ತಾಲೂಕಿನಲ್ಲಿ ನಿರೀಕ್ಷಿತ ಮಳೆಯಿಲ್ಲದೆ , ತೀರ್ವತರ ಬರ ಅವರಿಸಿದೆ ರಾಜ್ಯ ಸರಕಾರವು ತಕ್ಷಣ ಜಗಳೂರು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ಪರಿಹಾರ ಬಿಡುಗಡೆ ಮಾಡುವಂತೆ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
By shukradeshenews
Kannada | online news portal | Kannada news online
Shukradeshenews Kannada | online news portal | Kannada news online. ಆಗಸ್ಟ್ 27
ಶಾಸಕರ ನೇತೃತ್ವದಲ್ಲಿ ಭಾನುವಾರ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ.ತೋಟಗಾರಿಕೆ ಇಲಾಖೆ ಸಂಯುಕ್ತ ಅಧಿಕಾರಿಗಳೊಂದಿಗೆ ವಿವಿಧ ಗ್ರಾಮಳ ರೈತರ ಜಮೀನುಗಳಿಗೆ ತೆರಳಿ ಬೆಳೆ ಸಮೀಕ್ಷೆ ನಡೆಸಿದರು.ಈ ಬಾರಿ ಮಳೆ ಕೊರತೆಯಿಂದ ಜಗಳೂರು ತಾಲ್ಲೂಕಿನಲ್ಲಿ ಬೆಳೆ ನಷ್ಠವಾಗಿದೆ. ಸರ್ಕಾರ 10 ದಿನಗಳೊಳಗೆ ವರದಿ ಕೇಳಿದ ಹಿನ್ನಲೆಯಲ್ಲಿ ಅಧಿಕಾರಿಗಳ ಮುಖೇನ ಬೆಳೆ ಸಮೀಕ್ಷೆ ನಡೆಸಿ ತಾಲ್ಲೂಕಿನಲ್ಲಿ ಈಗಾಗಲೇ ರೈತರ ಬೆಳೆ ಸಂಪೂರ್ಣ ಒಣಗಿರುವ ಬೆಳೆ ಸಮೀಕ್ಷೆಯನ್ನ ಸರ್ಕಾರಕ್ಕೆ ವರದಿ ನೀಡಿ ಸಂಪೂರ್ಣ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಶಾಸಕರು ಸುದ್ದಿಗಾರರೊಂದಿಗೆ ಮಾತನಾಡಿದರು.
ತಾಲೂಕಿನ ಕಸಬಾ ಹೊಬಳಿ ತೊರೆಸಾಲು ಗ್ರಾಮಗಳಾದ ಮುಸ್ಟೂರು.ದೋಣಿಹಳ್ಳಿ.ಭರಮಸಮುದ್ರ..ದಿಬ್ಬದಹಳ್ಳಿ ಸೇರಿದಂತೆ ಸೊಕ್ಕೆ .ಹೊಬಳಿ ಬಿಳಿಚೋಡು ಹೊಬಳಿಗಳಲ್ಲಿಯು ಸಹ ಬೆಳೆಗಳು ಸಂಪೂರ್ಣ ಒಣಗಿ ರೈತರು ಬಿತ್ತನೆ ಮಾಡಿದ ಬೆಳೆ ಕೈ ಸೇರದಂತಾಗಿದೆ .
ಕೇಂದ್ರದ ಮಾರ್ಗಸೂಚಿಯಂತೆ ಪ್ರತಿ ತಾಲ್ಲೂಕಿನಲ್ಲಿ ತಲಾ 10 ಗ್ರಾಮಗಳನ್ನು ಆಯ್ಕೆ ಮಾಡಿ, 10 ದಿನಗಳೊಳಗೆ ವರದಿ ಸಲ್ಲಿಸಲು ತಕ್ಷಣವೇ ಸಮೀಕ್ಷೆ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದ ಹಿನ್ನಲೆಯಲ್ಲಿ ಇದೀಗ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಕಳುಹಿಸಲಾಗುವುದು ಎಂದು ತಿಳಿಸಿದರು.
ರಾಜ್ಯ ಸರ್ಕಾರ ಬೆಳೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಸೂಚನೆ ನೀಡಿದಂತೆ ಇದೀಗ ತಾಲ್ಲೂಕು ಮಟ್ಟದ ಅಧಿಕಾರಿಗಳ ಮೂಲಕ ರೈತರ ಜಮೀನುಗಳಿಗೆ ತೆರಳಿ ಬೆಳೆ ಸಮೀಕ್ಷೆ ನಡೆಸಿ ಶಾಸಕರು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಬರ, ಪ್ರವಾಹ ಮತ್ತು ಇತರ ನೈಸರ್ಗಿಕ ವಿಕೋಪಗಳಿಂದ ಉದ್ಭವಿಸಬಹುದಾದ ಪರಿಸ್ಥಿತಿ ಪರಾಮರ್ಶಿಸಿ, ಸರ್ಕಾರಕ್ಕೆ ಶಿಫಾರಸು ಮಾಡಲು ರಚಿಸಲಾದ ಸಚಿವ ಸಂಪುಟ ಉಪ ಸಭೆ.ನಡೆಸಲಾಗಿದ್ದು ಇದೀಗ ಸರ್ಕಾರ ಕೇಳಿರುವ ವರದಿಯಂತೆ ಬೆಳೆ ಸಮೀಕ್ಷೆ ನಡೆಸಲಾಗಿದೆ.
ತಾಲ್ಲೂಕಿನಾದ್ಯಂತ ರೈತರು ಬಿತ್ತನೆ ಮಾಡಿದ ಮೆಕ್ಕೆಜೋಳ .ಶೇಂಗಾ ರಾಗಿ.ಈರುಳ್ಳಿ.ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳು ಸಂಪೂರ್ಣ ಶೇ 90 ರಷ್ಟು ಒಣಗಿಹೋಗಿವೆ ಎಂದು ತಾಲ್ಲೂಕಿನ ತೊರೆಸಾಲು ಗ್ರಾಮಗಳ ರೈತರ ಜಮೀನುಗಳಿಗೆ ತೆರಳಿ ಬೆಳೆ ಸಮೀಕ್ಷೆ ನಡೆಸಿದರು.ಈ ಬಾರಿ ಮಳೆ ಬೆಳೆಯಿಲ್ಲದೆ ರೈತರು ಕಂಗಲಾಗಿದ್ದಾರೆ. ಸರ್ಕಾರ ನಮ್ಮ ತಾಲ್ಲೂಕುನ್ನು ಸಂಪೂರ್ಣ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡುವಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆಗೆ ರೈತರ ಜಮೀನುಗಳಿಗೆ ತೆರಳಿ ಒಣಗಿದ ಬೆಳೆ ಸಮೀಕ್ಷೆ ನಡೆಸಿದರು. ಸರ್ಕಾರಕ್ಕೆ ಈ ಬಾಗದ ಬೆಳೆಗಳ ಸ್ಥಿತಿಗತಿಗಳ ಬಗ್ಗೆ ಪ್ರಸ್ತಾನೆ ನೀಡಿ ನೊಂದ ರೈತರ ನೆರವಿಗೆ ಧಾವಿಸಲಾಗುವುದು ಎಂದು ಶಾಸಕರು ತಿಳಿಸಿದರು.
ರೈತರು ಸಾಲ ಶೂಲ ಮಾಡಿ ಬಿತ್ತನೆ ಮಾಡಿದ ಬೆಳೆ ಒಣಗಿದೆ.ಈ ನೈಜ ಸ್ಥಿತಿಯನ್ನ ವರದಿ ಸಲ್ಲಿಸಿ ಅನ್ನಧಾತರ ನೆರವಿಗೆ ಪರಿಹಾರ ಕೊಡಿಸಲು ಶ್ರಮಿಸುತ್ತೆನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು..
ಸರ್ಕಾರ ಇಲ್ಲಿನ . ಮಳೆ ಕೊರತೆ, ಒಣ ಹವೆ, ಬಿತ್ತನೆ ಪ್ರದೇಶ, ತೇವಾಂಶ ಕೊರತೆ, ಬೆಳೆಗಳ ಸ್ಥಿತಿ, ಜಲಾಶಯಗಳ ನೀರಿನ ಸಂಗ್ರಹಣೆ ಹಾಗೂ ಅಂತರ್ಜಲ ಮಟ್ಟವನ್ನು ಅವಲೋಕಿಸಿ ಬರ ಘೋಷಿಸಲಾಗುತ್ತದೆ. ಇದಕ್ಕೆ ಅನುಗುಣವಾಗಿ ರಾಜ್ಯದ 224 ಕ್ಷೇತ್ರಗಳಿಗಿಂತ ನಮ್ಮ ಜಗಳೂರು ತಾಲ್ಲೂಕು ಅತ್ಯಂತ ಹಿಂದೂಳಿದ ಬರಪೀಡಿತ ಪ್ರದೇಶವಾಗಿದೆ.ಇಲ್ಲಿ ಯಾವುದೇ ನದಿಮೂಲಗಳಿಲ್ಲ ನಮ್ಮ ರೈತರು ಒಣ ಬೇಸಾಯವನ್ನೆ ನಂಬಿ ಕೃಷಿ ಯಲ್ಲಿ ತೋಡಗಿ ಪ್ರತಿ ಬಾರಿಯು ಕೂಡ ನಷ್ಟ ಅನುಭವಿಸವಂತಾಗಿದೆ .
ಅದರಲ್ಲೂ ನಂಜುಂಡಪ್ಪ ವರದಿ ಪ್ರಕಾರ ಜಗಳೂರು ಅತಿ ಹಿಂದೂಳಿದ ಪಟ್ಟಿಗೆ ಸೇರಿದೆ ಆದರೆ ಮುಂದುವರೆದಿರುವ ನೀರಾವರಿ ಮೂಲವಿರುವ ಹೊನ್ನಹಳ್ಳಿ ಹರಿಹರ ಪ್ರದೇಶವನ್ನ ಸಂಪೂರ್ಣ ಬರಪೀಡಿತವೆಂದು ಘೋಷಿಸಿ ನಮ್ಮ ತಾಲ್ಲೂಕುನ್ನು ಮದ್ಯಮ ಬರ ಎಂದು ಘೋಷಣೆ ಮಾಡಿರುವುದರ ಹಿಂದಿರುವ ಕಾರಣವೇನು ಯಾವ ಅಧಿಕಾರಿಗಳು ವರದಿ ನೀಡಿದರು ಇದು ಯಾವ ಮಾನದಂಡ ಎಂದು ಅಧಿಕಾರಿಗಳಿಗೆ ಶಾಸಕರು ಕ್ಲಾಸ್ ತೆಗೆದುಕೊಂಡು ಗರಂ ಆದರು.
ಸರ್ಕಾರ ನೈಜತೆಯನ್ನ ಪರಿಗಣಿಸಿ ಈ ಬಾರಿ ಬರಪೀಡಿತ ಪ್ರದೇಶವೆಂದು ಘೋಷಿಸಿಲಿ ಸರ್ಕಾರಕ್ಕೆ ಶಾಸಕರು ಮನವಿ ಮಾಡಿಕೊಂಡಿದ್ದಾರೆ.
ಸಹಾಯಕ ಕೃಷಿ ನಿರ್ದೇಶಕ ಮಿಥನ್ ಕಿಮಾವತ್ ಮಾತನಾಡಿ ತಾಲ್ಲೂಕಿನಲ್ಲಿ ಈ ಬಾರಿ 51 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಮೆಕ್ಕೆಜೋಳ.ರಾಗಿ .ಶೇಂಗಾ.ಸೂರ್ಯಕಾಂತಿ.ಈರುಳ್ಳಿ. ಹತ್ತಿ .ತೊಗರಿ.ಬೆಳೆಗಳು ಮಳೆ ಕೊರತೆಯಿಂದ ಶೇ 90 ರಷ್ಟು ಬೆಳೆಗಳು ಸಂಪೂರ್ಣ ಒಣಗಿವೆ.ಆಗಸ್ಟ್ ತಿಂಗಳಲ್ಲಿ ಶೇ 70 ರಷ್ಟು ಮಳೆ ಕೊರತೆಯಿದೆ.ಇದೀಗ ಬೆಳೆ ಸಮೀಕ್ಷೆ ದೃಡಿಕರಣ ಮಾಡುವ ಮೂಲಕ ಸರ್ಕಾರಕ್ಕೆ ಅನಾವೃಷ್ಠಿ ಬರಪೀಡಿತ ನೈಜತೆಯನ್ನು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಪ್ರಕಾಶರೆಡ್ಡಿ. ಸಹಾಯಕ ಕೃಷಿ ನಿರ್ದೇಶಕ ಮಿಥನ್ ಕಿಮಾವತ್.ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ತೋಟಪ್ಪ.ಕಂದಾಯ ಇಲಾಖೆ ಆರ್ ಐ ಧನುಂಜಯ್.ಸೊಕ್ಕೆ ನಾಡ ಕಛೇರಿ ಆರ್ ಐ ಕೀರ್ತಿ. ಮುಖಂಡ ಸುದೀರ್ ರೆಡ್ಡಿ. ಗ್ರಾಪಂ ಸದಸ್ಯ ಅನುಪಮ್.ರೆಡ್ಡಿ.ಮುಖಂಡ ಪಲ್ಲಾಗಟ್ಟೆ ಶೇಖರಪ್ಪ. ತೋಟಗಾರಿಕೆ ಅಧಿಕಾರಿಗಳಾದ ಪ್ರಸನ್ನ.ಅನಂತಕುಮಾರ್. ಸೊಕ್ಕೆ ಹೊಬಳಿ ಕೃಷಿ ಅಧಿಕಾರಿ ಜೀವಿತಾ.
ಮುಂತಾದವರು ಹಾಜರಿದ್ದರು.