online news portal | Kannada news online

Search
Shukradeshe suddi Kannada | online news portal | Kannada news online
Kannada | online news portal | Kannada news online
Byshukradeshenews iPublished on August 26, 2023

ಮುಂಬರುವ ಲೋಕಸಭಾ ಚುನಾವಣೆಗೆ ವಿಧಾನ ಸಭಾ ಕ್ಷೇತ್ರದ ಗೆಲುವು ದಿಕ್ಸೂಚಿ:ಶಾಸಕ.ಬಿ.ದೆವೇಂದ್ರಪ್ಪ ಭವಿಷ್ಯ

ಜಗಳೂರು ಸುದ್ದಿ:ರಾಜ್ಯದಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ವಿಧಾನ ಸಭಾ ಚುನಾವಣೆ ಗೆಲುವು ದಿಕ್ಸೂಚಿಯಾಗಲಿದೆ ಎಂದು ಶಾಸಕ ಬಿ.ದೆವೇಂದ್ರಪ್ಪ ಭವಿಷ್ಯ ನುಡಿದರು.

ಪಟ್ಟಣದ ಶಾಸಕರ ನಿವಾಸದಲ್ಲಿ ಹಮ್ಮಿಕೊಂಡಿದ್ದ ವರಮಹಾಲಕ್ಷ್ಮಿ ಪೂಜೆ ಕಾರ್ಯಕ್ರಮದಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಸ್ವಾಗತಿಸಿ ಮಾತನಾಡಿದರು.

ದೇಶದಲ್ಲಿ ಕೋಮುವಾದಿ ಶಕ್ತಿ ಭ್ರಷ್ಟ ಬಿಜೆಪಿ ಸರಕಾರದ ಆಡಳಿತ ಮುಕ್ತಿಗೊಳಿಸಬೇಕು‌.ರಾಜ್ಯದಲ್ಲಿ ಲೋಕ ಸಭಾ ಚುನಾವಣೆಯಲ್ಲಿ 20ಕ್ಕೂ ಅಧಿಕ ಸ್ಥಾನಗಳನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರೊಬ್ಬರಿಗೆ ಟಿಕೇಟ್ ನೀಡಿದರೂ ಗೆಲುವಿನ ಸಂಕಲ್ಪ ಗೈಯಬೇಕು ಎಂದರು.

ಭಾರತದೇಶದ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ತನ್ನದೇ ಸ್ಥಾನಮಾನವಿದೆ.ವರಮಹಾಲಕ್ಷ್ಮಿ ಪೂಜೆ ವರದಾನವಾಗಲಿ.ಐಶ್ವರ್ಯ ಸಂಪತ್ತು ಗಳಿಸಿದ ಕುಟುಂಬದ ಸೊಸೆಯಾಗಿ ನಮ್ಮ‌ ಕರೆಗೆ ಕಿವಗೊಟ್ಟು ಆಗಮಿಸಿರುವ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಸರಳ ಸಜ್ಜನಿಕೆಯ ಎಸ್ ಎಸ್ ಕುಟುಂಬದ ರುವಾರಿಗಳು,ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ‌ ಮಹಿಳೆಗೆ ಸ್ಥಾನಮಾನ ದೊರಕಲಿ ಎಂದು ಪರೋಕ್ಷವಾಗಿ ನುಡಿದರು.

ಸಚಿವ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ,ಜಗಳೂರು ತಾಲೂಕಿನಲ್ಲಿ ನನ್ನ ಪತಿ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಲೋಕಸಭಾ ಚುನಾವಣೆ ಸ್ಪರ್ಧಿಸಿರುವಾಗ ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದನ್ನು ನಾನು ಮರೆತಿಲ್ಲ.ಜಿಲ್ಲೆಯ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದು.ಯಾವುದೇ ಸಂದರ್ಭದಲ್ಲಿ ನಮ್ಮ‌ಮನೆಗೆ ಆಗಮಿಸಿ ಅಹವಾಲು ಸಲ್ಲಿಸಿದರೂ ಈಡೇರಿಸಲು ಬದ್ದ ಎಂದು ಭರವಸೆ ನೀಡಿದರು.

ನಾನು ಲೋಕಸಭಾ ಕ್ಷೇತ್ರದಿಂದ ಆಕಾಂಕ್ಷಿಯಲ್ಲ.ಅವಕಾಶ ದೊರೆತಲ್ಲಿ ನನ್ನ ಕುಟುಂಬದವರ ಸಹಕಾರವಿದ್ದಲ್ಲಿ ಸ್ಪರ್ಧೆ‌ ಕುರಿತು ನಾನು ಸಮಾಲೋಚನೆ ನಡೆಸುವೆ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ತಾಲೂಕಿನ‌ಗಡಿಗ್ರಾಮದ ಮುಗ್ಗಿದರಾಗಿಹಳ್ಳಿ ಗ್ರಾಮದಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಸ್ವಾಗತಿಸಿದರು.ನಂತರ ಜನಸಂಪರ್ಕ‌ಕೇಂದ್ರ ಕ್ಕೆ‌ಭೇಟಿ ನೀಡಿ ಮಾತನಾಡಿದರು.

ಸಂದರ್ಭದಲ್ಲಿ ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ,ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಅಹಮ್ಮದ್,ಎಸ್.ಮಂಜುನಾಥ್,ಪ.ಪಂ ಸದಸ್ಯರಾದ ರಮೇಶ್ ರೆಡ್ಡಿ,ಲುಕ್ಮಾನ್ ಖಾನ್,ಮಂಜುನಾಥ್,ಮುಖಂಡರಾದ ಬಿ.ಮಹೇಶ್ವರಪ್ಪ,ಶಂಭುಲಿಂಗಪ್ಪ,ತಿಪ್ಪೇಸ್ವಾಮಿ,ಪಲ್ಲಾಗಟ್ಟೆ ಶೇಖರಪ್ಪ,ಗೌಸ್ ಪೀರ್,ಕೀರ್ತಿಕುಮಾರ್,ಪ್ರಕಾಶ್ ರೆಡ್ಡಿ,ಸೇರಿದಂತೆ‌ಇದ್ದರು.

Leave a Reply

Your email address will not be published. Required fields are marked *

You missed

error: Content is protected !!