By shukradeshenews
Kannada | online news portal | Kannada news online
Shukradeshenews Kannada | online news portal | Kannada news online

ಸುದ್ದಿ ಜಗಳೂರು.

ಸಮಾಜದಲ್ಲಿರುವ ಮೌಡ್ಯತೆ ಕಂದಚಾರಗಳುನ್ನು‌ ಹೋಗಲಾಡಿಸಲು ಮಾನವ ಬಂಧುತ್ವ ವೇದಿಕೆಯಿಂದ ಬಸವ ಪಂಚಮಿ ಅಂಗವಾಗಿ ಹುತ್ತಕ್ಕೆ ಹಾಲು ಎರೆಯುವ ಬದಲು ಅಪೌಷ್ಟಿಕ ಮಕ್ಕಳಿಗೆ ಹಾಲು ವಿತರಿಸುವಂತೆ ಜಾಗತಿಕ ಜಾಗೃತಿ ಅಗತ್ಯ ಎಂದು ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ ಪಿ ಪಾಲಯ್ಯ ಹೇಳಿದರು.

ಪಟ್ಟಣದ ಲಕ್ಷ್ಮಮ್ಮ ಶಾಲಾ ಅಂಗಳದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಬಸವ ಪಂಚಮಿ ಅಂಗವಾಗಿ ವಿದ್ಯಾರ್ಥಿಗಳಿಗೆ ಪೌಷ್ಟಿಕ ಹಾಲು ವಿತರಣೆ ಹಾಗೂ ಮೌಡ್ಯ ವಿರೋಧ ಜಾಗೃತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ ಪಿ ಪಾಲಯ್ಯ ಬಡ ಮಕ್ಕಳಿಗೆ ಪೌಷ್ಟಿಕವಾದ ಹಾಲು ವಿತರಿಸಿ ಕಾರ್ಯಕ್ರಮವನ್ನದ್ದೆಶಿಸಿ ಮಾತನಾಡಿಸರು ಬಸವ(ನಾಗ)ಪಂಚಮಿಯಂದು ಕಲ್ಲನಾಗರಕ್ಕೆ , ಹಾವಿನ ಹುತ್ತಕ್ಕೆ, ಹಾಲನೆರೆದು ವ್ಯರ್ಥ ಮಾಡಬೇಡಿ,
ಬದಲಾಗಿ ಅನಾಥ ಮಕ್ಕಳಿಗೆ, ರೋಗಿಗಳಿಗೆ ಹಾಲು ಕೊಟ್ಟು ಮಾನವೀಯತೆ ಮೆರೆಯಿರಿ. ಭಾರತೀಯರು ಆಚರಿಸುವ ಎಲ್ಲಾ ಹಬ್ಬಗಳು ಜನಪದ ಸಂಸ್ಕೃತಿ ಮತ್ತು ಜೀವನ ಮೌಲ್ಯಗಳನ್ನು ತಿಳಿಸುವ ವೈಚಾರಿಕ ಪ್ರಜ್ಞೆಯಿಂದ ಕೂಡಿವೆ .ಆದರೆ ಕಾಲಾನಂತರದಲ್ಲಿ ಪುರೋಹಿತ ಶಾಹಿಗಳು ಅರ್ಥವಿಲ್ಲದ ಆಚರಣೆ ಸೃಷ್ಠಿಸಿ ಪುರಾಣ ಕಥೆಗಳ ಮೂಲಕ ವೈಭವಿಕರಿಸಿ ಜನರಲ್ಲಿ ಭಯ ಮೂಡಿಸಿ ಮೌಢ್ಯವನ್ನು ಹೆಚ್ಚಿಸುವ ನಿರಂತರ ಪ್ರಯತ್ನ ಇಂದಿನವರೆಗೆ ಮುಂದುವರೆದಿದೆ. ಶೇ 80ರಷ್ಟು ಭಾರತೀಯ ಸಮಾಜ ಇಂದಿನ ವಿಜ್ಞಾನ ಯುಗದಲ್ಲಿ ಮೂಢನಂಬಿಕೆ, ಅಂಧಶ್ರದ್ಧೆಯ ಸಮೂಹಕ್ಕೆ ಒಳಗಾಗಿ ಧ್ವನಿ ಕಳೆದುಕೊಂಡಿದ್ದು ಸಮಾಜದ ದುರಂತ ಎಂದು ವಿಷಾಧ ವ್ಯಕ್ತಪಡಿಸಿದರು.

ಮಾನವ ಬಂಧುತ್ವ ವೇದಿಕೆ ಕಾನೂನು ಸಲಹೇಗಾರರು ವಕೀಲರಾದ ಮರೆನಹಳ್ಳಿ ಬಸವರಾಜ್ ಮಾತನಾಡಿದರು ಕರ್ನಾಟಕ ರಾಜ್ಯದ ಘನವೆತ್ತ ಸಚಿವರಾದ ಸತೀಶ್ ಜಾರಕಿಹೊಳಿರವರ ಸಂಸ್ಥಾಪಕತ್ವದಲ್ಲಿ ಸ್ಥಾಪಿಸಲಾಗಿರುವ ಮಾನವ ಬಂಧುತ್ವ ವೇದಿಕೆ ವತಿಯಿಂದ ಇಂತ ಅನೇಕ ಮೌಡ್ಯಮುಕ್ತ ಕಾರ್ಯಗಳು ಆಯೋಜನೆ ಮಾಡುವ ಮೂಲಕ ವೈಚಾರಿಕ ವೈಜ್ಞಾನಿಕದ ಕಡೆಗೆ ಜನರುನ್ನು ಜಾಗೃತಿಗೋಳಿಸುವಂತ ಕಾರ್ಯ ಸಾರ್ಥಕವಾಗಿದೆ.ಸಂವಿಧಾನದ ಆಶಯಗಳನ್ನು ‌ ಅದರ ಸೌಲಭ್ಯಗಳನ್ನು ಪಡೆದು ತಮ್ಮ ಭವಿಷ್ಯವನ್ನ ಉಜ್ವಲಗೋಳಿಸಿಗೊಳ್ಳಬೇಕೆ ವಿನ ಕಂದಾಚಾರಗಳಿಗೆ ಬಲಿಯಾಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಾಗಪಂಚಮಿ ದಿನ ಕಲ್ಲುನಾಗರಕ್ಕೆ ಮತ್ತು ಹುತ್ತಕ್ಕೆ ಹಾಲನ್ನೆರೆಯುವುದು ಎಷ್ಟು ಸಮಂಜಷ? ಎನ್ನುವ ಯೋಚನೆ ಮಾಡಬೇಕಿದೆ. .ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆ ಪದಾಧಿಕಾರಿಗಳಾದ ದೋಣಿಹಳ್ಳಿ‌ ಗ್ರಾಪಂ ಉಪಾದ್ಯಕ್ಷ ನಜೀರ್ ಆಹಮದ್.ಮಹಾಬಜ್ಜ. ವಕೀಲರಾದ ನಾಗೇಶ್ ಬಸವರಾಜ್. ತಿಪ್ಪೇಸ್ವಾಮಿ. ನಾಯಕ ಸಮಾಜದ ಮುಖಂಡ ಬಡಣ್ಣ.ಪೈಲ್ವಾನ್ ತಿಪ್ಪೇಸ್ವಾಮಿ. ಸತೀಶ್.ಧನ್ಯಕುಮಾರ್.ತಿಪ್ಪೇಸ್ವಾಮಿ. ಮಹಾಲಿಂಗಪ್ಪ.ಶಾಲಾ ಶಿಕ್ಷಕರು ಸೇರಿದಂತೆ ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!