By shukradeshenews Kannada | online news portal |Kannada news online  august 31 

By shukradeshenews | published on September 5

ವೈದ್ಯರು ದಾರಿತಪ್ಪಿದರೆ ಒಂದು ಜೀವ ಹೋಗುವುದು  ಒಬ್ಬ ಇಂಜಿನಿಯರ್ ದಾರಿ ತಪ್ಪಿದರೆ ಕಟ್ಟಡ  ಕುಸಿಯುವುದು  ರೈತ ಅವನ ಕಾಯಕ ಮರೆತರೆ ಆಹಾರ ಪರಿಸ್ಥಿತಿ ಎದುರಾಗುವುದು. ಆದರೆ ಶಿಕ್ಷಕರು ದಾರಿ ತಪ್ಪಿದರೆ ಹಿಡಿ ದೇಶವೆ ಅದೋಗತಿಗೆ ಹೋಗುವುದು ಆದ್ದರಿಂದ ನಿಮ್ಮ ಪವಿತ್ರವಾದ ವೃತ್ತಿಗೆ ಗೌರವಿಸಿ ಪ್ರಮಾಣಿಕ   ಸೇವಾಮನೋಭಾವನೆ ಬೆಳೆಸಿಕೊಳ್ಳಿ ಎಂದು ಶಿಕ್ಷಕರಿಗೆ ಶಾಸಕ ಬಿ .ದೇವೆಂದ್ರಪ್ಪ ಕಿವಿ ಮಾತು ಹೇಳಿದರು  

ಜಗಳೂರು ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಡಾ ಸರ್ವಪಲ್ಲಿ ರಾಧಾಕೃಷ್ಣನ್ 135 ನೇ ಜಯಂತಿ ಅಂಗವಾಗಿ  ಶಿಕ್ಷಕ ದಿನಾಚರಣೆ ಉದ್ಗಾಟನೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮವನ್ನುದ್ದೆಶಿಸಿ   ಮಾತನಾಡಿದರು

  ಜಕ್ಕಣ ಚಾರ್ಯ ಜೀವವಿಲ್ಲದ ವಸ್ತು ಕೆತ್ತನೆ  ಮಾಡಿ ಸುಂದರ ಮೂರ್ತಿ ಮಾಡಿದರೆ ಶಿಕ್ಷಕರು ಜೀವವಿರುವ ವಿದ್ಯಾರ್ಥಿಗಳುನ್ನು ಉತ್ತಮವಾಗಿ ಕಟೆದು  ಮಾದರಿ ನಾಗರೀಕ ಸಮಾಜ ಸೃಷ್ಠಿಸುತ್ತಾರೆ .ನೆಲಕ್ಕೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ದೇವನೂರ ಮಹಾದೇವರವರ ಕಾವ್ಯದಂತೆ  ದೊಡ್ಡ ಫಲಕೋಡುವುದು. ಶಿಕ್ಷಕರು ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವ ನಿರ್ಮಾತೃರು . ಗುರುಗಳು ಕೊಟ್ಟ ವಿದ್ಯಾಯಿಂದ ಸಕಾಲ ಸೌಲಭ್ಯಗಳು ಅರಸಿ ಬರುವವು .  ಶಿಕ್ಷಕರು ಬಚಿಟ್ಟಿದ್ದನು  ಬಿಚ್ಚಿಡುವವರೆ ನಿಜವಾದ ಶಿಕ್ಷಕರು  . .ನಾನು ಕ್ಷೇತ್ರದಲ್ಲಿ ಶಿಕ್ಷಣ ಆರೋಗ್ಯಕ್ಕೆ ಮೊದಲು ಆದ್ಯತೆ ನೀಡಿ ಕ್ಷೇತ್ರ ಅಭಿವೃದ್ಧಿಗೆ ಶ್ರಮಿಸಲು  ಬದ್ದವಾಗಿದ್ದೆನೆ. 

ತಾಲ್ಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಅದ್ದೂರಿ ಶಿಕ್ಷಕರ ದಿನಾಚರಣೆ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಾಹಿತ್ಯ ಆಕಾಡೆಮಿ ಪುರಸ್ಕೃತರು ಲೇಖಕ ಕು ವೀರಭದ್ರಪ್ಪ ವಿಶೇಷ ಉಪನ್ಯಾಸ ನೀಡಿದರು

 ಶಿಕ್ಷಕರು ಆದರ್ಶ ಸಮಾಜವನ್ನ ನಿರ್ಮಾಣ ಮಾಡುವಂತ ಆದಮ್ಯ ಚೈತನ್ಯ ಶಿಲ್ಪಿಗಳು  .

ಪ್ರಾಥಮಿಕ ಶಾಲಾ ಶಿಕ್ಷಕರಿಗಿರುವ ಗೌರವ ಕಾಲೇಜು ಅಧ್ಯಾಪಕರಿಗಿಲ್ಲ ಶಿಕ್ಷಕ ವೃತ್ತಿ ಪವಿತ್ರವಾದ ವೃತ್ತಿ. ಶಿಕ್ಷಕರು ವೃತ್ತಿ ಬದ್ದತೆ ಮೆರೆಯಬೇಕು . 

   ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಅವನತಿಗೆ ಹೋಗುವ ದುಸ್ಥಿತಿಗೆ ತಲುಪಿ ಪ್ರಸ್ತುತದಲ್ಲಿ  ಕಾನ್ವೆಂಟ್ ಎಂಬ ಕಂಗ್ಲೀಷ್ ಶಾಲೆಗಳು ಉದ್ಬವಾಗುತ್ತಿವೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು.   ಬಹುತೇಕ ರಾಜಕಾರಣಿಗಳು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ  ವಿದೇಶಕ್ಕೆ ಕಳುಹಿಸುವ ಬದಲು ಗ್ರಾಮೀಣ ಕನ್ನಡ ಶಾಲೆಗಳಲ್ಲಿ ವಿದ್ಯಾಭ್ಯಾಸ ಕೋಡಿಸಿದರೆ ಕನ್ನಡ ಭಾಷೆಗೆ  ನಿಜವಾದ ಗೌರವ   ಕೊಟ್ಟಂತಾಗಲಿದೆ.ಶಿಕ್ಷಣ ಸಚಿವರು ಶಿಕ್ಷಕರು ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಉನ್ನತಿಕರಿಸಲು ಮುಂದಾಗಬೇಕಾಗಿದೆ.

 ಶಿಕ್ಷಕರ ನಿಜವಾದ ಹಬ್ಬ ಶಿಕ್ಷಕರ  ದಿನಾಚರಣೆ .  ಜಗತ್ತಿನ ಅತ್ಯತ್ತಮ ಜ್ಞಾನಿ ಸರ್ವಪಲ್ಲಿ ಡಾ  ರಾಧಕಷ್ಞನ ರವರು ಶಿಕ್ಷಕರಾಗಿ ದೇಶದ ರಾಯಬಾರಿಯಾಗಿ ದೇಶದ ಉಪಾರಾಷ್ಟಪತಿಯಾಗಿ ದೇಶಕ್ಕೆ ಮತ್ತು ಶಿಕ್ಷಕ ವೃಂದಕ್ಕೆ ತನ್ನದೆಯಾದ ಕೊಡುಗೆ ನೀಡಿದ್ದಾರೆ.  ಸಾಮಾನ್ಯರು ಈ ದೇಶದ ಉನ್ನತ‌ ಪದವಿ ಪಡೆಯಲು ಸಾಧ್ಯವಾಗಿರುವುದು ಡಾ ಬಿ ಆರ್ ಅಂಬೇಡ್ಕರ್ ಸಂವಿಧಾನದಿಂದ ಮಾತ್ರ ಸಾದ್ಯ . 

ದೇಶದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಪುಲೆ ಸ್ವಾತಂತ್ರ್ಯ ಪೂರ್ವದಲ್ಲಿ  ಬಡ  ದಲಿತರಿಗೆ ಅಕ್ಷರ ಕಲಿಸಿದ ಮಹಾತಾಯಿ  ಸರ್ಕಾರ ಅವರ  ಜಯಂತಿಯನ್ನು ಸಹ ಆಚರಣೆಗೆ ತರಬೇಕು. ಮತ್ತು ಅಂಬೇಡ್ಕರ್ ಗೆ ಸ್ಪೂರ್ತಿ ನೀಡಿದ ಶಿಕ್ಷಕಿ ಸಾವಿತ್ರಬಾಪುಲೆ ಆದರ್ಶ ಶಿಕ್ಷಕಿಯಾಗಿದ್ದರು.ನಾನು ಕೂಡ ಪ್ರಥಮದಲ್ಲಿ ಆಂದ್ರ ಪ್ರದೇಶದ ಒಂದು ಕುಗ್ರಾಮದಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ ಆ ದಿನಗಳಲ್ಲಿ ಆ ಗ್ರಾಮದಲ್ಲಿಯೆ ವಾಸಿಸುವ ಮೂಲಕ ಮಕ್ಕಳ  ಶೈಕ್ಷಣಿಕ ಚಟುವಟಿಕೆಗಳಲ್ಲಿ ಪ್ರಮಾಣಿಕವಾಗಿ ತೊಡಗಿಸಿಕೊಂಡು ನನಗೆ ಬಂದ ಬಹುಮಾನದ ಹಣದಲ್ಲಿ ಬಡ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ನೆರವು ನೀಡಲು ಅಭಯ ಅಸ್ತ ಚಾಚಿ ಸುಮಾರು ವಿದ್ಯಾರ್ಥಿಗಳ ನೆರವಿಗೆ ಶ್ರಮಿಸಿದ್ದೆನೆ‌.  ಎಂದು ಅವರ ವೃತ್ತಿ ಬದ್ದತೆ ಹಾಗೂ ಸಾಹಿತ್ಯ ಬರವಣಿಗೆ ಬಗ್ಗೆ  ಸ್ಮರಿಸಿಕೊಂಡರು. 

 ಹಳ್ಳಿ ಮೇಸ್ಟ್ರು ಒಂದು ಹಳ್ಳಿ ಚಿತ್ರಣವನ್ನೆ ಬದಲಿಸುವ ಶಕ್ತಿ ಶಿಕ್ಷಕ ವೃಂದಕ್ಕಿದೆ . ನಿಜವಾದ ವಿದ್ಯ ಮತ್ತೂಬ್ಬರ ಸಹಾಯಕ್ಕೆ ನೆರವಾಗುವುದು  .ದೇಶ ಭಕ್ತಿಯನ್ನ ಮೂಡಿಸುವುದು ಒಂದ ವಿದ್ಯೆ ವಿದ್ಯಾ ಜೊತೆಗೆ ವಿವೇಕ ಕಲಿಸುವುದು . ಕ್ಷೇತ್ರದ ಶಾಸಕ ಬಿ ದೇವೆಂದ್ರಪ್ಪ ರವರು ಒಬ್ಬ ಜವಾನರಾಗಿ ಸೇವೆ ಮಾಡಿ ಇದೀಗ ಶಾಸಕರಾಗಿ ಆಯ್ಕೆ ಹಿಂದಿನ ಪರಿಶ್ರಮವಿದೆ ಅವರ ಹೋರಾಟ ಬದುಕಿದೆ ಅವರ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೋಡಿಸುವುದರ ಮೂಲಕ ಮಾದರಿ ಶಾಸಕರ ವ್ಯಕ್ತಿತ್ವ ರಾಜ್ಯದಲ್ಲಿಯೆ ಮಾದರಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯಾದ್ಯಕ್ಷ ಕೆ ಪಿ ಪಾಲಯ್ಯ. ತಹಶೀಲ್ದಾರ ಅರುಣ ಕಾರಗಿ.ಕ್ಷೇತ್ರ ಶಿಕ್ಷಣ ಅಧಿಕಾರಿ ಹಾಲಮೂರ್ತಿ.ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್..ಕಾಂಗ್ರೆಸ್ ಮುಖಂಡ ಕಲ್ಲೇಶ್ ರಾಜ್ ಪಟೇಲ್.  ಬಿ ಆರ್ ಸಿ.  ಡಿ ಡಿ‌.ಹಾಲೇಶಪ್ಪ.ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಹನುಮಂತೇಶ್.ನೌಕರರ ಸಂಘದ ಅದ್ಯಕ್ಷ ಚಂದ್ರಪ್ಪ.ಹಿರಿಯ ಸಾಹಿತಿ ಎನ್ ಟಿ ಎರ್ರಿಸ್ವಾಮಿ.ಸರ್ಕಾರಿ ನೌಕರರ ಸಂಘದ ಮಾಜಿ ಅದ್ಯಕ್ಷ ಇ ಸತೀಶ್.ಸೇರಿದಂತೆ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!