ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹ ಲಕ್ಷ್ಮಿ ಯೋಜನೆ‌ಡಿಯಲ್ಲಿ ಫಲಾನುಭವಿಗಳಿಗೆ ಲೋಪವಾಗದಂತೆ 2000 ಹಣ ಜಮಾ ಮಾಡಿ ಮೈಸೂರಿನಲ್ಲಿ ಆ. ದಿ 30 ರಂದು ಮುಖ್ಯಮಂತ್ರಿಗಳಿಂದ ವಿದ್ಯುಕ್ತವಾಗಿ ಚಾಲನೆ ನೀಡುವರು ಎಂದು ಶಾಸಕ ಬಿ ದೇವೆಂದ್ರಪ್ಪ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಅಧಿಕಾರಿಗಳು ಜವಾಬ್ದಾರಿ ವಹಿಸಿ – ಶಾಸಕ.ಬಿ.ದೇವೇಂದ್ರಪ್ಪ ಸೂಚನೆ.
editor
Last updated: 2023/08/21 at 4:36 PM
By
editor
Share

ಶುಕ್ರದೆಸೆ ನ್ಯೂಸ್ ಜಗಳೂರು :- ಸರ್ಕಾರದ ಮಹತ್ವಾಕಾಂಕ್ಷೆ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹ ಲಕ್ಷ್ಮೀ ಯೋಜನೆಡಿಯಲ್ಲಿ ಪ್ರತಿಯೊಬ್ಬ ಮನೆ ಯಜಮಾನಿಗೆ ಪ್ರತಿ ತಿಂಗಳು ಎರಡು ಸಾವಿರ ಹಣ ಖಾತೆಗೆ ಜಮಾ ಮಾಡಲಾಗುವುದು ಇದೇ ತಿಂಗಳು ದಿ 30 ರಂದು ನಮ್ಮ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಮೈಸೂರಿನಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ ಎಂದು‌ ಶಾಸಕರು ಸಭೆಯನ್ನುದ್ದೆಶಿಸಿ ಮಾತನಾಡಿದರು.

ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಶಾಸಕರ ಅದ್ಯಕ್ಷತೆಯಲ್ಲಿ ಸಭೆ ಏರ್ಪಡಿಸಲಾಗಿತ್ತು.ಸಭೆಯಲ್ಲಿ ತಾಲ್ಲೂಕು ನೋಡಲ್ ಅಧಿಕಾರಿಯಾಗಿ ನೇಮಕವಾಗಿರುವ ಆಹಾರ ಮತ್ತು ನಾಗರೀಕ ಸರಾಬರಾಜು ಇಲಾಖೆ ಉಪನಿರ್ದೇಶಕ ಸಿದ್ದರಾಮ್ ಮರಿಹಾಳ್ ರವರು ಮಾಹಿತಿ ನೀಡಿದರು ಈ ಯೋಜನೆಗೆ ಸಂಬಂಧಿಸಿದಂತೆ ತಾಂತ್ರಿಕ ದೋಷಗಳಿದ್ದರೆ ಸರಿಪಡಿಸಿಕೊಂಡು ಗೃಹಲಕ್ಷ್ಮಿ ಯೋಜನೆಯನ್ನು ಯಶಸ್ವಿಯಾಗಿ ತಲುಪಿಸಲು ತುರ್ತಾಗಿ ಕಾರ್ಯ ಪ್ರವೃತ್ತರಾಗಿ ಎಂದು ಅಧಿಕಾರಿಗಳಿಗೆ ಕಡಕ್ ಆಗಿ ಸೂಚನೆ ನೀಡಿದರು..

ಮೈಸೂರಿನಲ್ಲಿ ಮುಖ್ಯಮಂತ್ರಿಗಳಿಂದ ನಡೆಯವ ಕಾರ್ಯಕ್ರಮದ ಅಂಗವಾಗಿ ಆ ದಿನ ಜಗಳೂರು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಆಯೋಜಿಸಿ ಪರಿಣಾಮಕಾರಿಯಾಗಿ ತಾಂತ್ರಿಕ ದೋಷಗಳಿಗೆ ಪರಿಹಾರ ಒದಗಿಸಲಾಗುವುದು.

ಅಧಿಕಾರಿಗಳು ತಮ್ಮ ಕರ್ತವ್ಯ ಮರೆಯದಂತೆ ನಿಗಾವಹಿಸಿ‌ಕೆಲಸ ಮಾಡುವಂತೆ ತಿಳಿಸಿದರು..

ಆಹಾರ ಮತ್ತು ನಾಗರಿಕ ಇಲಾಖೆ‌ ಉಪನಿರ್ದೇಶಕ ಸಿದ್ದರಾಮ್ ಮರಿಹಾಳ್ ಮಾತನಾಡಿ,ಸ್ತ್ರೀಯರ ಸಬಲೀಕರಣದ ಉದ್ದೇಶ ದಿಂದ ಗೃಹಲಕ್ಷ್ಮಿ ಯೋಜನೆ ಜಾರಿಯಾಗಿದೆ .ಸರಕಾರ ನಿರ್ದೇಶನ ದಂತೆ ಮುಖ್ಯಂತ್ರಿಗಳ ಗೃಹಲಕ್ಷ್ಮಿ ಯೋಜನೆ ಚಾಲನಾ ಕಾರ್ಯ ಕ್ರಮ 10×10 ಇಂಚಿನ ಎಲ್ ಇಡಿ ಟಿ ವಿ ಮೂಲಕವಾಗಲಿ ಹಾಗೂ ಸ್ಕ್ರೀನ್ ಮೂಲಕ ನೇರಪ್ರಸಾರ ಗ್ರಾಮಪಂಚಾ ಯಿತಿ ವ್ಯಾಪ್ತಿ ಕನಿಷ್ಠ 2000 ಜನರಿಗೆ ತಲುಪಬೇಕು.ತಾಲೂಕಿನಲ್ಲಿ 42968 ಪಡಿತರ ಚೀಟಿಗಳಲ್ಲಿ 36902 ಶೇ. 86 ರಷ್ಟು ಅರ್ಜಿ ಸಲ್ಲಿಸಿದ್ದಾರೆ.ಎಪಿಎಲ್ ಫಲಾನುಭವಿಯೂ ಅರ್ಜಿಸಲ್ಲಿಸಬಹುದು ಆದರೆ ಆದಾಯ ತೆರಿಗೆ ಪಾವತಿದಾರರಿಗೆ ಈ ಸೌಲಭ್ಯ ಸಿಗುವುದಿಲ್ಲ.ಅಗತ್ಯ ದಾಖಲೆಗಳ ಬಗ್ಗೆ ಜನರಿಗೆ ತಿಳಿಸಬೇಕು.ಹೆಚ್ಚಿನ ಮಾಹಿತಿಗಾಗಿ 8147500500 ಗೆ ಎಸ್ ಎಂಎಸ್ ಮಾಡಿ,ಅಥವಾ 1902 ಟೋಲ್ ಫ್ರೀಗೆ ಕಾಲ್ ಮಾಡಿ ಎಂದು ಮಾಹಿತಿ ಪಡೆಯಬಹುದಾಗಿದೆ ಎಂದರು .

ಸಂದರ್ಭದಲ್ಲಿ ಗ್ರೇಡ್ -2 ತಹಶೀಲ್ದಾರ್ ಮಂಜಾನಂದ, ತಾ.ಪಂ ಇಓ ಚಂದ್ರಶೇಖರ್,ಪ.ಪಂ‌.ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಸಿಡಿಪಿಓ ಬಿರೇಂದ್ರಕುಮಾರ್,ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!