ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಶಿವಕುಮಾರ್ ಒಡೆಯರ್ ಕಾಂಗ್ರೆಸ್ ಪಕ್ಷದ ಟಿಕೇಟ್ ನ ಪ್ರಬಲ ಆಕಾಂಕ್ಷಿ.
ಜಗಳೂರು ಸುದ್ದಿ:
By shukradeshe news Kannada. | online portale | Kannada news shukradeshenews
august 29 dvg news
ತಾಲೂಕಿನ ಬಿಳಿಚೋಡು ಗ್ರಾಮದ ಶಿವಕುಮಾರ್ ಒಡೆಯರ್ ಅವರು ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ಟಿಕೇಟ್ ಗೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂರು ಬಾರಿ ಮಾಜಿ ಸಂಸದರಾಗಿ ಜಿಲ್ಲೆಯಲ್ಲಿ ಉತ್ತಮ ಆಡಳಿತ ನೀಡಿದ ಚನ್ನಯ್ಯ ಒಡೆಯರ್ ಅವರ ಪುತ್ರರಾಗಿದ್ದು.ಲೊಕೋಪಯೋಗಿ ಇಲಾಖೆ ಮುಖ್ಯ ಇಂಜಿನಯರ್ ಆಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದು . ಇದೀಗ ರಾಜಕೀಯ ಸೇವೆಗೆ ತುದಿಗಾಲಲ್ಲಿ ನಿಂತಿದ್ದಾರೆ.
ಕ್ಷೇತ್ರ ಪರ್ಯಟನೆ:ದಾವಣಗೆರೆ ಲೋಕಸಭಾ ಕ್ಷೇತ್ರದ ಹರಿಹರ,ಜಗಳೂರು,ದಾವಣಗೆರೆ ಉತ್ತರ ಹಾಗೂದಕ್ಷಿಣ,ಮಾಯಕೊಂಡ,ಚನ್ನಗಿರಿ,ಹೊನ್ನಾಳಿ,ವಿಧಾನ ಕ್ಷೇತ್ರಗಳಲ್ಲಿ ವಿವಿಧ ಮುಖಂಡರುಗಳನ್ನು ಭೇಟಿಮಾಡಿ ಸಭೆ ಸಮಾಲೋಚನೆ,ಕ್ಷೇತ್ರ ಪರ್ಯಟನೆ ನಡೆಸುತ್ತಿದ್ದಾರೆ.ಸ್ಥಳೀಯರು ರಾಜಕೀಯ ಮುತ್ಸದ್ದಿಗಳ ಪುತ್ರರೂ ರಾಜಕೀಯ ಸೇವೆಯಲ್ಲಿ ನಿರಂತರವಾಗಿ ರಾಜಕೀಯ ಹಿನ್ನೆಲೆಯಕುಟುಂಬದಿಂದ ಆಗಮಿಸಿರುವುದು. ವಿಶೇಷ.ಇವರ ಸಹೋದರ ಡಾ.ಉದಯಶಂಕರ್ ಓಡೆಯರ್ ಅವರೂ ರಾಜಕಾರಣಿಗಳ ನಂಟು ಹೊಂದಿದ್ದಾರೆ.ವಿಧಾನ ಸಭಾ ಕ್ಷೇತ್ರದ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದರು.ಅಲ್ಲದೆ ರಕ್ತ ಸಂಬಂಧಿಗಳಾದ ಮಂಜುಳಾ ಶಿವಾನಂದಪ್ಪ ಅವರು ತಾಲೂಕು ಪಂಚಾಯಿತಿ ಮಾಜಿ ಮಹಿಳಾ ಅಧ್ಯಕ್ಷರಾಗಿ ಆಡಳಿತ ನಡೆಸಿರುವುದನ್ನು ಅಲ್ಲಗಳೆಯುವಂತಿಲ್ಲ.