ವಿಜಯನಗರ ಜಿಲ್ಲೆ

By shukradeshenews Kannada | online news portal |Kannada news online  august 31 

By shukradeshenews | published on August 2

ಧರ್ಮಸ್ಥಳ ಸಂಘದಿಂದ ಜ್ಞಾನ ವಿಕಾಸ
ಕೇಂದ್ರಕ್ಕೆ ಚಾಲನೆ

ಕೂಡ್ಲಿಗಿ: ತಾಲೂಕಿನ ಬಯಲು ತುಂಬರಗುದ್ದಿ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಾರ್ಯಕ್ಷೇತ್ರದಲ್ಲಿ ನೂತನವಾಗಿ ಶಿವಲಿಂಗೇಶ್ವರ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರ ತಮ್ಮ ಕುಟುಂಬದಲ್ಲಿ ಸ್ವಂತ ನಿರ್ಧಾರ ತಳೆಯುವ ಶಕ್ತಿ ನೀಡುವ ಉದ್ದೇಶದಿಂದ ಜ್ಞಾನವಿಕಾಸ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೊಟ್ಟೂರು ತಾಲ್ಲೂಕು ಯೋಜನಾಧಿಕಾರಿ ಎಚ್.ಡಿ. ನವೀನ್‌ಕುಮಾರ್ ತಿಳಿಸಿದರು. ಮಹಿಳೆಯರ ಆರ್ಥಿಕ, ಬೌದ್ಧಿಕ, ಸಾಮಾಜಿಕ ಬಡತನಗಳನ್ನು ದೂರಮಾಡುವ ದೃಷ್ಟಿಯಿಂದ ಜ್ಞಾನ ವಿಕಾಸ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಮಹಿಳೆಯರು ಸಂಘಟನೆಯ ಮೂಲಕ ಶಿಕ್ಷ ಣ, ಆರ್ಥಿಕ ನೆರವು ನೀಡಿ ನಿರಂತರ ಬದಲಾವಣೆಗೆ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಸಂತೋಷ ಕುಮಾರ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾ‌.ಪಂ ಸದಸ್ಯರಾದ ದುರ್ಗಮ್ಮ, ರಾಮಪ್ಪ, ರಾಜೇಶ್, ಊರಿನ ಮುಖಂಡ ವೀರಭದ್ರಯ್ಯ, ಬಸವರಾಜ ಮತ್ತು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸಾವಿತ್ರಿ ನಾಗರಾಜ್, ವಲಯದ ಮೇಲ್ವಿಚಾರಕರಾದ ಯಶೋಧ, ಸೇವಾಪ್ರತಿನಿಧಿ ಈರಮ್ಮ, ಗುರುಕಿರಣ ಸೇರಿದಂತೆ ಕೇಂದ್ರದ ಸರ್ವ ಸದಸ್ಯರ, ಮಹಿಳೆಯರು ಇತರರು ಇದ್ದರು.

ವರದಿ:- ವಿರೇಶ್ ಹೊಸಹಳ್ಳಿ

Leave a Reply

Your email address will not be published. Required fields are marked *

You missed

error: Content is protected !!