Editor:-rajappa vyasagondanahalli

By shukradeshenews Kannada | online news portal |Kannada news online  august 31 

By shukradeshenews | published on September 4

“ವಿದ್ಯಾರ್ಥಿಗಳೇ ನವಭಾರತದ ನಿರ್ಮಾತೃಗಳು” ” ಶಿಕ್ಷಕ ಸದಾ ವಿಧ್ಯಾರ್ಥಿ” “ಮಕ್ಕಳೇ ಮನುಕುಲದ ದೀಪಗಳು” ಇಂತಹ ಮಕ್ಕಳೊಂದಿಗೆ ಕೂಡಿ ಕಲಿಯುವ ಕಲಿಸುವ ಹಾಗೂ ಕಲಿಕೆಯಲ್ಲಿ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡಿರುವ ಸ.ಹಿ. ಪ್ರಾ.ಶಾಲೆ ಭರಮಸಮುದ್ರ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಶ್ರೀದೇವಿ ಕೆ ಜೆ ಇವರಿಗೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ದೊರೆತಿರುವುದು ಪ್ರತಿಭೆಗೆ ಸಂದ ಪ್ರತಿಫಲವಾಗಿದೆ.
2002 ರಿಂದ ವೃತ್ತಿ ಜೀವನ ಪ್ರಾರಂಭಿಸಿದ ಇವರು ಸ.ಹಿ.ಪ್ರಾ.ಶಾಲೆ ಚಿಕ್ಕ ಉಜ್ಜಿನಿ ಜಗಳೂರು (ತಾ) ಇಲ್ಲಿ ಮೂರೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಮಕ್ಕಳ ಕಲಿಕೆಗಾಗಿ
ಶ್ರಮಿಸಿರುತ್ತಾರೆ.

ಶಿಕ್ಷಕಿ ಕಳೆದ 17 ವರ್ಷಗಳಿಂದಲೂ ಸ.ಹಿ.ಪ್ರಾ.ಶಾಲೆ ಭರಮಸಮುದ್ರ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಮಕ್ಕಳ ಕಲಿಕೆಯೇ ಇವರ ಮೊದಲ ಆದ್ಯತೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗಾಗಿ ಮಕ್ಕಳನ್ನು ಪ್ರೋತ್ಸಾಹಿಸುತ್ತಾ,ಇಲಾಖೆಯಲ್ಲಿ
ನೀಡುವ ವಿವಿಧ ತರಬೇತಿಗಳಲ್ಲಿ ತಾಲೂಕು ಮತ್ತು ಕ್ಲಸ್ಟರ್ ಹಂತದ ಸಂಪನ್ಮೂಲ ವ್ಯಕ್ತಿಯಾಗಿ ಗುರುತರ ಸೇವೆ ಸಲ್ಲಿಸಿರುತ್ತಾರೆ.

ಎಲೆಮರೆ ಕಾಯಿಯಂತಿರುವ ಇವರು ಮಕ್ಕಳು ಕಲಿಕಾ ಪ್ರಗತಿಯ ಮೌಲ್ಯಮಾಪನಕ್ಕಾಗಿಯೇ YouTube Channel ಆರಂಭಿಸಿದ್ದು ಆ ಮೂಲಕ ಮಕ್ಕಳ ಕಲಿಕೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ

ಉತ್ತಮ ಸಹ ಶಿಕ್ಷಕಿ ಶ್ರೀ ದೇವಿರವರಿಗೆ ಪ್ರಶಸ್ತಿ ಲಭಿಸಿರುವುದು ತಾಲ್ಲೂಕಿಗೆ ಕೀರ್ತಿ ತಂದಂತಾಗಿದೆ.ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಹಾಗೂ.ತಾಲ್ಲೂಕು ಶಿಕ್ಷಕರ ಸಂಘದ ಅದ್ಯಕ್ಷರಾದ ಹನುಮಂತೇಶ್. ಹಾಗೂ ವಿವಿಧ ಪದಾಧಿಕಾರಿಗಳು ಸೇರಿದಂತೆ ಸ್ನೇಹಿತರು ಶ್ರೀಯುತ ರಾದ ಶಿಕ್ಷಕಿ ಶ್ರೀದೇವಿ ಯವರಿಗೆ ಶುಭಾ ಕೋರಿ ಹಾರೈಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!