ್ಪೆಕ್ಟ್ರ್ ಆಗಿ ಕರ್ತವ್ಯ ನಿರ್ವಹಿಸಿದ್ದಾನೆ. ಪ್ರಾರಂಭದಲ್ಲಿ ಠಾಣೆಗೆ ಬಂದಾಗ ಖುದ್ದು ಎಸ್ಪಿ ಅವರು ಹೂವಿನ ಬೊಕ್ಕೆ‌ ನೀಡಿ ಸ್ವಾಗತಿಸಿದ್ದಾರೆ. ತದನಂತರದಲ್ಲಿ ಠಾಣೆ ಒಳಗೆ ಹೋಗಿ ಪೊಲೀಸ್ ಇನ್ಸ್ಪೆಕ್ಟ್ರ್ ಖುರ್ಚಿಯಲ್ಲಿ‌ ಕುಳಿತು ಕೊಂಡು ಠಾಣೆಯ ಸಿಬ್ಬಂದಿಯನ್ನು ಕರೆಯಿಸಿ ರೂಲ್ ಕಾಲ್ ನಡೆಸಿದ್ದಾನೆ.

ಶಿವಮೊಗ್ಗದ ಊರುಗಡೂರಿನ ತಬ್ರೇಜ್ ಖಾನ್ (Tharbrej Khan) ಹಾಗೂ ನಗ್ಮಾ (Nagma) ದಂಪತಿಯ ದ್ವಿತೀಯ ಪುತ್ರನೇ ಈ ಆಜಾನ್ ಖಾನ್ ಆಗಿದ್ದು, ಹುಟ್ಟಿನಿಂದಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆಜಾನ್ಗೆ ಪೊಲೀಸ್ ಆಗಬೇಕೆಂಬ ಆಸೆಯಿತ್ತು. ಈ ಬಾಲಕನ ಹೆತ್ತವರು ಈ ವಿಚಾರವನ್ನು ಶಿವಮೊಗ್ಗ ಜಿಲ್ಲಾ ವರಿಷ್ಠಾಧಿಕಾರಿ ಮಿಥುನ್ ಕುಮಾರ್ (Mithun Kumar) ಅವರಲ್ಲಿ ಹೇಳಿಕೊಂಡಿದ್ದಾರೆ. ಕೊನೆಗೆ ಶಿವಮೊಗ್ಗದ ಪೊಲೀಸರು ಈ ಬಾಲಕನ ಆಸೆಯನ್ನು ನೆರವೇರಿಸಿದ್ದಾರೆ.

ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸಿದ ಈ ಬಾಲಕ ಖುಷಿಗೆ ಪಾರವೇ ಇರಲಿಲ್ಲ ಈ ಬಗ್ಗೆ ಅನುಭವ ಹಂಚಿಕೊಂಡ ಬಾಲಕ, “ನನಗೆ ಪೊಲೀಸ್ ಆಗಬೇಕೆಂದು ಆಸೆ. ಅದಕ್ಕೆ ನಾನು ನನ್ನ ತಂದೆಗೆ ತಿಳಿಸಿದೆ. ನಾನು ಪೊಲೀಸ್ ಆಗಲು ಸಹಾಯ ಮಾಡಿದ ಎಸ್ಪಿ ಅವರಿಗೆ ಧನ್ಯವಾದಗಳು, ನಾನು ಪೊಲೀಸ್ ಠಾಣೆಗೆ ಬಂದಿದ್ದು ಖುಷಿಯಾಯಿತು” ಎಂದಿದ್ದಾನೆ.

ಇನ್ನು ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸಿದ್ದ ಬಾಲಕನ ಕುರಿತು ಮಾತನಾಡಿದ ಎಸ್ಪಿ ಮಿಥುನ್ ಕುಮಾರ್, ”ಬಾಲಕ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಪೋಷಕರು ನನಗೆ ತಿಳಿಸಿದರು. ಅದಕ್ಕಾಗಿ ನಾವು ಮಾನವೀಯತೆ ದೃಷ್ಟಿಯಿಂದ ಆಜಾನ್ ಖಾನ್ಗೆ ಒಂದು ಗಂಟೆ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಲಾಯಿತು. ಆತನನ್ನು ಪೊಲೀಸ್ ಜೀಪ್ನಲ್ಲೇ ಠಾಣೆಗೆ ಕರೆತರಲಾಯಿತು. ಈ ವೇಳೆ, ನಮ್ಮ ಪೊಲೀಸ್ ಸಿಬ್ಬಂದಿ‌ ಆತನಿಗೆ ಸೆಲ್ಯೂಟ್ ಹೊಡೆದು ಒಳಗೆ ಕರೆದುಕೊಂಡು ಬಂದು ಕರ್ತವ್ಯ ನಿರ್ವಹಿಸಲು ಸಹಕಾರ ನೀಡಲಾಯಿತು. ಠಾಣೆಗೆ ಬಂದ ಬಾಲಕ ಪೊಲೀಸ್ ಠಾಣೆಗೆ ಬಂದು ತುಂಬಾ ಖುಷಿಯಾಗಿದ್ದಾನೆ. ಬಾಲಕನ ಆಸೆಗಾಗಿ ಈ ಅವಕಾಶ ಕಲ್ಪಿಸಲಾಗಿದೆ” ಎಂದಿದ್ದಾರೆ.

ಮಗನ ಆಸೆಯನ್ನು ಈಡೇರಿಸಿದ ಖುಷಿಯ ನಡುವೆ ಮಾತನಾಡಿದ ತಂದೆ ಆಬ್ರೆಜ್‌ ಖಾನ್, ”ಅವರು ನನ್ನ ಮಗನಿಗೆ ಹೃದಯ ಸಂಬಂಧಿ‌ ಕಾಯಿಲೆ ಇದೆ. ಈತ ಮೂರು ವರ್ಷ ಇದ್ದಾಗಲೇ ಸಮಸ್ಯೆ ತಿಳಿಯಿತು. ನಂತರ ಈತನಿಗೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆಜಾನ್ ಖಾನ್ಗೆ ಹೃದಯ ಅರ್ಧ ಭಾಗ ಮಾತ್ರ ಇದೆ. ಈತನ ಹೃದಯದ ಆಪರೇಷನ್ ನಡೆಸಿ ಹೃದಯ ಬದಲಾಯಿಸಬಹುದು, ಇದರ ಜೊತೆಗೆ ಕೆಲ ಕೆಲ ಅಂಗಾಂಗಳು ಬೇಕಾಗಿವೆ. ಇವನದೇ ವಯಸ್ಸಿನ ಬಾಲಕರ ಹೃದಯ ಹಾಗೂ ಅಂಗಾಂಗ ಸಿಕ್ಕರೆ ಆಪರೇಷನ್ ಮಾಡಬಹುದು ಎಂದು ತಿಳಿಸಿದ್ದಾರೆ. ಇಂದು ಆತ ಪೊಲೀಸ್ ಆಗಲು ಸಹಕಾರ ನೀಡಿದ ಎಸ್ಪಿ ಅವರಿಗೆ ಅಭಿನಂದನೆ” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!