ಸುದ್ದಿ ಜಗಳೂರು

ತಾಲ್ಲೂಕಿನ ಜ್ಯೋತಿಪುರ ಗ್ರಾಮದಲ್ಲಿ ವಿದ್ಯುತ್ ಆವಘಡ ವಿದ್ಯುತ್ ಸ್ಪರ್ಶದಿಂದ ಬಸಪ್ಪ ಗಂಗಮ್ಮ ಎಂಬುವರ ಮನೆಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಸುಟ್ಟು ಭಸ್ಮವಾದ ಮನೆ .ಕ್ಷೇತ್ರದ ಶಾಸಕ ಬಿ. ದೇವೇಂದ್ರ ದಿಢೀರ ಭೇಟಿ ನೀಡಿ ಸಂತ್ರಸ್ತರಿಗೆ 25000 ರೂ ಧನಸಹಾಯ ನೆರವು

By shukradeshenews
Kannada | online news portal | Kannada news online
Shukradeshenews Kannada | online news portal | Kannada news online. Augsust 27

ಶುಕ್ರದೆಸೆ ಸುದ್ದಿ ಜಗಳೂರು -: ತಾಲೂಕಿನ ಜ್ಯೋತಿಪುರ ಗ್ರಾಮದಲ್ಲಿ ಇಂದು ಬೆಳಿಗ್ಗೆ ವಿದ್ಯುತ್‌ ಶಾರ್ಟ್ ಸರ್ಕ್ಯುಟ್ ನಿಂದ ಆಕಸ್ಮಿಕ ಕಾಣಿಸಿಕೊಂಡ ಬೆಂಕಿ ತಗುಲಿ ಗಂಗಮ್ಮ ಬಸಪ್ಪ ಎಂಬುವವರ ಮನೆಯಲ್ಲಿ ಬೆಂಕಿ ಹತ್ತಿಕೊಂಡು ಸಂಪೂರ್ಣವಾಗಿ ಮನೆಯಲ್ಲಿದ್ದ ಸಾಮಾನು ಸರಾಂಜುಗಳು ಗೃಹೋಪಯೋಗಿ ‌ಬಳಕೆ ವಸ್ತುಗಳು ಸುಟ್ಟು ಹೋಗಿವೆ ಮನೆ ಕಳೆದುಕೊಂಡು ಕಂಗಲಾದ ಕುಟುಂಬಸ್ಥರ ನೆರವಿಗೆ ಧಾವಿಸಿರುವ ಕ್ಷೇತ್ರದ ಶಾಸಕರಾದ ಚಿಕ್ಕಮ್ಮನಹಟ್ಟಿ ‌ಬಿ ದೇವೆಂದ್ರಪ್ಪ ರವರು‌
ವಿಷಯ ತಿಳಿಯುದ್ದಂತೆ ಸಂತ್ರಸ್ತರ ಗ್ರಾಮಕ್ಕೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕ ವಾಗಿ 25000 ಧನ ಸಹಾಯ ಮಾಡಿ ನೆರವು ನೀಡಿದ್ದಾರೆ.

ನೊಂದ ಕುಟುಂಬ ವರ್ಗದವರೊಂದಿಗೆ ಶಾಸಕರು‌ ಮಾತನಾಡಿ ನಮ್ಮ ಸರ್ಕಾರದಿಂಗ ಸಿಗುವ ಸೌಲಭ್ಯಗಳನ್ನು ‌ಒದಗಿಸಿ ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಾಲೂಕು ಆಡಳಿತ ವತಿಯಿಂದ ಸಿಗುವ ಪರಿಹಾರವನ್ನು ಶೀಘ್ರವೇ ಒದಗಿಸಿ ಕೊಡಲು ಅಧಿಕಾರಿಗಳಿಗೆ ತಿಳಿಸುವೆ ಎಂದು ಸ್ಥಳದಲ್ಲಿಯೆ ಅಧಿಕಾರಿಗಳಿಗೆ ಸೂಚನೆ ನೀಡಿದರು..

ನಂತರ ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಜ್ಯೋತಿಪುರ ಗ್ರಾಮದಲ್ಲಿ ಮನೆ ಕಳೆದುಕೊಂಡ ಕುಟುಂಬದವರಿಗೆ ನೂತನವಾಗಿ ಮನೆ ನಿರ್ಮಿಸಿ ಕೊಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ. ಗ್ರಾಮ ಲೆಕ್ಕಾಧಿಕಾರಿಯವರು ಮನೆ ಕಳೆದುಕೊಂಡ ಕುಟುಂಬದವರಿಗೆ ದಿನ ನಿತ್ಯ ಸಾಮಗ್ರಿ ಗಳು ಸೇರಿದಂತೆ ಮೂಲಭೂತ ಸೌಕರ್ಯ ಗಳನ್ನು ವ್ಯವಸ್ಥೆ ಮಾಡಲು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಭಾರಿ ತಹಶೀಲ್ದಾರ್ ಅರುಣ್ ಕಾರಗಿ.ರಾಜಸ್ವ ನಿರೀಕ್ಷಕರು ಧನಂಜಯ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಓಬಣ್ಣ.ಗ್ರಾಮ ಪಂಚಾಯತಿ ಅಧ್ಯಕ್ಷ ಸಿದ್ದಪ್ಪ. ಶಾಸಕರ ಆಪ್ತ ಸಹಾಯಕರಾದ ಶಿವಕುಮಾರ್.ಪಲ್ಲಾಗಟ್ಟೆ ಶೇಖರಪ್ಪ.ಮೊಹ ಮ್ಮದ್ ಗೌಸ್ ಗ್ರಾಮ ಪಂಚಾಯತಿ ಸದಸ್ಯ ಸಿದ್ದಪ್ಪ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!