By shukradeshenews
Kannada | online news portal | Kannada news online
Shukradeshenews Kannada | online news portal | Kannada news online

ಮಡಿವಾಳ ಸಮಾಜದ ಸಂಘಟನೆಗಾಗಿ ಜಾಗೃತಿ ಅಗತ್ಯ:ಶ್ರೀ ಬಸವಮಾಚಿದೇವ ಅಭಿಮತ.

ಜಗಳೂರು ಸುದ್ದಿ:ನಿತ್ಯ ಕಾಯಕದಲ್ಲಿ ತೊಡಗಿರುವ ಮಡಿವಾಳ ಸಮಾಜದ ಒಗ್ಗಟ್ಟಿನ ಸಂಘಟನೆಗಾಗಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಚಿತ್ರದುರ್ಗ ಮಡಿವಾಳ ಗುರುಪೀಠದ ಶ್ರೀ ಬಸವಮಾಚಿದೇವ ಮಹಾಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ಮಡಿವಾಳ ಸಮಾಜದಿಂದ ಶ್ರಾವಣಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಮನ ಮನೆಗೆ ಮಾಚಿದೇವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಾಚನ ನೀಡಿದರು.

ಸಂವಿಧಾನ ಬದ್ದ ಹಕ್ಕುಗಳಿಗಾಗಿ ಸರ್ವತೋಮುಖ ಅಭಿವೃದ್ದಿಗಾಗಿ ತಳಸಮುದಾಯಗಳು ಸಂಘಟಿತರಾಗಬೇಕು.12 ನೇ ಶತಮಾನದಲ್ಲಿ ಬಸವಣ್ಣನವರ ಅನುಭವಮಂಟಪದಲ್ಲಿ ವಚನಕಾರರ ಮುಂಚೂಣಿ ನಾಯಕತ್ವವಹಿಸಿದ್ದ ಮಾಚಿದೇವರ ಜಾತ್ಯಾತೀತ ಭಾವನೆ,ಹಾಗೂ ಆದರ್ಶ,ಸಂದೇಶಗಳು ಸಮಾಜಕ್ಕೆ ಪಸರಿಸಬೇಕು.ರಾಜ್ಯದ ಬೆಂಗಳೂರಿನಿಂದ ಬೀದರ್ ವರೆಗೆ ಹಮ್ಮಿಕೊಂಡಿರುವ ಮನಮನೆಗೆ ಮಾಚಿದೇವ ಜನಜಾಗೃತಿ ಆಂದೋಲನದ ಯಶಸ್ವಿಗೆ ಸಮಾಜದ ಬಂಧುಗಳು ಪಕ್ಷಾತೀತವಾಗಿ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಆಧುನಿಕ ತಂತ್ರಜ್ಞಾನಯುಗದಲ್ಲಿಯೂ ಮಡಿವಾಳ ಸಮುದಾಯದವರು ಮೂಲ ವೃತ್ತಿ ಬಟ್ಟೆ ತೊಳೆದು,ಇಸ್ತ್ರಿ ಮಾಡುವ ಸೇವೆಯಲ್ಲಿ ತೊಡಗಿದ್ದಾರೆ.ಮಡಿವಾಳ ಸಮಾಜದವರು ಸನಾತನ ಸಂಸ್ಕೃತಿ,ಬಡತನದ ಕೂಪದಿಂದ ಹೊರಬನ್ನಿ,ಉದ್ಯಮಿಗಳಾಗಬೇಕು.ವಿವಿಧ ಸೌಲಭ್ಯಗಳನ್ನು ಅನುಭವಿಸುತ್ತಿರುವ ಸಹೋದರ ಸಮಾಜಗಳು ಮಾದರಿಯಾಗಬೇಕು ಎಂದು ಕಿವಿಮಾತು ಹೇಳಿದರು.

ನಮ್ಮ ಸಮುದಾಯದವರಿಗೆ ರಾಜಕೀಯ ಸ್ಥಾನಮಾನ ಲಭಿಸದೆ.ಯಾರೊಬ್ಬರೂ ಶಾಸಕ,ಸಂಸದರಾಗಿ ಆಯ್ಕೆಯಾಗಿಲ್ಲ.ನಾವು ನಂಬಿರುವ ಆಯಾ ಕ್ಷೇತ್ರದ ಶಾಸಕರುಗಳೇ ನಮಗೆ ಸಹಕರಿಸಬೇಕು.ಶೋಷಿತ ವರ್ಗದವರ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮಡಿವಾಳ ಸಮುದಾಯದ ಅಭಿವೃದ್ದಿ ಸೌಲಭ್ಯಗಳನ್ನು ಚರ್ಚಿಸಲಾಗುವುದು.ಸ್ಥಳೀಯ ಶಾಸಕರುಗಳು ಪಕ್ಷಾತೀತವಾಗಿ ಧ್ವನಿಯಾಗಬೇಕು ಎಂದು ಮನವಿ ಮಾಡಿದರು.

ಜಾತ್ರೆ ಹಬ್ಬಗಳ ದುಂದುವೆಚ್ಚಕ್ಕೆ ಕಡಿವಾಣ ಹಾಕಿ,ಮಕ್ಕಳ ಶಿಕ್ಷಣಕ್ಕೆ ಒತ್ತುಕೊಡಿ.ಸಮಾಜದ ಬದಲಾವಣೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಸಲಹೆನೀಡಿದರು.

ಶಾಸಕ ಬಿ.ದೆವೇಂದ್ರಪ್ಪ ಮಾತನಾಡಿ,ಮಡಿವಾಳ ಸಮಾಜಕ್ಕೆ ಭವನ ನಿರ್ಮಾಣಕ್ಕೆ ಅನುದಾನ ಒದಗಿಸುವೆ.ಸಾಧು ಸತ್ಪುರುಷರ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಯಾಗಿರುವೆ.ಕ್ಷೇತ್ರದ ಅಭಿವೃದ್ದಿ ನನ್ನ ಗುರಿ.ಮಡಿವಾಳ ಸಮಾಜದ ಶ್ರೇಯೋಭಿವೃದ್ದಿಗೆ ಬದ್ದನಾಗಿರುವೆ.ಬಸವಣ್ಣನವರ ಅನುಭವಮಂಟಪದ ಮಾದರಿಯಲ್ಲಿ ಎಲ್ಲಾ ಸಮುದಾಯಗಳ ವಿಶ್ವಾಸಗಳಿಸಿ ಉತ್ತಮ ಆಡಳಿತ ನಡೆಸುವೆ‌.ಪಕ್ಷಾತೀತವಾಗಿ ಸಹಕಾರ ನೀಡಬೇಕು.ದ್ವೇಷದ ರಾಜಕಾರಣ ಸಲ್ಲದು.ಮಡಿ ಮೈಲಿಗೆ ದೂರಮಾಡುವ ಮಡಿವಾಳ ಸಮಾಜದವರ ಸೇವೆ ಅವಿಸ್ಮರಣೀಯ ಎಂದರು.

ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ,ಮಡಿವಾಳ ಸಮಾಜದವರು ಒಗ್ಗಟ್ಟಾಗಬೇಕು.ಸಮಾಜದ ಕೊಳೆಯನ್ನು ತೊಳೆಯಬೇಕು.ನನ್ನ ಆಡಳಿತಾವಧಿಯಲ್ಲಿ ಮಡಿವಾಳ ಸಮುದಾಯ ಭವನನಿರ್ಮಾಣಕ್ಕೆ ನಿವೇಶನ ಒದಗಿಸಿರುವೆ.ಭವನ ನಿರ್ಮಾಣಕ್ಕೆ ಸಂಸದರ ಅನುದಾನದಡಿ ₹10 ಲಕ್ಷ ಕೊಡಿಸುವೆ.ಹಾಗೂ ವೈಯಕ್ತಿಕ ಧನ ಸಹಾಯ ಮಾಡುವೆ ಶೀಘ್ರ ಅಡಿಪಾಯ ಹಾಕಬೇಕು ಎಂದು ಭರವಸೆ ನೀಡಿದರು.

ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಶ್ರೀಗಳ ನೇತೃತ್ವದಲ್ಲಿ ಮಡಿವಾಳ ಸಮುದಾಯದವರು ಸಂಘಟಿತ ಹೊರಾಟನಡೆಸಬೇಕಿದೆ.ಅಲ್ಲದೆ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ,ಮೆಡಿಕಲ್ ಸೀಟುಗಳನ್ನು ಕೊಡಿಸಿ.ನೀರಾವರಿ ಮೂಲಗಳಿಲ್ಲದ ಬರದನಾಡಿನಲ್ಲಿ ಮಕ್ಕಳನ್ನೇ ಆಸ್ತಿಯನ್ನಾಗಿಸಬೇಕು.ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.

ಪ.ಪಂ‌ ಸದಸ್ಯೆ ಮಂಜಮ್ಮ‌ ಮಾತನಾಡಿ,ಮಡಿವಾಳ ಸಮಾಜದ ಅಲ್ಪಸಂಖ್ಯಾತರಾದ ನನಗೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸ್ಥಾನ ಕಲ್ಪಿಸಿದವರಿಗೆ ಅಭಿನಂದನೆಗಳು ಎಂದರು.

ಸಂದರ್ಭದಲ್ಲಿ ಮಡಿವಾಳ ಸಮಾಜದ ತಾಲೂಕು ಅಧ್ಯಕ್ಷ ಎಂ.ಸಿ.ರೇವಣಸಿದ್ದಪ್ಪ,ತಾಲೂಕು ಕಾರ್ಯದರ್ಶಿ ಬಿ.ರಮೇಶ್,ಪ.ಪಂ ಸದಸ್ಯೆ ಮಂಜಮ್ಮ,ನಿವೃತ್ತ ಯೋಧ ರಾಜಣ್ಣ,ರಶ್ಮಿ ಮಡಿವಾಳ,ಶಿಕ್ಷಕ ನಾಗೇಶ್,ಉಮೇಶ್,ಹರೀಶ್,ಸಮಾಜದ ಉಪಾಧ್ಯಕ್ಷ ಶಿಕ್ಷಕಎಂ .ಆರ್.ಹನುಮಂತಪ್ಪ,ಶಿವಕುಮಾರ್,ತಿಪ್ಪೇಸ್ವಾಮಿ,ರವಿಕುಮಾರ್ ,ಹನುಮಂತಪ್ಪ,ಪಲ್ಲಾಗಟ್ಟೆ ಶೇಖರಪ್ಪ,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!