ವಿಜಯನಗರ ಜಿಲ್ಲಾ ಸುದ್ದಿ
By shukradeshenews Kannada | online news portal |Kannada news online august 31
By shukradeshenews | published on August 31
ವರುಣದೇವನನ್ನು ಬರಮಾಡಿಕೊಳ್ಳಲು ವಾಸುದೇವರ ಮೆರವಣಿಗೆ
ಕಾನ ಹೊಸಹಳ್ಳಿ: ಸಮೀಪದ ಹೂಡೇಂ ಗ್ರಾ.ಪಂ ವ್ಯಾಪ್ತಿಯ ತಾಯಕನಹಳ್ಳಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರು ಜಾತಿಬೇಧ ಮರೆತು ಹಿಂದು ಸಂಪ್ರದಾಯದಂತೆ ವಾಸುದೇವರ ಮದುವೆ ಮಾಡಿದ್ದಾರೆ.
ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿತ್ತಿರುವ ಸೂರ್ಯಕಾಂತಿ, ಜೋಳ, ಮೆಕ್ಕೆಜೋಳ, ಶೇಂಗಾ ಬೆಳೆಗಳು ಉತ್ತಮವಾಗಿ ಬೆಳೆದಿದ್ದು ಕೆಲ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿದ್ದು, ಇನ್ನು ಕೆಲವು ಹೂ ಬಿಡುವ ಹಂತದಲ್ಲಿ ಇದ್ದು, ಈಗ ಅವಶ್ಯವಾಗಿ ಮಳೆಯು ಬೇಕಾಗಿದೆ. ಆದರೆ ಮಳೆಯೂ ಸರಿಯಾದ ಸಮಯಕ್ಕೆ ಬಂದಿಲ್ಲವಾದ್ದರಿಂದ ಗ್ರಾಮದ ಮುಖಂಡರು, ಯುವಕರು ಜೋಡಿ ಕತ್ತೆಗಳನ್ನು ಹಿಡಿದು ತಂದು ಅವುಗಳನ್ನು ತೊಳೆದು ಸ್ವಚ್ಛಗೊಳಿಸಿ ಮದುವೆ ಸಿಂಗಾರ ಮಾಡಿ ಕತ್ತೆಗಳಿಗೆ ಮದುವೆ ಮಾಡಿ ಸಂಪ್ರದಾಯ ಬದ್ಧವಾಗಿ ಮದುವೆಯಲ್ಲಿ ಅನುರಿಸುವ ಎಲ್ಲ ಪದ್ಧತಿಗಳನ್ನು ಇಲ್ಲಿ ಮಾಡಿದ್ದಾರೆ. ಕತ್ತೆಗಳ ಮೆರವಣಿಗೆ ಮಾಡಿದರೆ ಮಳೆ ಬರಬಹುದೆಂಬ ಜನರಲ್ಲಿ ನಂಬಿಕೆ ಇರುವುದರಿಂದ ಇಂಥದ್ದೊಂದು ಆಚರಣೆ ನಡೆದಿದೆ. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ಯುವಕರು ಮೆರವಣಿಗೆಯಲ್ಲಿ ಭಾಗವಸಿದ್ದರು.