ಲೇಖನ

By shukradeshenews Kannada | online news portal |Kannada news online  august 31 

By shukradeshenews | published on September 4

(ಶಿಕ್ಷಕ ದಿನಾಚರಣೆ ಅಂಗವಾಗಿ ಒಂದು ಕಿರು ಲೇಖನ)
ಶಿಕ್ಷಕ ಮೌಲ್ಯಗಳ ರಕ್ಷಕ

ನಾವು ಎಳೆಯರು ನಾವು ಗೆಳೆಯರು
ಹೃದಯ ಹೂವಿನ ಹಂದರ
ನಾಳೆ ನಾವೇ ನಾಡ ಹಿರಿಯರು
ನಮ್ಮ ಕನಸದೋ ಸುಂದರ
ಕನಸಂಗಳ ಮುದ್ದು ಮಕ್ಕಳನ್ನು ದೇಶದ ಪ್ರಗತಿಗೆ ನಾಂದಿಯಾಗಿ ಪ್ರತಿಭಾನ್ವಿತರಾಗಿ ಬೆಳೆಸಬೇಕಾದ ಹೊಣೆ ಇಂದಿನ ಸಮಾಜ ಮತ್ತು ಶಿಕ್ಷಕರ ಮೇಲಿದೆ
ಮನದಾಸೆ ಫಲಿಸಿ ಮಹದಾನಂದವೂ ಗುರಿ ಸಾಧಿಸೆ ಸಾರ್ಥಕದ ಸ್ಥಾನವೋ
ಬೆವರಿನ ಫಲಗಳು ಬೆಲೆಕಟ್ಟಲಾಗದವು ಮಾನವತೆಯೇ ಮನೋಜ್ತ್ವದ ಹರಿವು
ದುಡ್ಡೇ ದೊಡ್ಡಪ್ಪ ವಿದ್ಯೆ ಅವರಪ್ಪ ಎನ್ನುವ ಮಾತು ವಿದ್ಯೆಯ ಮಹತ್ವವನ್ನು ಸಾರುತ್ತದೆ ಅಂತೆಯೇ ಸಮಾಜದ ಅಭಿವೃದ್ಧಿಗೆ ವಿದ್ಯೆ ಪರ್ಯಾಯ ವಿದ್ಯೆಯಿಂದಲೇ ಅಭಿವೃದ್ಧಿ ಸಾಧ್ಯವೆನ್ನುವುದು ತಿಳಿದ ವಿಷಯವಾಗಿದೆ
ಜೀವನದ ಎಲ್ಲಾ ಹಂತಗಳಲ್ಲಿ ಮೌಲ್ಯ ಅತ್ಯಂತ ಅಗತ್ಯ ಪ್ರಸ್ತುತ ಸಂದರ್ಭದಲ್ಲಿ ಮೌಲ್ಯ ನಷ್ಟ ಸ್ಥಿತಿಯ ಕ್ಷೋಭೆ ಉಂಟು ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ ಶಾಲಾ ಶಿಕ್ಷಣದ ಪ್ರಾರಂಭದಿಂದಲೇ ಮೌಲ್ಯ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಬೇಕಾಗಿದೆ ಶಾಲಾ ದಿನದ ಎಲ್ಲಾ ಚಟುವಟಿಕೆಗಳಲ್ಲಿ ಮೌಲ್ಯ ಶಿಕ್ಷಣವು ಹಾಸು ಒಕ್ಕಾಗಿರಬೇಕೆಂಬ ದೃಷ್ಟಿಕೋನವನ್ನು ಶಿಕ್ಷಕರಾದವರು ಇಟ್ಟುಕೊಳ್ಳಬೇಕಾಗಿದೆ. ಮೌಲ್ಯ ಎಂದರೆ ವ್ಯಕ್ತಿ ಮತ್ತು ಸಮಾಜದ ನಡುವಿನ ಆರೋಗ್ಯಕರ ಸಂಬಂಧಕ್ಕಾಗಿ ಹಾಗೂ ವರ್ತನೆ ಕ್ರಿಯೆ ಹಾಗೂ ವ್ಯಕ್ತಿತ್ವವನ್ನು ನಿಯಂತ್ರಿಸುವ ಬದುಕಿನ ಚಾಲನಾ ಶಕ್ತಿ. ಮಕ್ಕಳಲ್ಲಿ ಮೌಲ್ಯ ದಾರಿತ ಗುಣದ ಬೆಳವಣಿಗೆ ಮತ್ತು ಮೌಲ್ಯದಾರಿತ ವಿಚಾರ ಭಾವನೆಗಳನ್ನು ಉದ್ಧೀಪನಗೊಳಿಸುವುದು ಜ್ಞಾನ ಮತ್ತು ಕೌಶಲ್ಯಗಳ ಜೊತೆಗೆ ಉತ್ತಮ ನಾಗರಿಕನಾಗಲು ಪ್ರೇರಕವಾದ ಅಂಶಗಳೆಲ್ಲವೂ ಮೌಲ್ಯಗಳೇ.
ಮೌಲ್ಯಗಳ ರಕ್ಷಕ ಶಿಕ್ಷಕ ಈ ಮಾತು ಅಕ್ಷರ ಸಹ ನಿಜ ಏಕೆಂದರೆ ಇಂದಿನ ಪೀಳಿಗೆ ತೀರ್ವ ಗತಿಯಲ್ಲಿ ಮುಂದುವರೆದಿದ್ದು ವಿದ್ಯಾರ್ಥಿಗಳಲ್ಲಿ ಅಶಿಸ್ತು, ಅಶಾಂತಿ, ಕೋಪ,ಮತ್ಸರ,ಇವೆಲ್ಲ ಎದ್ದು ಕಾಣುತ್ತದೆ ಏಕಾಗ್ರತೆ ಎಂಬುದು ದೂರದ ಮಾತೇ ಇವೆಲ್ಲವನ್ನೂ ತೊರೆದು ಹಾಕುವ ಕಾರ್ಯ ಶಿಕ್ಷಕರಿಂದ ಆಗಬೇಕಿದೆ
ಗುಟ್ಕಾ,ಪರಾಗ, ಧೂಮಪಾನ,ಮೊಬೈಲ್
ಮುಂತಾದ ದುಶ್ಚಟಗಳ ಹಾವಳಿಯಿಂದ ಇಂದಿನ ಮಕ್ಕಳು ಹದಗೆಡುತ್ತಿದ್ದಾರೆ. ಅವರನ್ನು ದುರಂತದಿಂದ ಪಾರು ಮಾಡಿ ಒಳ್ಳೆಯ ಮಾರ್ಗದತ್ತ ಕೊಂಡಯ್ಯ ಬೇಕಾಗಿದೆ ಆದ್ದರಿಂದ ಅವರಲ್ಲಿ ಮೌಲ್ಯಗಳನ್ನು ಪ್ರಾರಂಭದಿಂದಲೇ ಬೆಳೆಸುವುದು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ


ಶಿಸ್ತು,ವಿದೇಯತೆ, ಸಹಕಾರ,ಪ್ರೀತಿ,ಸ್ವಚ್ಛತೆ, ಸಂಯಮ, ಮುಂತಾದ ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ಪ್ರಯತ್ನ ಮಾಡಬೇಕಾಗಿದೆ
“ಉತ್ತಮ ರಾಷ್ಟ್ರಕ್ಕಾಗಿ ಉತ್ತಮ ಮಕ್ಕಳು ಅವಶ್ಯ”
ಮಕ್ಕಳನ್ನು ಅಜ್ಞಾನದ ಕತ್ತಲಿನಿಂದ ಉಜ್ವಲ ಭವಿಷ್ಯದೆಡೆಗೆ ಕೊಂಡೊಯ್ಯುವ ಕಾರ್ಯ ಶಿಕ್ಷಕರದಾಗಿದೆ.


ಹೊಸ ರಕ್ತ ಹರಿಯುತ್ತಿರುವ ನವೋತ್ಸವ ಚಿಮ್ಮುತ್ತಿರುವ ವಿದ್ಯಾರ್ಥಿ ಸಮೂಹವನ್ನು ಮೌಲ್ಯಗಳಿಂದ ಪ್ರಪಂಚದ ಪ್ರತಿಯೊಂದು ವಿಷಯದಲ್ಲೂ ಕುತೂಹಲ ತೋರುವ ಅವರ ಜ್ಞಾನದಾಹವನ್ನು ತಿಳುವಳಿಕೆ ನೀಡುವುದರ ಮೂಲಕ ಸಂತೃಪ್ತಿಪಡಿಸುತ್ತಾ ಅವರ ಹೃನ್ಮನಗಳನ್ನು ಗೆಲ್ಲುವುದು ಮಹತ್ತರ ಕಾರ್ಯ ಇದು ದಕ್ಷ ಶಿಕ್ಷಕರಿಂದ ಮಾತ್ರ ಸಾಧ್ಯವಾದೀತು. ಪ್ರಜ್ವಲಿಸುವ ದೀಪ ಮಾತ್ರವೆ ಇನ್ನೊಂದು ದೀಪವನ್ನು ಬೆಳಗಲು ಸಾಧ್ಯ ಅಂತೆಯೇ ಸುಜ್ಞಾನಿ ಶಿಕ್ಷಕರು ಮಾತ್ರ ವಿದ್ಯಾರ್ಥಿಗಳಲ್ಲಿ ಮೌಲ್ಯದ ಕಿಡಿಯನ್ನು ಹೊತ್ತಿಸಿ ಪ್ರಜ್ವಲಿಸಬಲ್ಲರು.ವಿದ್ಯೆ ಎಂದರೆ ಕೇವಲ ಉದ್ಯೋಗಕ್ಕಾಗಿ ಅಲ್ಲ ಜೀವನದ ಗುರಿಗಾಗಿ ಎಂಬುದನ್ನು ಮನಗಾಣ‌ ಬೇಕಿದೆ.ಅಕ್ಷರವನ್ನೇ ಅರಿಯದ ಅಕ್ಬರ್ ಬಾದಶಾಹ ಅಕ್ಷರ ಚಕ್ರವರ್ತಿಗಳನ್ನು ಅಧೀನದಲ್ಲಿ ಇಟ್ಟುಕೊಂಡು ಅವರ ವಿದ್ಯೆ ಬುದ್ಧಿಗಳನ್ನು ಬಳಸಿ ಬೃಹತ್ ಭಾರತವನ್ನು ಬಹಳ ಕಾಲ ಆಳಿದ ಸಾಹಸವನ್ನು ಇತಿಹಾಸದಲ್ಲಿ ಕಾಣುತ್ತೇವೆ.


ತುತ್ತಿನ ವಿದ್ಯೆಯ ನೋಲ್ಲೇನಯ್ಯ ಎನ್ನುತ್ತಾ ವಿದ್ಯಾಭ್ಯಾಸಕ್ಕೆ ತಿಲಾಂಜಲಿಯನ್ನಿತ್ತ
ದೇಶಪ್ರೇಮಿ ಬಾಲಗಂಗಾಧರ್ ತಿಲಕ್ ಇವರಿಗೆಲ್ಲ ಮೌಲ್ಯ ಶಿಕ್ಷಣವೇ ದಾರಿಯಾಯಿತು ಇಂತಹ ಬೆಲೆಯುಳ್ಳ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಿ ಪೋಷಿಸಿ ರಕ್ಷಿಸಬೇಕಾಗಿದೆ. ದೈಹಿಕ ಮಾನಸಿಕ ಬೌದ್ಧಿಕ ಪ್ರಗತಿಯೊಡನೆ ಮಗುವನ್ನು ಮಾನವೀಯ ಮೌಲ್ಯಗಳ ಮಹತ್ತಿನತ್ತ ಕೊಂಡೊಯ್ದು ಗುರಿ ತಲುಪಿಸಬೇಕಾಗಿದೆ. ಮೌಲ್ಯ ಶಿಕ್ಷಣದ ತಳಹದಿಯಿಂದ ಹಸನಗೊಳಿಸಬೇಕಾಗಿದೆ ಕೊಳೆಯಾದ ಕನ್ನಡಿಯಲ್ಲಿ ನಮ್ಮ ಮುಖವನ್ನು ನೋಡಿಕೊಳ್ಳಲು ಸಾಧ್ಯವಿಲ್ಲವೂ ಹಾಗೆಯೇ ಮೌಲ್ಯವಿಲ್ಲದ ಶಿಕ್ಷಣ ಕೊಳೆಯಾದ ಕನ್ನಡಿಯಂತೆ ಮಸುಕಾಗುತ್ತದೆ. ಮಾತಿಗೆ ಮೌಲ್ಯ ಬರಬೇಕಾದರೆ ನಾವಾಡುವ ಮಾತಿನಲ್ಲಿ ಹಿತಮಿತವಿರಬೇಕು ಆ ನುಡಿಯಲ್ಲಿ ಸತ್ಯದ ತೆರಳು ತುಂಬಿರಬೇಕು ಇದರಿಂದ ಮುಗ್ಧ ನಿರ್ಮಲ ಸದ್ಭಾವನೆ ಮೂಡುವಂತೆ ಮಾಡಬೇಕು ಒಟ್ಟಿನಲ್ಲಿ ಹೇಳುವುದಾದರೆ ಮನಸ್ಸಿದ್ದರೆ ಮಾರ್ಗ ಎಂಬ ನಾಣ್ಣುಡಿಯಂತೆ ಪ್ರತಿಯೊಬ್ಬರು ಈ ದೆಸೆಯಲ್ಲಿ ಕಾರ್ಯೋನ್ಮುಖರಾಗ ಬೇಕಿದೆ .
ಪ್ರತಿಯೊಬ್ಬ ವಿದ್ಯಾರ್ಥಿಯು ಮಾನವೀಯ ಮೌಲ್ಯಗಳನ್ನು ಗಳಿಸಿಕೊಂಡು ಮಹಾತ್ಮ ಗಾಂಧಿ ಅಂತ ಆಗಲಿ.
ಪ್ರತಿಯೊಬ್ಬ ವಿದ್ಯಾರ್ಥಿಯು ಆಧ್ಯಾತ್ಮಿಕ ಮೌಲ್ಯಗಳನ್ನು ಗಳಿಸಿಕೊಂಡು ವಿವೇಕಾನಂದರಂತಾಗಲಿ.
ಪ್ರತಿಯೊಬ್ಬ ವಿದ್ಯಾರ್ಥಿಯು ಧಾರ್ಮಿಕ ಮೌಲ್ಯಗಳನ್ನು ಗಳಿಸಿಕೊಂಡು ಬುದ್ಧನಂತಾಗಲಿ.
ಪ್ರತಿಯೊಬ್ಬ ವಿದ್ಯಾರ್ಥಿಯು ನೀತಿ ಮೌಲ್ಯಗಳನ್ನು ಬೆಳೆಸಿಕೊಂಡು ಸತ್ಯ ಹರಿಶ್ಚಂದ್ರನಂತಾಗಲಿ.
ಪ್ರತಿಯೊಬ್ಬ ವಿದ್ಯಾರ್ಥಿಯು ದೈವಿ ಮೌಲ್ಯಗಳನ್ನು ಗಳಿಸಿಕೊಂಡು ದೈವಿ ಮಾನವನಾಗಲಿ. ಎಂದು ಆಶಿಸೋಣವೇ

“ಶಿಕ್ಷಕರು ನಾಳಿನ ಶಿಲ್ಪಿಗಳನ್ನು ನಿರ್ಮಿಸುವ ಮಹಾಶಿಲ್ಪಿಗಳು”

    ಎಂ. ಶಶಿಕಲಾ ಸಶಿ
   ಸ.ಕಿ. ಪ್ರ ಶಾಲೆ
ವ್ಯಾಸ ಗೊಂಡನಹಳ್ಳಿ
  ಜಗಳೂರು ತಾ

Leave a Reply

Your email address will not be published. Required fields are marked *

You missed

error: Content is protected !!