ಜಗಳೂರಿನಲ್ಲಿ ಮಾರ್ಚ್ 10 ರಂದು ಕಾಂಗ್ರೆಸ್ ಪಕ್ಷದ ಪ್ರಜಾದ್ವನಿ ಯಾತ್ರೆ   ಜರುಗಲಿದೆ  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಹಾಗೂ ರಾಜ್ಯ ನಾಯಕರುಗಳ ತಂಡವೆ ಆಗಮಿಸುವರು ಎಂದು ಮಾಜಿ ಶಾಸಕ ಎಚ್ ಪಿ ರಾಜೇಶ್ ಹೇಳಿದರು.                                         ಪಟ್ಟಣದ ಪತ್ರಿಕಾ ಭವನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಹೆಚ್ ಪಿ ರಾಜೇಶ್ ಸುದ್ದಿಗಾರರೊಂದಿಗೆ ಮಾತನಾಡಿದರು ಜಗಳೂರು ಪಟ್ಟಣದ ಬಯಲು ರಂಗಮಂದಿರದಲ್ಲಿ ಮಾರ್ಚ್ 10 ರಂದು  ಕಾಂಗ್ರೆಸ್ ಪಕ್ಷದ ಪ್ರಜಾ ದ್ವನಿ ಯಾತ್ರೆ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮವು ಮಾನ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ನೇತೃತ್ವದಲ್ಲಿ ಐತಿಹಾಸಿಕ ಯಾತ್ರೆಯಾಗಲಿದೆ .  ಈ ಯಾತ್ರೆಯಲ್ಲಿ   ಕಾಂಗ್ರೆಸ್ ಪಕ್ಷದ ಪ್ರಮುಖವಾದ ಯೋಜನೆಗಳಾದ ಪ್ರತಿ ಕುಟುಂಬಕ್ಕೆ 200 ಯುನಿಟ್ ಉಚಿತ   ವಿದ್ಯುತ್  . ಗೃಹ ಲಕ್ಷ್ಮಿ ಯೋಜನೆಡಿಯಲ್ಲಿ ಮಹಿಳೆರಿಗೆ 2000 ಸೇರಿದಂತೆ ಗೃಹ ಜೋತಿ ಯೊಜನೆ   ಪಡಿತರ ಚೀಟಿದಾರರ ಪ್ರತಿ ವ್ಯಕ್ತಿಗೆ  10 ಕೆಜಿ ಅಕ್ಕಿ .ವಿತರಣೆ ಯೋಜನೆಗಳ  ಭರವಸೆ ಗ್ಯಾರಂಟಿ ಕಾರ್ಡ್ ನ್ನು ಜನತೆಗೆ  ವಿತರಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.  .   ಬಿಜೆಪಿ 40 ಪರಿಷಂಟ್ ಸರ್ಕಾರದ ಬಣ್ಣ ಬಯಲಾಗಿದ್ದು ಸರ್ಕಾರದ  ವೈಫಲ್ಯವನ್ನು ಜನರ ಮುಂದಿಡುವ ಉದ್ದೇಶವಾಗಿದೆ . ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಕ್ಷೇತ್ರ ಅಭಿವೃದ್ಧಿ ಹಾಗೂ ರಾಜ್ಯದಲ್ಲಿ  ನೀಡಿದ ಜನಪರ ಕೊಡುಗೆ ಮತ್ತು ಅಧಿಕಾರದ ಅವಧಿಯಲ್ಲಿನ ಕಾರ್ಯಕ್ರಮಗಳ ಬಗ್ಗೆ   ಜನಜಾಗೃತಿ ಮೂಡಿಸುವುದು ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯ ವೈಫಲ್ಯವನ್ನು ಜನರ ಮುಂದೆ ತರಲಾಗುವುದು ಎಂದು  ಹೇಳಿದರು.  ಕಾರ್ಯಕ್ರಮದಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಜನ ಸೇರುವ ನಿರೀಕ್ಷೆಯಿದೆ.ಪ್ರತಿ ಗ್ರಾಪಂ ಗಳಿಂದ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಆಗಮಿಸುವರು.ಪ್ರಜಾದ್ವನಿಯಾತ್ರೆಗೆ ರಾಜ್ಯ ನಾಯಕರುಗಳಾದ   ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್,ಕಾರ್ಯಧ್ಯಕ್ಷರಾದ  ಸಲೀಂ ಆಲಿ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ .ಮಾಜಿ ಸಚಿವ.ಹೆಚ್ ಆಂಜನೇಯ  .ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ. ಸೇರಿದಂತೆ ಇನ್ನು ಮುಂತಾದವರು ಯಾತ್ರೆಯಲ್ಲಿ ಪಾಲ್ಗೊಳ್ಳುವರು .ಎಂದು ತಿಳಿಸಿದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ. ಕೆ.ಪಿ.ಸಿಸಿ.ರಾಜ್ಯ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ ಪಿ ಪಾಲಯ್ಯ.   ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ  ಷಂಷೀರ್ ಅಹ್ಮದ್  ಉಸ್ತುವಾರಿಗಳಾದ ಕಲ್ಲೇಶ್ ರಾಜ್ ಪಟೇಲ್. ಮಾಜಿ ಬ್ಲಾಕ್ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ್ರು . ಮುಖಂಡ ಯು ಜಿ ಶಿವಕುಮಾರ್. ಎಸ್ಸಿ ಘಟಕದ ಅಧ್ಯಕ್ಷ ಮಾಳಮ್ಮನಹಳ್ಳಿ ವೆಂಕಟೇಶ್. ಮುಖಂಡ ಪಲ್ಲಾಗಟ್ಟೆ ಶೇಖರಪ್ಪ. ಮುಖಂಡರಾದ ಗೀರಿಶ್ ಒಡೆಯರ್ ಸೇರಿದಂತೆ ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!