ಜಗಳೂರು ಸುದ್ದಿ
ರೈತರ ಪಂಪ್ ಸೆಟ್ ಗಳಿಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ಪೂರೈಸುವಂತೆ ರೈತರ ಪ್ರತಿಭಟನೆ
online news portal | Kannada news online
Search
Shukradeshe suddi Kannada | online news portal | Kannada news online
Kannada | online news portal | Kannada news online
Byshukradeshenews iPublished
By shukradeshenews August 19,
By -August 19, 2023
- ಸಮರ್ಪಕ ವಿದ್ಯುತ್ ಪೂರೈಕೆ ವಿದ್ಯುತ್ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಗಳೂರು ಪಟ್ಟಣದ ಬೆಸ್ಕಾಂ ಇಲಾಖೆಯ ಕಚೇರಿಯ ಮುಂದೆ ರೈತರು ಪ್ರತಿಭಟನೆ ನಡೆಸಿ ಸರ್ಕಾರಿ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ನಂಜುಂಡುಸ್ವಾಮಿ ಬಣದ ಪದಾಧಿಕಾರಿಗಳು ಪಟ್ಟಣದ ಅತ್ತಿರದ ಬೆಸ್ಕಾಂ ಇಲಾಖೆಗೆ ತೆರಳಿ ರೈತರ ಪಪಂಸೆಟ್ ಗಳಿಗೆ ಹಗಲು ವೇಳೆ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಬೆಸ್ಕಾಂ ಇಲಾಖೆ ಸಹಾಯಕ ಇಂಜಿನೀಯರ್ ಗಿರೀಶ್ ನಾಯ್ಕ್ ರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ರೈತರು ಸಾಗಿ ಬೆಸ್ಕಾಂ ಇಲಾಖೆ ಆವರಣದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ಪ್ರೊ.ನಂಜುಂಡಸ್ವಾಮಿ ಬಣದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ತಾಲ್ಲೂಕಿನ ಮರೇನಹಳ್ಳಿ ಗ್ರಾಮದಲ್ಲಿ ದಿನನಿತ್ಯ ರಾತ್ರಿಯ ವೇಳೆ ಕಾಡುಪ್ರಾಣಿಗಳಾದ ಕರಡಿ ಮತ್ತು ಕಾಡುಹಂದಿ ಹಾಗೂ ವಿಷ ಸರ್ಪಗಳ ಹಾವಳಿ ಹೆಚ್ಚಾಗಿರುವುದರಿಂದ ರಾತ್ರಿಯ ವೇಳೆ ರೈತರು ತಮ್ಮ ಜಮೀನುಗಳಲ್ಲಿ ಬೆಳೆಗಳಿಗೆ ನೀರನ್ನು ಆಯಿಸಲು ಹೋದಾಗ ಈ ಎಲ್ಲಾ ಕಾಡುಪ್ರಾಣಿಗಳು ರೈತರ ಮೇಲೆ ದಾಳಿ ಮತ್ತು ವಿಷ ಜಂತುಗಳ ಹಾವಳಿ ಹೆಚ್ಚಾಗಿವೆ ರೈತರ ಜೀವ ಪ್ರಾಣಕ್ಕೆ ಹಾನಿಯನ್ನು ಉಂಟು ಮಾಡುತ್ತಿವೆ ಆದ್ದರಿಂದ ಹಗಲು ವೇಳೆ ವಿದ್ಯುತ್ ಪೂರೈಕೆ ಮಾಡಿದರೆ ರೈತರು ಅತ್ಯಂತ ಸಹಕಾರಿಯಾಗುವುದು..೮
ಇದೀಗ ತಾಲ್ಲೂಕಿನಲ್ಲಿ ಮಳೆಯಿಲ್ಲದೆ ವಿದ್ಯುತ್ ಅಭಾವದಿಂದ ಸೂಕ್ತ ನೀರು ಪೂರೈಕೆ ಯಾಗದೆ ಹಾಳಾಗಿರುವ ಮೆಕ್ಕೆಜೋಳ ಈರುಳ್ಳಿ ಇನ್ನಿತರ ಬೆಳೆಗಳನು ಬೆಳೆಗಳು ಮಳೆಯಿಲ್ಲದೆ ಒಣಗುತ್ತಿವೆ.
ಕಾಡಂಚಿನ ವ್ಯಾಪ್ತಿಯಲ್ಲಿರುವ ಜಮೀನುಗಳಿಗೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿರುತ್ತದೆ ರಾತ್ರಿ ಸಮಯದಲ್ಲಿ ಜಮೀನುಗಳಲ್ಲಿ ಬೆಳೆಗಳಿಗೆ ನೀರು ಒದಗಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಹಗಲು ವೇಳೆಯಲ್ಲಿ ಸಂಪೂರ್ಣ 3 ಫೇಸ್ ವಿದ್ಯುತ್ ಪೂರೈಕೆ ಮಾಡುವಂತೆ ಜಗಳೂರು ಕರ್ನಾಟಕ ವಿದ್ಯುತ್ ಪ್ರಸರಣ ಕಚೇರಿ ಇಲಾಖೆ ಸಹಸಯಕ ಇಂಜಿನಿಯರ್ ರವರಿಗೆ ಮನವಿ ಸಲ್ಲಿಸಿದರು. ರೈತ ಸಂಘದ ಪದಾಧಿಕಾರಿಗಳು ,ಸದಸ್ಯರು ಮತ್ತು ಮರೇನಹಳ್ಳಿ ಗ್ರಾಮದ ಎಲ್ಲ ರೈತರು ಸೇರಿಕೊಂಡು ಪ್ರವಾಸ ಮಂದಿರದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಜಗಳೂರು ಕರ್ನಾಟಕ ವಿದ್ಯುತ್ ಪ್ರಸರಣ ಕಚೇರಿಗೆ ತೆರಳಿದ ನಂತರ ಮರೇನಹಳ್ಳಿ ಗ್ರಾಮದ ರೈತರ ಜಮೀನುಗಳಿಗೆ ಕಾಡು ಪ್ರಾಣಿಗಳ ಹಾವಳಿಯಿಂದಾಗಿ ರೈತರ ಪ್ರಾಣಕ್ಕೆ ಹಾನಿ ಉಂಟಾಗುವುದರಿಂದ ಪ್ರತಿದಿನ ಪಂಪ್ ಸೆಟ್ ಗಳಿಗೆ ಕೊಡುವ ವಿದ್ಯುತ್ತ್ ನ್ನು ಹಗಲು ವೇಳೆಯಲ್ಲಿ ನೀಡಬೇಕೆಂದು ಸಹಾಯಕ ಇಂಜಿನಿಯರ್ ಗಿರೀಶ್ ನಾಯ್ಕ್ ರವರಿಗೆ ಮನವಿ ನೀಡಿದರು..ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ಪ್ರೊ.ನಂಜುಂಡಸ್ವಾಮಿ ಬಣದ ಅಧ್ಯಕ್ಷರಾದ ಗಡಿಮಾಕುಂಟೆ ಶ್ರೀ ಬಸವರಾಜಪ್ಪ , ಗೌರವಧ್ಯಕ್ಷರಾದ ಭರಮಸಮುದ್ರ ಗುರುಸಿದ್ದಪ್ಪ .,ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ನಾಯಕ. ,ಜಂಟಿ ಕಾರ್ಯದರ್ಶಿ ಶ್ರೀ ಕುಮಾರ್ ,ಕಾರ್ಯಕಾರಿಣಿ ಸಂಚಾಲಕರು ಪೈಲ್ವಾನ್ ತಿಪ್ಪೇಶ್ , ಮತ್ತು ರೈತ ಸಂಘದ ಸದಸ್ಯರು,ಮರೇನಹಳ್ಳಿ ಗ್ರಾಮದ ರೈತ ಮುಖಂಡರಾದ ಶ್ರೀ ನಾಗರಾಜ್ ಹಾಗೂ ಮರೇನಹಳ್ಳಿ ಗ್ರಾಮದ ಸಮಸ್ತ ರೈತ ಬಾಂಧವರು ಉಪಸ್ಥಿತರಿದ್ದರು.