ಜಗಳೂರು ತಾಲ್ಲೂಕಿನ ಕೊಡದ ಗುಡ್ಡದ ರಥೋತ್ಸವ ಬುಧವಾರ ದಿ ಮಾರ್ಚ್ 8 ರಂದು 4.30 ಸಮಯದಲ್ಲಿ ವಿಜ್ರಂಬಣಿಯಿಂದ ಜರುಗಿತು . ಸುಕ್ಷೇತ್ರಕ್ಕೆ ರಾಜ್ಯದ ನಾನಾ ಭಾಗಗಳಿಂದ ಆಪಾರ ಭಕ್ತ ಸಮೂಹ ರಥೋತ್ಸವಕ್ಕೆ ಆಗಮಿಸಿ ಬಾಳೆ ಹಣ್ಣು ಎಸೆಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ವಿವಿಧ ಬಾಗಗಳಿಂದ ಆಗಮಿಸಿದ ಸದ್ಭಕ್ತರಿಗೆ ಅತಿಥಿ ಗೃಹ ಸೇರಿದಂತೆ ಕೆಲ ಗ್ರಾಮೀಣ ಬಾಗದ ಭಕ್ತರು ಪೌಳಿ ಹಾಕಿ ತಂಗಿದ್ದರು. ಜಾತ್ರಮಹೋತ್ಸವಕ್ಕೆ ವಿಶೇಷ ಸಾರಿಗೆ ಸೌಲಭ್ಯಗಳ ವ್ಯವಸ್ಥೆಯೊಂದಿಗೆ ಆಪಾರ ಭಕ್ತರು ಆಗಮಿಸಿದ್ದರು. ಕೊಡದ ಗುಡ್ಡದ ವೀರಭದ್ರೇಶ್ವರ ಸ್ವಾಮಿ ಸಮಿತಿವತಿಯಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಆಯೋಜನೆ ಮಾಡಲಾಗಿತ್ತು .ಒಟ್ಟಾರೆ ರಥೋತ್ಸವಕ್ಕೆ ವಿವಿಧ ಜೆಲ್ಲೆಯಿಂದ ಭಕ್ತರು ಆಗಮಿಸಿ ರಥೋತ್ಸವದಲ್ಲಿ ಭಾಗಿಯಾಗಿ ರಥೋತ್ಸವ ಸಾಗುವ ಸಂದರ್ಭದಲ್ಲಿ ಭಕ್ತರು ಬಾಳೆ ಹಣ್ಣು ಎಸೆಯುವ ಮೂಲಕ ತಮ್ಮ ಇಷ್ಟಾರ್ಥಗಳುನ್ನು ಹಿಡೇರಿಸುವಂತೆ ಶ್ರೀ ವೀರಭದ್ರೇಶ್ವರಸ್ವಾಮಿಯನ್ನು ಬೇಡಿಕೊಳ್ಳುವ ದೃಶ್ಯ ಕಂಡುಬಂದಿತು.ಜಾತ್ರೆಯಲ್ಲಿ ಹಾಲಿ ಶಾಸಕ ಎಸ್.ವಿ ರಾಮಚಂದ್ರ ಸೇರಿದಂತೆ ಮಾಜಿ ಶಾಸಕ ಎಚ್ ಪಿ ರಾಜೇಶ್ ಸೇರಿದಂತೆ ವಿವಿಧ ಗಣ್ಯಮಾನ್ಯರು ಭಾಗಿಯಾಗಿದ್ದರು.