By shukradeshenews Kannada | online news portal |Kannada news online  august 31 

By shukradeshenews | published on September 4

ಜಗಳೂರು ತಾಲೂಕಿನ ವಿವಿಧ ವಲಯ ಅರಣ್ಯ ವ್ಯಾಪ್ತಿಯಲ್ಲಿನ ನೀಲಗಿರಿ ಮರಗಳನ್ನು ಕಡಿದು ರಾತ್ರೋ ರಾತ್ರಿ ಅಕ್ರಮವಾಗು ಸಾಗಿಸಲಾಗುತ್ತದೆ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬಂದಿದೆ.
ಕಳೆದ ವಾರದಿಂದ ಗುಜರಾತ ನೋಂದಾಣಿಯ ಲಾರಿಯಲ್ಲಿ ನೀಲಿಗಿರಿ ಮರದ ದಿಂಬಗಳನ್ನು ರಾತ್ರಿ ವೇಳೆ ಸಾಗಾಟ ಜೋರಾಗಿದೆ.


ಮೊನ್ನೆ ಶುಕ್ರವಾರ ಕ್ಯಾಸೇನಹಳ್ಳಿ ಮತ್ತು ಗಾಂಧಿನಗರ ಮಧ್ಯದ ಅರಣ್ಯದಲ್ಲಿ ಬೆಳೆದ ನಿಂತ ನೀಲಿಗಿರಿ ಮರಗಳನ್ನು ಕಡಿದು ಲಾರಿಯಲ್ಲಿ ಲೋಡ್ ಮಾಡಿದ್ದಾರೆ


ಲೋಡ್ ಸಾಗಿಸುವ ವೇಳೆ ಜ್ಯೋತಿಪುರ ಗ್ರಾಮದಲ್ಲಿ ಮನೆಗಳಿಗೆ ಸಂಪರ್ಕದ ವಿದ್ಯುತ್ ಲೈನ್ ಗಳನ್ನು ಕಿತ್ತು ಹೋಗಿವೆ ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ವಾಹನ ತಡೆದಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ರಮ ಮರದ ತುಂಡಗಳನ್ನ ಸಾಗಾಟದ ಬಗ್ಗೆ ದೂರು ನೀಡಿ ಕ್ರಮ ಜರುಗಿಸಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪೋನಾಯಿಸಿದರು. ಆದರೆ ಪ್ರಯೋಜನವಾಗಿಲ್ಲ. ಎಂದು ಗ್ರಾಮಸ್ಥರು ದೂರಿದ್ದಾರೆ.
ಶನಿವಾರ ರಾತ್ರಿ ಸಮಯದಲ್ಲಿ ನೀಲಿಗಿರಿ ಮರದ ತುಂಡಗಳನ್ನು ತುಂಬಿಕೊಂಡು ಹೊರಟ ಅದೇ ಲಾರಿ ಜಗಳೂರು ಮುಖ್ಯ ರಸ್ತೆಯಲ್ಲಿ ಹಾದು ಹೋಗಿದೆ. ಇದರ ಹಿಂದೆಯೇ ಅರಣ್ಯ ಅಧಿಕಾರಿಗಳ ಜೀಪು ಫಾಲೋ ಮಾಡಿಕೊಂಡ ಹೋಗಿದ್ದಾರೆ. ಆದರೆ ಲಾರಿಯನ್ನು ಪರಿಶೀಲಿಸುವ ಗೋಜಿಗಕ್ಕೆ ಹೋಗದಿರುವುದು ಸಹಜವಾಗಿ ಅರಣ್ಯ ಅಧಿಕಾರಿಗಳ ಬಗ್ಗೆ ಅನುಮಾನವನ್ನುಂಟು ಮಾಡಿದೆ.
ನೀಲಿಗಿರಿ ಕಡಿತಲೆಗೆ ಸಾಗಾಟಕ್ಕೆ ಇದ್ದ ನಿರ್ಬಂಧವನ್ನು ಅರಣ್ಯ ಇಲಾಖೆ ತೆಗೆದು ಹಾಕಿರುವುದು ಜಗಳೂರು ತಾಲೂಕಿನಲ್ಲಿ ಬೆಳೆದ ನಿಂತ ನೀಲಿಗಿರಿ ಮರಗಳಿಗೆ ರಕ್ಷಣೆ ಇಲ್ಲವಾಗಿದ್ದ ಕಳ್ಳ ಕಾಕರ ಪಾಲಾಗುತ್ತಿವೆ.
ಜಗಳೂರು ತಾಲೂಕಿನಲ್ಲಿ ನೀಲಿಗಿರಿ ಮರಗಳ ಕಡಿತಲೆ ಮತ್ತು ಅಕ್ರಮ ಸಾಗಾಟ ತಡೆಯುವಲ್ಲಿ ಇಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.
ಜಿಲ್ಲಾ ಅರಣ್ಯಾಧಿಕಾರಿಗಳು ಇತ್ತ ಕಡೆ ಗಮನಹರಿಸಬೇಕು. ನೀಲಿಗಿರಿ ಮರಕಡಿತಲೆ ಮತ್ತು ಸಾಗಾಟ ಮಾಡಿರುವವರನ್ನು ಪತ್ತೆ ಸೂಕ್ತ ಕಾನೂನು‌ ಕ್ರಮ ಜರುಗಿಸಬೇಕೆಂದು ಜಗಳೂರು ತಾಲೂಕಿನ ಪರಿಸರ‌ವಾದಿಗಳು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!