ಪಂದ್ಯದಲ್ಲಿ ಸೋಲು ಗೆಲುವು ಮುಖ್ಯವಲ್ಲ ಕ್ರಿಡೆಗಳಲ್ಲಿ ಭಾಗವಹಿಸುವುದು ಮುಖ್ಯ ಕ್ರೀಡೆಗಳು ದೈಹಿಕ ಮಾನಸಿಕ ಸದೃಢ ಆರೋಗ್ಯಕ್ಕೆ ಅತ್ಯಂತ ಸಹಕಾರಿಯಾಗಿವೆ ಎಂದು :ಶಾಸಕ ಬಿ.ದೆವೇಂದ್ರಪ್ಪ ಕ್ರಿಡಾರ್ಥಿಗಳಿಗೆ ಕಿವಿಮಾತು
By shukradeshenews Kannada | online news portal |Kannada news online august 31
By shukradeshenews | published on August 31
ಜಗಳೂರು ಸುದ್ದಿ:
ಯುವಕರು ಕ್ರೀಡಾಮನೋಭಾವನೆ ಬೆಳೆಸಿಕೊಂಡು ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ಪೂರಕವಾಗಲಿವೆ.ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವಂತೆ ಶಾಸಕ ಬಿ.ದೆವೇಂದ್ರಪ್ಪ ತಿಳಿಸಿದರು.
ಪಟ್ಟಣದ ಬೇಡರ ಕಣ್ಣಪ್ಪ ಪ್ರೌಢಶಾಲಾ ಆವರಣದಲ್ಲಿ ಆರ್ ವಿ ಎಸ್ ಶಾಲೆ ವತಿಯಿಂದ ಆಯೋಜಿಸಿದ್ದ ದಕ್ಷಿಣ ವಲಯಮಟ್ಟದ ಪ್ರೌಢಶಾಲಾ ಹಂತದ ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರೀಡಾಪಟುಗಳುನ್ನು ಕುರಿತು ಮಾತನಾಡಿದರು.
ಕ್ರೀಡೆಗಳಲ್ಲಿ ಮೈಮರೆತು ತಲ್ಲೀನರಾದಾಗ ಸಿಗುವ ಮಾನಸಿಕ ನೆಮ್ಮದಿಗೆ ಮತ್ತೊಂದಿಲ್ಲ ..ಜೀವನದಲ್ಲಿ ಹಣಗಳಿಕೆ ಮಾಡಬಹುದು ಆದರೆ ಆರೋಗ್ಯ ಗಳಿಕೆ ಅಸಾಧ್ಯ.ವಿದ್ಯಾರ್ಥಿದೆಸೆಯಿಂದ ಕ್ರೀಡಾ ತರಬೇತಿ ಪಡೆದು ಸ್ಪರ್ಧಿಸಿ ರಾಜ್ಯ ರಾಷ್ಟ್ರ ಮಟ್ಟದಲ್ಲಿ ತಾಲೂಕಿನ ವಿದ್ಯಾಸಂಸ್ಥೆಯ ಕೀರ್ತಿ ಪತಾಕಿ ಹಾರಿಸಬೇಕು ಎಂದರು.
ನನ್ನ ಕ್ರೀಡಾ ಸಾಧನೆಗೆ ಬಡತನ ಅಡ್ಡಿ:ನಾನು ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿದ್ದೆ.ಎಲ್ಲಾ ಸಾಮರ್ಥ್ಯವಿದ್ದರೂ ಬಡತನ ಅಡ್ಡಿಯಾಗಿ ಚಾಂಪಿಯನ್ ಶಿಪ್ ಪಡೆಯುವಲ್ಲಿ ವಂಚಿತನಾಗಿರುವೆ.ಇದೀಗ ಹಣ ಆಸ್ತಿ ಗಳಿಸಿರುವೆ ಆದರೆ ಅವಕಾಶ ,ದೈಹಿಕಸದೃಢತೆ,ಆರೋಗ್ಯ ಮರುಕಳಿಸುವುದಿಲ್ಲ ಎಂದು ಅವರ ವಿದ್ಯಾರ್ಥಿ ದಿಸೆ ನೆನಪು ಮೆಲುಕು ಹಾಕಿದರು.
ಕ್ರೀಡೆಗೆ ಧರ್ಮ,ಜಾತಿ,ಲಿಂಗತಾಮ್ಯವಿಲ್ಲದೆ ಕ್ರೀಡಾ ರಂಗದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ತಮ್ಮ ಜೀವನದಲ್ಲಿ ಆಸಕ್ತಿದಾಯಕ ಕ್ಷೇತ್ರದಿಂದ ಸತತ ಪ್ರಯತ್ನದಿಂದ ಉತ್ತಮ ಸಾಧನೆಗೈಯುವಂತೆ ತಿಳಿಸಿದರು.
ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ,ಬೇರೆ ಯಾವ ಕ್ಷೇತ್ರಕ್ಕಿಂತಲೂ
ಕ್ರೀಡಾ ರಂಗ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಲು ಉತ್ತಮ ವೇದಿಕೆಯಾಗಿದೆ.ತೀರ್ಪುಗಾರರು ಪ್ರಾಮಾಣಿಕ ತೀರ್ಪು ನೀಡಬೇಕು.ಕ್ರೀಡಾಪಟುಗಳು ವೈಯಕ್ತಿಕ ದ್ವೇಷ ತೊರೆದು ಸ್ಪರ್ಧಾ ಮನೋಭಾವ ಮೈಗೂಡಿಸಿಕೊಳ್ಳಬೇಕು ಎಂದರು.
ಇದೇ ವೇಳೆ ವಿಜೇತರಾದ ಕ್ರೀಡಾ ಧ್ವಜರೋಹಣ ನೆರವೇರಿಸಿ,ಜ್ಯೋತಿ ಸ್ವೀಕರಿಸಿ,ನಂತರ ವಾಲಿಬಾಲ್ ಮಹಿಳಾ ವಿಭಾಗದಿಂದ ಪ್ರಥಮಸ್ಥಾನ ಗಳಿಸಿದ ಎನ್ ಎಂಕೆ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ಹಾಗೂ ಶೀಲ್ಡ್ ವಿತರಿಸಿದರು.
ಸಂದರ್ಭದಲ್ಲಿ ಬಿಇಓ ಹಾಲಮೂರ್ತಿ,ಉಪಪ್ರಾಂಶುಪಾಲ ಹಾಲಪ್ಪ,ಕೊಟ್ರೇಶ್,ಆರ್ ವಿ ಎಸ್ ಸಂಸ್ಥೆ ಕಾರ್ಯದರ್ಶಿ ವಿರೇಶ್,ಅನುದಾನ ರಹಿತ ಖಾಸಗಿ ಶಾಲಾ ಸಂಘದ ಅಧ್ಯಕ್ಷ ಎನ್.ಎಂ. ಲೊಕೇಶ್,ಕಾರ್ಯದರ್ಶಿ ಪಿ.ಎಸ್.ಅರವಿಂದನ್,ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುರೇಶ್ ರೆಡ್ಡಿ,ಮುಖಂಡರಾದ ಸಿ.ತಿಪ್ಪೇಸ್ವಾಮಿ,ಕಲ್ಲೇಶ್ ರಾಜ್ ಪಟೇಲ್,ಪಲ್ಲಾಗಟ್ಟೆ ಶೇಖರಪ್ಪ,ಪ್ರಕಾಶ್ ರೆಡ್ಡಿ,ಮುಖ್ಯಶಿಕ್ಷಕಿ ವಿಜಯಲಕ್ಷ್ಮಿ,ಸೇರಿದಂತೆ ಇದ್ದರು.