ಜಮೀನಿನಲ್ಲಿ ಹಾವುಕಚ್ಚಿ ವ್ಯಕ್ತಿ ಸಾವು.
ಜಗಳೂರು ಸುದ್ದಿ:ತಾಲೂಕಿನ ಮೆದಕೇರನಹಳ್ಳಿ ಗ್ರಾಮದ ಜಮೀನಿನಲ್ಲಿ ನೇಕಾರ ದೆವೇಂದ್ರಪ್ಪ (58)ತಂದೆ ರಂಗಪ್ಪ ಎಂಬ ವ್ಯಕ್ತಿ ಹಾವುಕಚ್ಚಿ ಸಾವನ್ನಪ್ಪಿದ್ದಾರೆ.
online news portal | Kannada news online
Search
Shukradeshe suddi Kannada | online news portal | Kannada news online
Kannada | online news portal | Kannada news online
Byshukradeshenews iPublished on August 18 2023
ಘಟನೆ ವಿವರ:ಹರಪನಹಳ್ಳಿ ತಾಲೂಕು ಬೂದಿಹಾಳ್ ಗ್ರಾಮದ ಮೂಲದವರಾದ ದೆವೇಂದ್ರಪ್ಪ ದಂಪತಿಗಳು ಮೆದಕೇರನಹಳ್ಳಿ ಗ್ರಾಮದವರಾದ ಜಗಳೂರಿನಲ್ಲಿ ಫೈನಾನ್ಸ್ ನಡೆಸುತ್ತಿರುವ ಸುರೇಶ್ ಗೌಡ ಅವರ ಜಮೀನಿನಲ್ಲಿ 8 ತಿಂಗಳಿನಿಂದ ಕೂಲಿ ಕೆಲಸಕ್ಕೆ ಸಂಬಳವಿದ್ದು.ಮಾಸಿಕವಾಗಿ ₹13000 ಕೂಲಿ ಸಂಬಳ ನೀಡುತ್ತಿದ್ದರು.ತೋಟದ ಮನೆಯಲ್ಲಿ ವಾಸವಾಗಿದ್ದೆವು ಗುರುವಾರ ರಾತ್ರಿ 8 ಗಂಟೆಗೆ ಅಡಿಕೆ ತೋಟದಲ್ಲಿ ಪಂಪ್ ಸೆಟ್ ಆನ್ ಮಾಡಿ ಡ್ರಿಪ್ ಹಾಕಿ ಬರುವಾಗ ಹಾವುಕಚ್ಚಿದ ಪರಿಣಾಮ ಕೆಲ ನಿಮಿಷಗಳಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪತ್ನಿ ಸಾಕಮ್ಮ ಪತ್ರಿಕೆಗೆ ತಿಳಿಸಿದರು.
ಸಂಬಂಧಿಸಿದಂತೆ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.