ಮಾಜಿ ಶಾಸಕ ಟಿ . ಗುರುಸಿದ್ದನಗೌಡರವರನ್ನು ಪಕ್ಷದಿಂದ ಉಚ್ಚಾಟನೆ
Editor m rajappa vyasagondanahalli
By shukradeshenews Kannada | online news portal |Kannada news online September 6
By shukradeshenews | published on September 5
ಜಗಳೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಟಿ ಗುರುಸಿದ್ದನಗೌಡ ಹಾಗೂ ಅವರ, ಕುಟುಂಬದ ಪುತ್ರರುನ್ನು ಉಚ್ಛಾಟಿಸಿದ ಬಿಜೆಪಿ
–
ದಾವಣಗೆರೆ: ಹಿರಿಯ ಬಿಜೆಪಿ (BJP) ಮುಖಂಡ ಹಾಗೂ ಮಾಜಿ ಶಾಸಕ ಟಿ.ಗುರುಸಿದ್ದನಗೌಡ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಗಳೂರು ಕ್ಷೇತ್ರದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಇದರಿಂದಾಗಿ ಪಕ್ಷದ ಅಭ್ಯರ್ಥಿ ಎಸ್.ವಿ ರಾಮಚಂದ್ರ ಅವರ ಸೋಲಿಗೆ ಕಾರಣರಾಗಿದ್ದಾರೆ ಎನ್ನುವ ಆರೋಪ ಅವರ ಮೇಲಿತ್ತು. ಇದೇ ಕಾರಣಕ್ಕೆ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.ಎಂದು ಬಿಜೆಪಿ ರಾಜ್ಯ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಸೂಚನೆ ಮೇರೆಗೆ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತರಾಜ್ ಪಾಟೀಲ್ ಅವರು ಉಚ್ಛಾಟನೆ ಮಾಡಿದ್ದಾರೆ.
ಜಗಳೂರು ಕ್ಷೇತ್ರದ ಮಾಜಿ ಶಾಸಕರಾಗಿರುವ ಗುರುಸಿದ್ದನಗೌಡ ಅವರು ಚೆಕ್ ಡ್ಯಾಂ ಸರದಾರರು ಎಂದೇ ಖ್ಯಾತಿ ಗಳಿಸಿದ್ದರು. ಅಲ್ಲದೇ ಜಲ್ಲೆಯಲ್ಲಿ ವಾಜಪೇಯಿ ಎಂದೇ ಹೆಸರಾಗಿದ್ದರು.
ಇದೀಗ ಬರುವ ಲೋಕಸಭಾ ಚುನಾವಣೆಗೆ ದಾವಣಗೆರೆ ಕ್ಷೇತ್ರದಿಂದ ಅವರ ಮಗ ಡಾ.ಟಿ.ಜಿ. ರವಿಕುಮಾರ್ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಮಾಜಿ ಶಾಸಕರು ಸೇರಿದಂತೆ ಟಿ.ಜಿ ಅರವಿಂದಕುಮಾರ್, ಟಿ.ಜಿ. ರವಿಕುಮಾರ್ ಹಾಗೂ ಟಿ.ಜಿ ಪವನಕುಮಾರ್ ಈ ಮೂವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ..
. ಅಲ್ಲದೇ ಚುನಾವಣೆಯಲ್ಲಿ ಪುತ್ರನನ್ನು ಪಕ್ಷೇತರವಾಗಿ ನಿಲ್ಲಿಸಿದರೂ ಉಚ್ಛಾಟನೆ ಮಾಡಿಲ್ಲ. ರವಿಕುಮಾರ್ ಅವರು ಲೋಕಸಭಾ ಚುನಾವಣೆ ಟಿಕೆಟ್‍ಗೆ ಅಡ್ಡಿ ಬರುತ್ತಾರೆ ಎಂದು ಇಡೀ ಕುಟುಂಬವನ್ನೇ ಸಂಸದ ಜಿ.ಎಂ.ಸಿದ್ದೇಶ್ವರ್ ಉಚ್ಛಾಟನೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
–