By shukradeshenews Kannada | online news portal |Kannada news online  august 31 

By shukradeshenews | published on August 31

ಜಗಳೂರು ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ  ಬ್ರಹ್ಮಶ್ರೀ ನಾರಯಣಗುರು ಹಾಗೂ ನುಲಿಯ ಚಂದಯ್ಯ ಜಯಂತಿ ಆಚರಣೆ ಮಾಡಲಾಯಿತು.

ಜಯಂತಿ ಅಂಗವಾಗಿ ಆ ಮಹಾನ್ ನಾಯಕರ ಭಾವಚಿತ್ರಗಳಿಗೆ ತಾಲ್ಲೂಕು ಕಛೇರಿ ಉಪಾ ತಹಶಿಲ್ದಾರರ ರೂಪಾ ಹಾಗೂ ಸಮಾಜದ ಮುಖಂಡರಿಂದ ಪುಷ್ಪಾರ್ಚನೆ ಮಾಡಿ ಅವರ ವಿಚಾರಧಾರೆಗಳನ್ನು ಮೆಲುಕು ಹಾಕಿದರು  ತಳ ಸಮುದಾಯಗಳಲ್ಲಿ ಜನಿಸಿದ ಇವರು ಕಾಯಕ ನಿಷ್ಠೆಯ ಮೂಲಕ 12‌ನೇ ಶತಮಾನದ ಬಸವಣ್ಣನವರ ಅನುಯಾಯಿಗಳಾಗಿದ್ದರು ಎಂದು ವಿವಿಧ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.

 ಒಬ್ಬ ಸಮಾಜ ಸುಧಾರಕರಾಗಿ ಜಾತಿ ವ್ಯವಸ್ಥೆ ಹೋಗಲಾಡಿಸಲು ದೇವಸ್ಥಾನಗಳಿಗೆ ತಾವೆ ಅಸ್ಪೃಶ್ಯ ಸಮುದಾಯದವರಿಗೆ ಮುಕ್ತ ಆವಕಾಶ ಕಲ್ಪಿಸಿ ಅಸ್ಪೃಶ್ಯತೆ ಆಚರಣೆ ಮಾಡುವವರ ವಿರುದ್ದ ದ್ವನಿ ಎತ್ತುವ ಮೂಲಕ  ನಾರಯಣಗುರು ರವರ ಸಾಮಾಜಿಕ ಸೇವಾ ಕಾರ್ಯ ಶ್ಲಾಘನೀಯ ಎಂದು ಮುಖಂಡ ದೇವಿಕೆರೆ ಶಿವಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು..  

ಈಡಿಗ ಸಮಾಜದ ಮುಖಂಡ  ಹಾಗೂ ಮಾಜಿ ತಾಪಂ ಸದಸ್ಯ ಇ ಎನ್ ಪ್ರಕಾಶ್ ಮಾತನಾಡಿ  ಕೇರಳದ ರಾಜ್ಯದಲ್ಲಿ ಜಾತಿ, ಮತ ಭೇದಗಳು ಹೆಚ್ಚಾಗಿದ್ದ ಕಾಲಘಟ್ಟದಲ್ಲಿ ‘ನಾರಾಯಣ ಗುರು,’ ವೆಂಬ, ಒಬ್ಬ ಸಮಾಜಕ ಸುಧಾರಕ, ಉದಯಿಸಿ, ಸಮಾಜದ ತಾರತಮ್ಯಗಳನ್ನು ಹೋಗಲಾಡಿಸಲು ಹಿಡೀ ಜೀವನವನ್ನು ಮುಡಿಪಾಗಿಟ್ಟ ಕೀರ್ತಿ ಅವರಿಗೆ ಸಲ್ಲಲಿದೆ.. ಅವರು ಪ್ರತಿಪಾದಿಸಿದ ತತ್ವ, ಜಗತ್ತಿನಲ್ಲಿರುವುದು, ” ಒಂದೇಜಾತಿ, ಒಂದೇ ಮತ, ಹಾಗೂ ಒಂದೇ ದೇವರು,” ಎಂಬ ಸತ್ಯವಾಕ್ಯವನ್ನು. ಸಂಸ್ಕೃತಭಾಷೆಯಲ್ಲಿ ಅದ್ವಿತೀಯ ಪಂಡಿತರಾಗಿದ್ದ ನಾರಾಯಣ ಗುರುಗಳು, ಕೇರಳ ಸಮಾಜದಲ್ಲಿ ಅಸ್ಪೃಶ್ಯತೆಯ ಪಿಡುಗಿಗೆ ನಾಂದಿ ಹಾಡಲು ಪ್ರಯತ್ನಿಸಿದ್ದಾರೆ., ಸಮಾಜ ಸುಧಾರಕ ಉಪಾಯಗಳನ್ನು ಕಂಡುಕೊಂಡ. ಅವರು ಬೋಧಿಸಿದ್ದು, ದೇಶಸೇವೆಯೇ ಈಶ ಸೇವೆಯೆಂದು ದೇಶಕ್ಕೆ ಸಂದೇಶ ಸಾರಿದ ಕೀರ್ತಿ ಅವರಿಗೆ ಸಲ್ಲಲಿದೆ. ಎಂದರು 

ಈ ಸಂದರ್ಭದಲ್ಲಿ  ತಾಲ್ಲೂಕು ಕಛೇರಿ ಚುನಾವಣೆ ಅಧಿಕಾರಿ ಚಂದ್ರಣ್ಣ.ಸಮಾಜದ ಮುಖಂಡರಾದ ಮಂಜಣ್ಣ.ಸೇರಿದಂತೆ ತಾಲೂಕು ಕಛೇರಿ ಕಾಂತರಾಜ್ ಹಾಗೂ ಸಿಬ್ಬಂದಿಗಳು  ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!